ಬ್ರೇಕಿಂಗ್ ನ್ಯೂಸ್
09-09-24 10:08 pm Mangalore Correspondent ಕರಾವಳಿ
ಮಂಗಳೂರು, ಸೆ.9: ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ಸಿಕ್ಕಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಈ ಬಗ್ಗೆ ಮಾಧ್ಯಮಗಳಿಗೆ ತಪ್ಪು ಮಾಹಿತಿಯನ್ನು ನೀಡಲಾಗಿದೆ. ತುಳು ಲಿಪಿಯನ್ನು ಯುನಿಕೋಡ್ ಗೆ ಸೇರಿಸುವ ಕಾರ್ಯ ಶೇಕಡಾ 80 ರಷ್ಟು ಮಾತ್ರ ಪೂರ್ಣಗೊಂಡಿದೆ. ಇನ್ನಷ್ಟು ತಾಂತ್ರಿಕ ಕಾರ್ಯಗಳು ಬಾಕಿ ಇವೆ. ಈಗ ತುಳು ತಿಗಲಾರಿ ಲಿಪಿಯನ್ನು ಯುನಿಕೋಡ್ ಸೇರ್ಪಡೆ ಮಾಡಿರುವುದು. ತುಳು ತಿಗಳಾರಿ ಲಿಪಿಗೂ ತುಳು ಲಿಪಿಗೂ ವ್ಯತ್ಯಾಸ ಇದೆ ಎಂದು ತುಳು ಲಿಪಿಯನ್ನು ಯುನಿಕೋಡ್ ತಂತ್ರಾಂಶಕ್ಕೆ ಸೇರ್ಪಡೆ ಮಾಡಲು ಪ್ರಯತ್ನಿಸುತ್ತಿರುವ ತುಳು ಅಕಾಡೆಮಿ ಮಾಜಿ ಸದಸ್ಯ ಡಾ.ಆಕಾಶ್ ರಾಜ್ ಜೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತುಲು ಲಿಪಿಯನ್ನು ಯುನಿಕೋಡ್ ಗೆ ಸೇರಿಸುವ ಕಾರ್ಯ 2017 ರಲ್ಲಿ ಆರಂಭಿಸಲಾಗಿತ್ತು. ಅದಕ್ಕೂ ಸುಮಾರು 10 ವರ್ಷಗಳಷ್ಟು ಮೊದಲು ಬ್ರಾಹ್ಮಿ ಲಿಪಿ ಮೂಲದ ಉತ್ತರ ಕನ್ನಡ ಭಾಗದಲ್ಲಿ ಪ್ರಚಲಿತ ಇರುವ ಇನ್ನೊಂದು ಲಿಪಿ ತಿಗಳಾರಿ ಲಿಪಿಯನ್ನು ಯುನಿಕೋಡ್ ಗೆ ಸೇರ್ಪಡಿಸಲು ವೈಷ್ಣವಿ ಮೂರ್ತಿ ಮತ್ತು ವಿನೋದ್ ರಾಜ್ ಅವರು ಆರಂಭಿಸಿದ ಕಾರ್ಯಕ್ಕೆ "ಯುನಿಕೋಡ್ ಕನ್ಸೊರ್ಟಿಯಮ್ ಕ್ಯಾಲಿಫೋರ್ನಿಯ"ದಿಂದ ಒಪ್ಪಿಗೆ ನೀಡಲಾಗಿದೆ. ಆ ಲಿಪಿಯನ್ನು "ತುಳು-ತಿಗಳಾರಿ" ಲಿಪಿ ಎಂದು ಕರೆಯಲಾಗುತ್ತದೆ. ಪ್ರಸ್ತುತ ಬಳಕೆಯಲ್ಲಿರುವ ತುಳು ಲಿಪಿಗೂ ತುಳು ತಿಗಳಾರಿ ಲಿಪಿಗೂ ಸುಮಾರು 25 ಶೇಕಡಾ ವ್ಯತ್ಯಾಸ ಇದೆ. ಕನ್ನಡ ಮತ್ತು ತೆಲುಗು ಲಿಪಿಗಳಿದ್ದಂತೆ ಹಲವು ಸಾಮ್ಯತೆಗಳಿರುವ ಎರಡು ಪ್ರಕಾರದ ಲಿಪಿಗಳು ತುಳು ಮತ್ತು ತುಳು-ತಿಗಳಾರಿ ಲಿಪಿಗಳು. ತುಳು ಅಕಾಡೆಮಿ ಯುನಿಕೋಡ್ ಕೇಳಿದ್ದು ಈಗಿರುವ ತುಳು ಭಾಷೆಗೆ, ವೈಷ್ಣವಿ ಮೂರ್ತಿ (ತುಳು ತಿಗಳಾರಿ) ಕೇಳಿದ್ದು ತಾಳೆಗರಿ ರೂಪದ ಸಂಸ್ಕೃತ ಸಾಹಿತ್ಯಕ್ಕೆ.
ಹಾಗೆಯೇ ಯು. ಬಿ. ಪವನಜ ಅವರು ತುಳು ಲಿಪಿಯನ್ನು ಯುನಿಕೋಡ್ ಗೆ ಸೇರಿಸುವಲ್ಲಿ 2001ರಲ್ಲಿ ಕೇವಲ ಪ್ರಸ್ತಾವನೆ ಮಾತ್ರ ಕಳುಹಿಸಿರುತ್ತಾರೆ. ತದನಂತರ ಯಾವುದೇ ಕೆಲಸವನ್ನು ಮಾಡಿರುವುದಿಲ್ಲ. 2017 ರಲ್ಲಿ ತುಳು ಸಾಹಿತ್ಯ ಅಕಾಡೆಮಿಯಿಂದ ಡಾ.ಆಕಾಶ್ ರಾಜ್ ಜೈನ್ ಅವರ ನೇತೃತ್ವದಲ್ಲಿ "ಜೈ ತುಳುನಾಡು" ಸಂಘಟನೆಯ ಯುವಕರ ಜೊತೆಗೂಡಿ ಅಂದಿನ ಮುಖ್ಯಮಂತ್ರಿ ಯಡಿಯೂಪ್ಪರವರ ಇ - ಗರ್ವನೆನ್ಸ್ ಕಾರ್ಯದರ್ಶಿಯಾಗಿದ್ದ ಬೇಳೂರು ಸುದರ್ಶನರವರ ಸಹಕಾರ ಪಡೆದು ತುಳು ಯುನಿಕೋಡ್ ಸೇರ್ಪಡೆಗೆ ಪ್ರಯತ್ನ ನಡೆದಿತ್ತು. ಅಂದಿನ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ರವರು ಈ ಕಾರ್ಯಕ್ಕೆ ಬೆನ್ನೆಲುಬಾಗಿದ್ದರು. 2017ರ ಮುನ್ನ 2001 ರಿಂದ ತುಳು ಲಿಪಿ ಅಧ್ಯಯನ ಪರಿಷ್ಕರಣೆ ಕಾರ್ಯವು ದಿl ವೆಂಕಟರಾಜ ಪುಣಿಂಚಿತ್ತಾಯರಿಂದ ಹಿಡಿದು ಅವರ ಶಿಷ್ಯ ರಾಧಾಕೃಷ್ಣ ಬೆಳ್ಳೂರು ಹಾಗೂ ವಿದ್ವಾಂಸರಾದ ವಿಘ್ನರಾಜ್ ಧರ್ಮಸ್ಥಳ, ಎಸ್.ಎ. ಕೃಷ್ಣಯ್ಯ ಸೇರಿ ಇನ್ನೂ ಹಲವರು ಹಾಗೂ 2017 ಕ್ಕೂ ಹಿಂದಿನ ತುಳು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಶ್ರಮದಿಂದ ಆಗಿರುವಂತದ್ದು.
ಪ್ರಸ್ತುತ ತುಳು ಲಿಪಿ ಯುನಿಕೋಡ್ ಸೇರ್ಪಡೆ ಸಂಪೂರ್ಣಗೊಳಿಸಲು ಇನ್ನೂ ಸ್ವಲ್ಪ ಕೆಲಸ ಬಾಕಿಯಿದ್ದು, ಆಸಕ್ತರು ಆಗಿರುವ ಕಾರ್ಯದ ಸಂಪೂರ್ಣ ವಿವರವನ್ನು 'ಯುನಿಕೋಡ್ ಕನ್ಸೊರ್ಟಿಯಮ್' ವೆಬ್ ಸೈಟ್ ನಲ್ಲಿ ತುಳು ಯುನಿಕೋಡ್ ವಿಚಾರ ಆಯ್ಕೆ ಮಾಡಿ ತಿಳಿದುಕೊಳ್ಳಬಹುದು ಎಂದು ತುಳು ಅಕಾಡೆಮಿ ಮಾಜಿ ಸದಸ್ಯ ಡಾl ಆಕಾಶ್ ರಾಜ್ ಜೈನ್ ತಿಳಿಸಿದ್ದಾರೆ.
Mangalore Tulu lipi has not been added to Unicode says Dr Akash Jain, says media has published fake news on it. News went viral stating Tulu script has achieved a significant milestone by being added to Unicode.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 07:15 pm
Mangalore Correspondent
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
Paakashala Resturant, Mangalore: ಮಂಗಳೂರಿನಲ್ಲು...
05-05-25 11:22 am
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm