ಬ್ರೇಕಿಂಗ್ ನ್ಯೂಸ್
02-07-24 04:35 pm Mangalore Correspondent ಕರಾವಳಿ
ಮಂಗಳೂರು, ಜುಲೈ 2: ಕ್ರಿಯೇಟಿವ್ ಮೂವ್ಮೆಂಟ್ ಥೆರಪಿ ಅಸೋಸಿಯೇಷನ್ ಆಫ್ ಇಂಡಿಯಾದ (ಸಿಎಂಟಿಎಐ) ದಕ್ಷಿಣ ಭಾರತ ವಲಯ ಅಧ್ಯಕ್ಷರಾಗಿ ಮಂಗಳೂರು ಮೂಲದ ಡಾನ್ಸ್ ಮೂವ್ ಮೆಂಟ್ ಥೆರಪಿ ಫ್ಯಾಸಿಲಿಟೇಟರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಸಚಿತಾ ನಂದಗೋಪಾಲ್ ನೇಮಕಗೊಂಡಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ದೆಹಲಿ ಮೂಲದ ಈ ಪ್ಯಾನ್ ಇಂಡಿಯಾ ಸಂಘಟನೆಯ ಕಾರ್ಯ ನಿರ್ವಹಣೆಯ ಉಸ್ತುವಾರಿ ವಹಿಸಲಿದ್ದಾರೆ.
ಸಚಿತಾ ನಂದಗೋಪಾಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಮಹತ್ವದ ಚಟುವಟಿಕೆಗಳ ಕ್ಷೇತ್ರಗಳಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದು, ಮಕ್ಕಳು ಮತ್ತು ಯುವಕರ ಶಿಕ್ಷಣ, ಜೀವನ ಕೌಶಲ್ಯ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಿರುವ ಪರ್ಯಾಯ ವಿಧಾನಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ (ಸಿಐಎಲ್) ಎಂಬ ಸಂಸ್ಥೆಯ ಸಹ ಸ್ಥಾಪಕಿಯೂ ಆಗಿದ್ದಾರೆ. ಅದೇ ರೀತಿ ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆ 'ಅನ್ವೇಷಣಂ'ನ ಸ್ಥಾಪಕರು ಮತ್ತು ನಿರ್ದೇಶಕರಾಗಿದ್ದಾರೆ.
ಸಿಎಂಟಿಎಐ (CMTAI) ಭಾರತದಲ್ಲಿ ಕ್ರಿಯೇಟಿವ್ ಮೂವ್ಮೆಂಟ್ ಥೆರಪಿ ಕ್ಷೇತ್ರವನ್ನು ಬೆಳೆಸುವ ಮತ್ತು ವೃತ್ತಿಪರಗೊಳಿಸುತ್ತಿರುವ ಪ್ರಧಾನ ಸಂಸ್ಥೆಯಾಗಿದೆ. 2014ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆಯು ಭಾರತದಲ್ಲಿ ಡಾನ್ಸ್ ಮೂವ್ ಮೆಂಟ್ ಥೆರಪಿ ಮತ್ತು ಇತರ ಸೃಜನಶೀಲ ಕಲಾ ಚಿಕಿತ್ಸೆಗಳ ಕ್ಷೇತ್ರದಲ್ಲಿ ತರಬೇತಿ, ವೃತ್ತಿಪರತೆ, ಮಾನ್ಯತೆ, ಜ್ಞಾನ ಹಂಚಿಕೆ, ವಕಾಲತ್ತು ಮತ್ತು ಸಹಯೋಗಕ್ಕಾಗಿ ಇರುವಂಥ ವೃತ್ತಿಪರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಿಎಂಟಿಎಐ ಎನ್ನುವುದು ಕೌನ್ಸೀಲ್ ಇಂಟರ್ನ್ಯಾಷನಲ್ ಡೆ ಲಾ ಡಾನ್ಸೆ (ಸಿಐಡಿ, ಪ್ಯಾರಿಸ್) ಮತ್ತು ಅಮೆರಿಕನ್ ಡಾನ್ಸ್ ಥೆರಪಿ ಅಸೋಸಿಯೇಷನ್ (ಎಡಿಟಿಎ) ಸದಸ್ಯ ಸಂಸ್ಥೆಯೂ ಆಗಿದೆ.
ಸಚಿತಾ ನಂದಗೋಪಾಲ್ ಅವರು ತಮ್ಮ 25 ವರ್ಷಗಳ ವೃತ್ತಿ ಬದುಕಿನಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಪತ್ರಿಕೋದ್ಯಮದ ಉಪನ್ಯಾಸಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು, ಅಲ್ಲಿ ಆ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಳಿಕ ಅವರು ಬೆಂಗಳೂರಿನ ಸಿಎಂಆರ್ ಸ್ನಾತಕೋತ್ತರ ಮಾಧ್ಯಮ ಅಧ್ಯಯನ ಕೇಂದ್ರದ ಪ್ರಾಂಶುಪಾಲರಾಗಿಯೂ, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಅಧಿಕಾರಿಯಾಗಿ ಮತ್ತು ಯೆನಪೋಯ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎಥಿಕ್ಸ್ನಲ್ಲಿ ಬೋಧಕ ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಆರೆಂಜ್ ಆರ್ಕ್ ಕಮ್ಯುನಿಟಿ ಸ್ಟುಡಿಯೋ ಸಂಸ್ಥಾಪಕಿ ಮೇಘಾ ಛಲ್ಲಾನಿ ಉಪಾಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದರೆ, ಬೆಂಗಳೂರಿನ ಚಲನೆ/ಭಂಗಿ ವಿಶ್ಲೇಷಣೆ ತಂತ್ರಜ್ಞಾನ ಕಂಪನಿ ನೆಕ್ಸ್ಟ್ ಕ್ಯೂ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕರು ಮತ್ತು ಸಿಇಒ ಸುಬ್ರಹ್ಮಣ್ಯಂ ಮುರಮಲ್ಲ ಅವರು ಕಾರ್ಯದರ್ಶಿಯಾಗಿ ನಾಮ
ನಿರ್ದೇಶನಗೊಂಡಿದ್ದಾರೆ.
Mangalore City based Dance Movement Therapy Facilitator and Social Activist, Youth Mentor, Sachitha Nandagopal assumed charge as Chair of South Zone Chapter of Creative Movement Therapy Association of India (CMTAI). She will be in-charge of the functioning of the Delhi based pan India organization in the southern states.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm