ಬ್ರೇಕಿಂಗ್ ನ್ಯೂಸ್
16-09-24 09:12 pm Mangalore Correspondent ಕರಾವಳಿ
ಮಂಗಳೂರು, ಸೆ.16 : ಅತ್ತೆಯ ಜೀವ ಉಳಿಸಲು ಲಿವರ್ ದಾನ ಮಾಡಲು ಹೋದ ಉಪನ್ಯಾಸಕಿಯೊಬ್ಬರು ತನ್ನ ಜೀವವನ್ನೇ ಕಳಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದ್ದು ನಾಲ್ಕು ವರ್ಷದ ಮಗು ಅನಾಥವಾಗಿದೆ. ಗಂಡ ಮಂಗಳೂರಿನ ಪ್ರಸಿದ್ಧ ಲೆಕ್ಕ ಪರಿಶೋಧಕ ಶಾಕ್ ಆಗುವಂತಾಗಿದೆ.
ನಗರದ ಕರಂಗಲ್ಪಾಡಿ ನಿವಾಸಿ, ಮಂಗಳೂರಿನ ಪ್ರಸಿದ್ದ ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ಪತ್ನಿ, ವೃತ್ತಿಯಲ್ಲಿ ಉಪನ್ಯಾಸಕಿಯಾದ ಅರ್ಚನಾ ಕಾಮತ್(33) ಮೃತ ದುದೈವಿ.
ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ತಂದೆ ಸಿ.ಎ ಸತೀಶ್ ಕಾಮತ್ ಅವರ ಸಹೋದರನ ಪತ್ನಿಗೆ ಲಿವರ್ ಸಮಸ್ಯೆ ಇದ್ದುದರಿಂದ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಲಿವರ್ ಕಸಿ ಮಾಡಲು ನಿರ್ಧರಿಸಲಾಗಿತ್ತು. ಹಲವರು ಲಿವರ್ ನೀಡಲು ಬಂದರಾದರೂ, ಮ್ಯಾಚ್ ಆಗದ ಕಾರಣ ಚಿಕಿತ್ಸೆಗೆ ಹಿನ್ನಡೆಯಾಗಿತ್ತು. ಈ ವೇಳೆ ಅರ್ಚನಾ ಕಾಮತ್ ತನ್ನ ಲಿವರ್ ಮ್ಯಾಚ್ ಆಗುತ್ತಾ ಎಂದು ಟೆಸ್ಟ್ ಮಾಡಲು ಮಂದಾಗಿದ್ದರು. ಬಳಿಕ ವೈದ್ಯರ ಸಲಹೆಯಂತೆ ಅರ್ಚನಾ ತನ್ನ ಕುಟುಂಬಸ್ಥರನ್ನು ಒಪ್ಪಿಸಿ ಲಿವರ್ ದಾನಕ್ಕೆ ನಿರ್ಧರಿಸಿದ್ದರು. ನಿಗದಿತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಲಿವರ್ ಕಸಿ ಮಾಡಲಾಗಿತ್ತು.
ಏಕಕಾಲದಲ್ಲಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಲಿವರ್ ಕಸಿ ಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆ ನಂತರ ಅರ್ಚನಾ ಕಾಮತ್ ಆರೋಗ್ಯದಿಂದಿದ್ದರು. ಮೂರು ದಿನಗಳ ಆಸ್ಪತ್ರೆ ವಾಸದ ಬಳಿಕ ಅಪೋಲೊ ಆಸ್ಪತ್ರೆಯಿಂದ ಎರಡು ದಿನಗಳ ಹಿಂದೆ ಮಂಗಳೂರಿನ ಮನೆಗೆ ಹಿಂತಿರುಗಿದ್ದರು. ಈ ನಡುವೆ, ಅರ್ಚನಾ ಕಾಮತ್ ಅವರ ಆರೋಗ್ಯದಲ್ಲಿ ಸಮಸ್ಯೆ ಕಂಡಿದ್ದರಿಂದ ಮತ್ತೆ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಮಂಗಳೂರಿನಿಂದ ಬೆಂಗಳೂರು ತಲುಪುವಷ್ಟರಲ್ಲಿ ಅರ್ಚನಾ ದೇಹದಲ್ಲಿ ಬಹು ಅಂಗಾಂಗ ವೈಪಲ್ಯ ಆಗಿದ್ದು ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತದೇಹವನ್ನು ಕರಂಗಲ್ಪಾಡಿಯಯ ನಿವಾಸಕ್ಕೆ ತಂದು ವಿಧಿ ವಿಧಾನ ನೆರವೇರಿಸಿದ ಬಳಿಕ ಕುಂದಾಪುರದ ಕೋಟೆಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅರ್ಚನಾ ಮೂಲತಃ ಕುಂದಾಪುರದವರಾಗಿದ್ದು ಮಂಗಳೂರಿಗೆ ಮದುವೆಯಾಗಿ ಬಂದಿದ್ದರು. ಆ ಕರ್ಣನಂತೆ, ನೀ ದಾನಿಯಾದೆ ಇನ್ನೊಂದು ಜೀವಕ್ಕೆ ನೀ ಆಧಾರವಾದೆ ಎಂಬ ವಿಷ್ಣುವರ್ಧನ್ ನಟನೆಯ ಸಿನಿಮಾದ ಹಾಡಿನಂತೆ ಅರ್ಚನಾ ಕಾಮತ್ ಜೀವವೂ ಇನ್ನೊಬ್ಬರಿಗೆ ಜೀವ ಕೊಟ್ಟು ತನ್ನ ಜೀವ ತ್ಯಾಗ ಮಾಡಿದಂತಾಗಿದೆ.
33 year old teacher dies after donation liver to mother in law in Mangalore. The deceased has been identified as Archana Kamath from Karangalpady.
24-08-25 05:30 pm
Bangalore Correspondent
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 10:49 pm
Mangalore Correspondent
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
24-08-25 10:33 pm
HK News Desk
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm
MLA Veerendra Puppy, ED Raid: ಬೆಟ್ಟಿಂಗ್ ದಂಧೆ...
24-08-25 12:41 pm