ಬ್ರೇಕಿಂಗ್ ನ್ಯೂಸ್
02-07-24 11:05 pm Mangalore Correspondent ಕರಾವಳಿ
ಮಂಗಳೂರು, ಜುಲೈ.2: ಮಂಗಳೂರು ನಗರವನ್ನು ಹಾದು ಹೋಗುವ ಹೆದ್ದಾರಿಯ ಅಲ್ಲಲ್ಲಿ ಮಳೆಯಿಂದಾಗಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಸಂಚಾರಕ್ಕೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ನಗರದ ಕೆಪಿಟಿ ವೃತ್ತದಲ್ಲಿ ಎರಡು ದಿನಗಳ ಹಿಂದೆ ಹೆದ್ದಾರಿ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರನೊಬ್ಬ ಗಾಯಗೊಂಡಿದ್ದ. ಇದನ್ನು ನೋಡಿ ಮನ ಕರಗಿದ ಟ್ರಾಫಿಕ್ ಪೊಲೀಸರು ಆ ಗುಂಡಿಗೆ ಸಿಮೆಂಟ್ ಹಾಕಿ ಮುಚ್ಚುವ ಕೆಲಸ ಮಾಡಿದ್ದಾರೆ.
ಕದ್ರಿ ಸಂಚಾರಿ ಠಾಣೆಯ ಇನ್ ಸ್ಪೆಕ್ಟರ್, ಮೈಸೂರು ಮೂಲದ ಈಶ್ವರ್ ಸ್ವಾಮಿ ಸ್ವತಃ ಹಾರೆ ಹಿಡಿದು ಗುಂಡಿಗೆ ಸಿಮೆಂಟ್ ತುಂಬಿಸುವ ಕೆಲಸ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರ ಈ ಕೆಲಸ ಶ್ಲಾಘನೆಗೆ ಪಾತ್ರವಾಗಿದೆ. ಕೆಪಿಟಿ ವೃತ್ತದ ಬಳಿಯಲ್ಲೇ ಹೆದ್ದಾರಿಯಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರಿಗೆ ಸಂಕಷ್ಟ ತಂದಿತ್ತು. ಹಾಗಿದ್ದರೂ, ಅಲ್ಲಿ ನಿಂತಿದ್ದ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ನಿಲ್ಲಿಸಿ ಫೈನ್ ಹಾಕುತ್ತಿದ್ದರೇ ವಿನಾ ಗುಂಡಿ ಮುಚ್ಚುವುದಕ್ಕಾಗಲೀ, ಹೆದ್ದಾರಿ ಇಲಾಖೆಗೆ ಹೇಳಿ ಕೆಲಸ ಮಾಡಿಸುವುದಾಗಲೀ ಮಾಡಿರಲಿಲ್ಲ.
ಮೊನ್ನೆ ಸ್ಕೂಟರ್ ಸವಾರನೊಬ್ಬ ಅದೇ ಗುಂಡಿಗೆ ಬಿದ್ದು ಮೈಕೈಗೆ ಗಾಯ ಮಾಡಿಕೊಂಡಿದ್ದ. ಟ್ರಾಫಿಕ್ ಪೊಲೀಸರು ನಿಲ್ಲುವ ಜಾಗದಲ್ಲೇ ಈ ಘಟನೆ ನಡೆದಿತ್ತು. ಇದನ್ನು ನೋಡಿದ್ದ ಟ್ರಾಫಿಕ್ ಇನ್ಸ್ ಪೆಕ್ಟರ್ ಈಶ್ವರ್ ಸ್ವಾಮಿ ಮಂಗಳವಾರ ಎಲ್ಲಿಂದಲೋ ಸಿಮೆಂಟ್ ಮಿಕ್ಸರ್ ತಂದು ಸುರಿದಿದ್ದಾರೆ. ಅಷ್ಟಾದರೂ ಗುಂಡಿ ಮುಚ್ಚಲಿ ಎಂದು ಸಾರ್ವಜನಿಕರ ಸೇವೆ ಮಾಡಿದ್ದಾರೆ. ಪುಣ್ಯಕ್ಕೆ ಸಂಜೆಯ ವರೆಗೆ ಮಳೆ ಬಿಟ್ಟಿದ್ದರಿಂದ ಸಿಮೆಂಟ್ ಸ್ವಲ್ಪ ಗಟ್ಟಿ ಆಗುವಂತೆ ಉಳಿದುಬಿಟ್ಟಿದೆ. ಪಣಂಬೂರು, ಬೈಕಂಪಾಡಿ, ಕುಳೂರು ಹೆದ್ದಾರಿ ಉದ್ದಕ್ಕೂ ಗುಂಡಿ ಬಿದ್ದಿದ್ದು, ಹೆದ್ದಾರಿ ಅಧಿಕಾರಿಗಳು ಇದನ್ನು ಮುಚ್ಚುವ ಗೊಡವೆಗೆ ಮುಂದಾಗಿಲ್ಲ.
Mangalore kadri traffic police inspector eshwar Swami and policeman fix potholes at KPT as authorities neglect duty. Eshwar Swamy, who works at the east traffic police station, along with contributions from traffic staff and auto-rickshaw drivers, managed to fix the pothole.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm