ಬ್ರೇಕಿಂಗ್ ನ್ಯೂಸ್
08-07-24 06:13 pm Mangalore Correspondent ಕರಾವಳಿ
ಮಂಗಳೂರು, ಜುಲೈ 8: ಹಿಂದುಗಳು ಕೆಟ್ಟವರೆಂದು ಇಡೀ ಜಗತ್ತಿನಲ್ಲಿ ಬಿಂಬಿಸಲು ಈತ ಈ ರೀತಿ ಮಾತನಾಡಿದ್ದಾನೆ. ಯಾರಾದ್ರೂ ಪಾರ್ಲಿಮೆಂಟ್ ಒಳಗಡೆಯೇ ಹೋಗಿ ರಾಹುಲನ ಕಪಾಳಕ್ಕೆ ಹೊಡೆಯಬೇಕು. ಈತ ಕೇರಳಕ್ಕೆ ಹೋದರೆ ಸೆಕ್ಯುಲರ್, ತಮಿಳುನಾಡಿನಲ್ಲಿ ನಾಸ್ತಿಕ, ಗುಜರಾತ್ ಹೋದರೆ ಶಿವಭಕ್ತ, ಈಶಾನ್ಯ ರಾಜ್ಯಕ್ಕೆ ಹೋದರೆ ಕ್ಯಾಥೊಲಿಕ್ ಆಗುತ್ತಾನೆ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಿಂದುಗಳ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆಂದು ಬಿಜೆಪಿ ವತಿಯಿಂದ ಕಾವೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭರತ್ ಶೆಟ್ಟಿ ಮಾತನಾಡಿದರು. ಹಿಂದುಗಳ ಬಗ್ಗೆ ಏನು ಮಾತಾಡಿದ್ರೂ ಕೇಳುತ್ತಾರೆ, ಇವರನ್ನು ವಿಭಜನೆ ಮಾಡಿ ಓಟು ಪಡೆಯಬಹುದು ಅನ್ನುವ ಭಾವನೆ ಇವರಲ್ಲಿದೆ. ರಾಹುಲನ್ನು ಸಮರ್ಥಿಸಲು ಇಲ್ಲಿನ ಕೆಲವು ನಾಯಕರು ಸ್ವಾಮೀಜಿಯವರು ರಾಜಕೀಯದಲ್ಲಿ ಮೂಗು ತೂರಿಸಬಾರದು ಅಂಥ ಹೇಳುತ್ತಾರೆ. ಧರ್ಮದಲ್ಲಿ ಮೂಗು ತೂರಿಸಿದ್ದು ರಾಹುಲ್ ಗಾಂಧಿ. ಹಿಂದುಗಳನ್ನು ಕೆಟ್ಟವರೆಂದು ಸಮಾಜದಲ್ಲಿ ಬಿಂಬಿಸಲು ಹೊರಟವನನ್ನು ಇಲ್ಲಿನವರು ಬೆಂಬಲಿಸುತ್ತಿದ್ದಾರೆ.
ಈತನ ಜೊತೆಗೆ ಕೂತಿರುವುದು ಯಾರಂದ್ರೆ, ಅಸ್ಸಾಮಿನ ಜಮಾತೆ ಹಿಂದ್ ನಾಯಕ ಬದ್ರುದ್ದೀನ್ ಅಜ್ಮಾಲ್. ಹಿಂದುಗಳ ವಿರುದ್ಧ ಸಮರ ಸಾರಬೇಕೆಂದು ಹೇಳಿರುವ ಬದ್ರುದ್ದೀನ್ ಅಜ್ಮಾಲ್ ಈತನಿಗೆ ಆಪ್ತ. ಇವನ ಪಕ್ಷದ್ದೇ ಐವರು ಸಂಸದರಿದ್ದು ಮುಸ್ಲಿಂ ಲೀಗ್ ಕೇರಳದಲ್ಲಿ ನಡೆಸಿದ್ದ ಸಭೆಯಲ್ಲಿ ಹಿಂದುಗಳನ್ನು ತುಂಬಿದ ಸಭೆಯಲ್ಲಿ ನೇತು ಹಾಕಬೇಕೆಂದು ಕರೆ ಕೊಡುತ್ತಾರೆ. ಆಗ ಇವನಿಗೆ ಏನೂ ಅನಿಸಿಲ್ಲ. ಈಗ ಹಿಂದುಗಳು ಹಿಂಸಾಕೋರರು ಹೇಳುವ ಧೈರ್ಯ ಬಂದಿದೆ. ಯಾಕೆ ಮುಸ್ಲಿಮರ ಬಗ್ಗೆ ಮಾತಾಡುವುದಿಲ್ಲ.
ನೂಪುರ್ ಶರ್ಮಾ ಎನ್ನುವ ಯುವತಿ ಒಂದು ಮಾತು ಹೇಳಿದ್ದಕ್ಕೆ ಹಿಂದುಗಳು ಬಹುಸಂಖ್ಯಾತರಿರುವ ದೇಶದಲ್ಲಿ ಆಕೆ ಸೆಕ್ಯುರಿಟಿ ಇಟ್ಟುಕೊಂಡು ಮಾರ್ಕೆಟಿಗೆ ಹೋಗುವ ಸ್ಥಿತಿ ಬಂದಿದೆ. ಮನೆಯಿಂದ ಹೊರಗೆ ಬಾರದ ಸ್ಥಿತಿಯಾಗಿದೆ. ಕನ್ನಯ್ಯ ಲಾಲನ್ನು ಕೊಂದಿದ್ದು ಮುಸ್ಲಿಮರು ಅಂತ ಹೆಸರು ಹೇಳುವುದಕ್ಕೆ ಇವರೇಕೆ ಹೆದರುತ್ತಾರೆ. ಈಗ ಹಿಂದುಗಳು ಬೇರೆ, ಹಿಂದುತ್ವ ಬೇರೆ ಎಂದು ಹೇಳುತ್ತಾನೆ. ವಿವೇಕಾನಂದರ ಹಿಂದುತ್ವ ಬೇರೆ, ವೇದಗಳ ಹಿಂದುತ್ವ ಬೇರೆ. ಆರೆಸ್ಸೆಸ್ ಹಿಂದುತ್ವ ಬೇರೆಯೆಂದು ಬಾಯಿಗೆ ಬಂದ ರೀತಿ ಬೊಗಳುತ್ತಾನೆ. ಇವನೆಂದೂ ಮುಸ್ಲಿಮರಲ್ಲಿರುವ ಶಿಹಾಬಿಗಳ, ಸುನ್ನಿಗಳ, ಶಿಯಾಗಳ, ವಹಾಬಿಗಳ ಇಸ್ಲಾಮ್ ಬೇರೆ ಎಂದು ಪ್ರಶ್ನೆ ಮಾಡಲ್ಲ. ಇದೊಂದು ಓಟ್ ಬ್ಯಾಂಕ್ ಪಾಲಿಟಿಕ್ಸ್. ಹಿಂದುಗಳನ್ನು ಕೆಣಕಿ ಮುಸ್ಲಿಮರ ಓಟು ಗಿಟ್ಟಿಸುವುದು.
ಸಂಸತ್ತಿನಲ್ಲಿ 99 ಸೀಟು ಬಂದಿದ್ದೇ ಈತನಿಗೆ ಏನೋ ದೊಡ್ಡ ಸಾಧನೆ ಮಾಡಿದಂತೆ ಆಗಿದೆ. ಅಯೋಧ್ಯೆಯನ್ನು ದುರದೃಷ್ಟದಿಂದ ಸೋತಿದ್ದೇ ನಾವು ಎಲ್ಲವನ್ನೂ ಸೋತಂತಾಗಿದ್ದೇವೆ. ಅದನ್ನೇ ಮುಂದಿಟ್ಟು ಆಡ್ವಾಣಿಯವರು ಮಾಡಿದ್ದ ಅಯೋಧ್ಯೆ ಚಳವಳಿಯನ್ನೇ ನಾವು ಸೋಲಿಸಿದ್ದೇವೆ ಎಂದು ಹೇಳುತ್ತಿದ್ದಾನೆ. ಎಷ್ಟು ಸೊಕ್ಕು ಇವನಿಗೆ. ರಾಣಾ ಪ್ರತಾಪ, ಶಿವಾಜಿಯೂ ಇದೇ ಸಮಾಜದಲ್ಲಿ ಹುಟ್ಟಿದ್ದು ಎನ್ನುವುದನ್ನು ಮರೆಯಬೇಡಿ. ರಾಜಕೀಯ ಇರುವಂಥದ್ದೇ. ಯಾವಾಗೆಲ್ಲ ಅಗತ್ಯ ಬೀಳುತ್ತೋ ಆವಾಗೆಲ್ಲ ಹಿಂದು ಎದ್ದು ನಿಂತು ಶಸ್ತ್ರ ಪೂಜೆ ಮಾಡಿರುವ ಉದಾಹರಣೆ ಇದೆ. ಅದನ್ನು ಮಾಡಬೇಕಾಗುತ್ತದೆ ಎಂದು ನೆನಪಿಸುತ್ತೇನೆ.
ಇಲ್ಲೊಬ್ಬ ಸಚಿವ ಪ್ರಿಯಾಂಕ ಖರ್ಗೆ ಹೇಳುತ್ತಾನೆ, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದ ಹೇಳೇ ಇಲ್ಲ ಅಂತ. ಇವರದೇ ಸರಕಾರದ ಫಾರೆನ್ಸಿಕ್ ವರದಿಯಲ್ಲೇ ಆ ರೀತಿ ಘೋಷಣೆ ಕೂಗಿದ್ದು ಹೌದೆಂದು ರಿಪೋರ್ಟ್ ಬಂದಿತ್ತು. ಯಾಕೆ ಒಬ್ಬ ಕಾಂಗ್ರೆಸಿಗನೂ ಇದರ ಬಗ್ಗೆ ಮಾತೆತ್ತುವುದಿಲ್ಲ. ಶಿವನ ಫೋಟೋ ಹಿಡಿದು ರಾಹುಲ್, ಶಿವ ಎಡಗೈಯಲ್ಲಿ ತ್ರಿಶೂಲ ಹಿಡಿದಿದ್ದಾನೆ ಎಂದು ಹೇಳಿ ಅದಕ್ಕೊಂದು ವಿಶ್ಲೇಷಣೆ ಕೊಟ್ಟಿದ್ದಾನೆ. ಇವನಿಗೆ ಗೊತ್ತಿಲ್ಲ. ಶಿವ ಮೂರನೇ ಕಣ್ಣನ್ನು ತೆರೆದರೆ ಭಸ್ಮನಾಗುತ್ತಾನೆ. ಇವ ಎಂಥಾ ವ್ಯಕ್ತಿಯಂದ್ರೆ, ಕೇರಳದಲ್ಲಿ ಹೋದರೆ ಸೆಕ್ಯುಲರ್ ಆಗುತ್ತಾನೆ. ತಮಿಳುನಾಡಿನಲ್ಲಿ ನಾಸ್ತಿಕನಾದರೆ, ಗುಜರಾತಿಗೆ ಹೋದಾಗ ಶಿವ ಭಕ್ತನಾಗುತ್ತಾನೆ. ಈಶಾನ್ಯಕ್ಕೆ ಹೋದರೆ ಕ್ಯಾಥೊಲಿಕ್ ಆಗುತ್ತಾನೆ. ಇವನೆಂಥ ವ್ಯಕ್ತಿ, ಈತನನ್ನು ಯಾವ ಶಬ್ದಗಳಲ್ಲಿ ಸಂಬೋಧಿಸಬಹುದು ಅಂತ ನೀವೇ ಊಹಿಸಿಕೊಳ್ಳಿ ಎಂದರು ಭರತ್ ಶೆಟ್ಟಿ.
ಈ ರೀತಿಯ ವ್ಯಕ್ತಿಗೆ ಹಾಲೆರೆದು ಪೋಷಿಸಿದರೆ, 10-15 ವರ್ಷಗಳಲ್ಲಿ ಹಿಂದುಗಳು ಮನೆಯಿಂದ ಹೊರಕ್ಕೆ ಕಾಲಿಡಲು ಆಗದ ಸ್ಥಿತಿಯಾಗಲಿದೆ. ಆಗ ಕಾಂಗ್ರೆಸಿನಲ್ಲಿರುವ ಹಿಂದುಗಳೆಲ್ಲ ಆರೆಸ್ಸೆಸ್ ಬಳಿ ಬಂದು ಗೋಗರೆಯುವ ಸ್ಥಿತಿ ಆದೀತು. ಕೇರಳದಲ್ಲಿ ಈಗಲೇ ಅಂತಹ ಸ್ಥಿತಿ ಬಂದಿದ್ದು, ಕಾಂಗ್ರೆಸ್ ನಾಯಕರೆಲ್ಲ ಪಕ್ಷ ಬಿಟ್ಟು ತಮ್ಮನ್ನು ಕಾಪಾಡಿ ಎಂದು ಆರೆಸ್ಸೆಸ್ ಮುಂದೆ ಬಂದಿದ್ದಾರೆ. ನಮ್ಮ ಹೆಣ್ಮಕ್ಕಳನ್ನು ರಾಕ್ಷಸರು ಒಯ್ಯುತ್ತಿದ್ದಾರೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ.
ರಾಹುಲ್ ಗಾಂಧಿಗೆ ಯಾರಾದ್ರೂ ಕಪಾಳಕ್ಕೆ ಹೊಡೆಯಲೇಬೇಕು, ಈ ಕಡೆ ಬಂದರೆ ನಾವು ನೋಡಿಕೊಳ್ಳುತ್ತೇವೆ. ಇಲ್ಲಿ ರಾಹುಲ್ ಗಾಂಧಿಯ ಪ್ರತಿಕೃತಿ ದಹನ ಮಾಡಬೇಡಿ ಎಂದು ಪೊಲೀಸರೇ ಅಲವತ್ತುಕೊಂಡಿದ್ದಾರೆ. ಅವರಿಗೂ ಇನ್ನೆರಡು ತಿಂಗಳಲ್ಲಿ ಸಂಬಳ ಬರದೇ ಇದ್ದಾಗ, ನಮ್ಮೊಂದಿಗೆ ಸೇರಿ ಪ್ರತಿಭಟನೆ ಮಾಡುವ ಸ್ಥಿತಿ ಬರಲಿದೆ. ರಾಹುಲ್ ಪ್ರತಿಕೃತಿ ದಹಿಸಿದರೆ, ಇವರನ್ನು ನೀರಿಲ್ಲದ ಜಾಗಕ್ಕೆ ವರ್ಗಾವಣೆ ಮಾಡುತ್ತಾರೆಂಬ ಭಯ ಪೊಲೀಸರಲ್ಲಿದೆ. ಇದು ಹಿಂದು ಸಮಾಜಕ್ಕೆ ಎಚ್ಚರಿಕೆ ಗಂಟೆ ಬಾರಿಸುವ ಪ್ರತಿಭಟನೆ. ಹಿಂದು ಸಮಾಜದ ಅಳಿವು ಉಳಿವಿನ ಪ್ರತಿಭಟನೆ.
ಈತ ಏನಾದರೂ ಗೆದ್ದು ಅಧಿಕಾರಕ್ಕೆ ಬಂದರೆ, ಹಿಂದುಗಳನ್ನು ಹತ್ತೇ ವರ್ಷದಲ್ಲಿ ಮುಗಿಸುತ್ತಾನೆ. ಇದು ಈತನ ವಿರುದ್ಧ ಮಾತ್ರ ಅಲ್ಲ, ಹಿಂದು ವಿರೋಧಿ ಮನಸ್ಸು ಇರುವ ಪ್ರತಿಯೊಬ್ಬ ವ್ಯಕ್ತಿಯ ವಿರುದ್ಧವೂ ನಡೆದಿರುವ ಪ್ರತಿಭಟನೆ. ರಾಹುಲನ ಅಜ್ಜಿ ಹಿಂದೆ ತುರ್ತು ಸ್ಥಿತಿಯ ಸಂದರ್ಭದಲ್ಲಿ ಸೆಕ್ಯುಲರ್ ಪದವನ್ನು ಸಂವಿಧಾನದಲ್ಲಿ ಸೇರಿಸಿದ್ದ ಕಾರಣಕ್ಕೆ ಈ ದೇಶ ಸೆಕ್ಯುಲರ್ ಆಗಿದ್ದಲ್ಲ. ಇಲ್ಲಿನ ಜನರ ಮನಸ್ಥಿತಿಯೇ ಸೆಕ್ಯುಲರ್ ಎನ್ನುವುದನ್ನು ನೆನಪಿಸುತ್ತೇನೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ವೇದವ್ಯಾಸ ಕಾಮತ್ ಮತ್ತಿತರರು ಇದ್ದರು.
Rahul Gandhi should be slapped on the forehead in Parliament slams Mangalore MLA Bharat Shetty. If Rahul goes to Kerala, he will become a secular, an atheist in Tamil Nadu, a Shiva devotee in Gujarat, a Catholic in the north-eastern state, he should be slapped on the forehead in Parliament itself slammed north MLA Bharat Shetty during a protest held by Bjp against Rahul Gandhi ‘Violent Hindu’ remark.
09-04-25 09:31 pm
HK News Desk
Vijayapura accident, Death: ಯಮನಂತೆ ಬಂದ ಲಾರಿ ;...
09-04-25 09:21 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ...
09-04-25 06:21 pm
Kukke Subrahmanya, New Train Service, Ministe...
09-04-25 04:05 pm
Karwar Sp Narayana, Bhatkal News: ಭಟ್ಕಳ ; ವಿಚ...
09-04-25 11:25 am
10-04-25 01:25 pm
HK News Desk
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
ರಾಜ್ಯದ ಬಳಿಕ ಕೇಂದ್ರ ಸರ್ಕಾರದಿಂದಲೂ ಜನರಿಗೆ ಬೆಲೆ ಏ...
07-04-25 10:01 pm
09-04-25 10:57 pm
Mangalore Correspondent
Mangalore BJP Janakrosha Rally, Protest: ಕರ್ನ...
09-04-25 10:23 pm
Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾ...
08-04-25 08:58 pm
PUC Results 2025, Mangalore Udupi topper: ಪಿಯ...
08-04-25 03:00 pm
Praveen Nettaru, Shafi Bellare, SDPI, Mangalo...
07-04-25 07:01 pm
10-04-25 02:57 pm
Mangalore Correspondent
ಸಾಮೂಹಿಕ ವಿವಾಹ ಹೆಸರಲ್ಲಿ ಬಡ ಯುವತಿಯರ ಮಾರಾಟ ಜಾಲ ;...
09-04-25 11:17 pm
Kalaburagi ATM Robbery: ಬೀದರ್ ದರೋಡೆ ಬೆನ್ನಲ್...
09-04-25 08:15 pm
Mangalore Gold smuggling, Crime, CCB: ಇಬ್ಬರು...
08-04-25 11:04 pm
Fake Note, Dandeli: ದಾಂಡೇಲಿ ; ಖಾಲಿ ಮನೆಯಲ್ಲಿ 1...
08-04-25 10:01 pm