ಬ್ರೇಕಿಂಗ್ ನ್ಯೂಸ್
25-06-24 10:23 pm Mangalore Correspondent ಕರಾವಳಿ
ಉಳ್ಳಾಲ, ಜೂ.25: ಬೋಳಿಯಾರು ಘಟನೆ ನೆಪದಲ್ಲಿ ಪೊಲೀಸರು ಮುಸ್ಲಿಮರ ಬೇಟೆಯನ್ನ ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ಮುಸ್ಲಿಂ ಸಮುದಾಯದವರು ಒಗ್ಗೂಡಿ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಸ್ಥಬ್ದಗೊಳಿಸಲು ಗೊತ್ತಿದೆ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಎಚ್ಚರಿಸಿದ್ದಾರೆ.
ಬೋಳಿಯಾರ್ ಘಟನೆಯ ನೆಪದಲ್ಲಿ ಪೊಲೀಸರು ಮತ್ತು ರಾಜ್ಯ ಸರಕಾರವು ಮುಸ್ಲಿಂ ಯುವಕರನ್ನೇ ಬೇಟೆಯಾಡುತ್ತಿರುವ ಘಟನೆಯನ್ನ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕೊಣಾಜೆ ಠಾಣೆಯೆದುರು ನಡೆದ ಕೊಣಾಜೆ ಚಲೋ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಬಂದ ಮೇಲೆ ನಡೆದ ಅನೇಕ ಘಟನೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಬಹಳಷ್ಟು ಅನ್ಯಾಯವಾಗಿದೆ. ಸರಕಾರ ಮತ್ತು ಪೊಲೀಸರು ನಮ್ಮ ಸಂಘಟನೆಯ ನಾಯಕರಿಗೆ ನೀಡುವ ಕಡಿವಾಣದ ನೋಟೀಸುಗಳಿಂದ ಎಲ್ಲಷ್ಟೂ ನಮ್ಮನ್ನ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಮಾತನಾಡಿ ಬೋಳಿಯಾರು ಚೂರಿ ಇರಿತ ಘಟನೆಯ ನೆಪದಲ್ಲಿ ಮುಸ್ಲಿಂ ಸಮುದಾಯದ ಅಮಾಯಕರನ್ನ ವಶಕ್ಕೆ ಪಡೆದು ಠಾಣೆಯಲ್ಲಿರಿಸಿ ಹಿಂಸೆ ನೀಡಿ ಕೊಣಾಜೆ ಪೊಲೀಸರು ಕಾನೂನು ವಿರೋಧಿ ಚಟುವಟಿಕೆ ನಡೆಸುತ್ತಿದ್ದು,ಬೋಳಿಯಾರು ಗಲಭೆ ಪ್ರಕರಣಕ್ಕೆ ಕಾರಣರಾದ ಒಂದೇ ಒಂದು ಸಂಘಿಗಳನ್ನ ಬಂಧಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್ಡಿಪಿಐ ನೇತೃತ್ವದಲ್ಲಿ ಅಲ್ಲಸಂಖ್ಯಾತರೆಲ್ಲ ಒಂದಾಗಿ ಇಂದು ಕೊಣಾಜೆ ಚಲೋ ಪ್ರತಿಭಟನೆ ನಡೆಸುವುದರ ಬಗ್ಗೆ ತಿಳಿದ ಶಾಸಕ ಖಾದರ್ ಅವರ ಚೇಳಾಗಳು ಮುಸ್ಲಿಂ ಸಮುದಾಯವು ಈ ಪ್ರತಿಭಟನೆ ನಡೆಸುತ್ತಿಲ್ಲವೆಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇಷ್ಟಲ್ಲದೆ ಪ್ರತಿಭಟನೆಗೆ ಬರುವ ಮಹಿಳೆಯರಿಗಾಗಿ ನಿಗದಿ ಪಡಿಸಲಾದ ಬಸ್ಸುಗಳ ಮಾಲಕರಿಗೆ ಪೊಲೀಸರು ಫೋನ್ ಮಾಡಿ ಕೇಸು ಹಾಕುವ ಬೆದರಿಕೆ ಒಡ್ಡಿ ಪ್ರತಿಭಟನೆಯನ್ನ ಹತ್ತಿಕ್ಕಲು ಯತ್ನಿಸಿರೋದಾಗಿ ಆರೋಪಿಸಿದರು.
ಎಸ್ಡಿಪಿಐ ನಾಯಕರಾದ ಅತ್ತಾವುಲ್ಲ ಜೋಕಟ್ಟೆ ಮಾತನಾಡಿ ನಾವು ಪೊಲೀಸರ ಲಾಠಿ ಚಾರ್ಜ್ ಗೆ ತಯಾರಾಗಿಯೇ ಪ್ರತಿಭಟನೆಗೆ ಬಂದಿದ್ದೇವೆ. ಬೋಳಿಯಾರು ಘಟನೆಯಲ್ಲಿ ನಡೆದ ತಾರತಮ್ಯ ನೀತಿಗೆ ರಾಜ್ಯ ಸರಕಾರವೇ ನೇರ ಕಾರಣ. ಮುಸ್ಲಿಮರ ಮತ ಗಳಿಸಿ ಜಯಗಳಿಸುವ ಕಾಂಗ್ರೆಸ್ಗೆ ಮುಂಬರುವ ತಾಲೂಕು ಪಂಚಾಯತ್ ,ಜಿಲ್ಲಾ ಪಂಚಾಯತ್ ,ಸ್ಥಳೀಯಾಡಳಿತ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಎಸ್ಡಿಪಿಐ ನಾಯಕಿ ಮಿಶ್ರಿಯಾ ಕಣ್ಣೂರು ಮಾತನಾಡಿ ಬೋಳಿಯಾರು ಘಟನೆಯಲ್ಲಿ ಮುಸ್ಲಿಮರ ಮನೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು ಗಂಡಸರಿಲ್ಲದ ಸಂದರ್ಭದಲ್ಲಿ ಮಹಿಳೆಯರನ್ನೂ ಠಾಣೆಗೆ ಕರಕೊಂಡು ಹೋಗಿ ನೀರು ಕೊಡದೆ ದಿನವಿಡೀ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ಈ ಘೋರ ಅನ್ಯಾಯವನ್ನ ನಾವು ಪ್ರಶ್ನಿಸದೇ ಈ ಕ್ಷೇತ್ರದ ಶಾಸಕರು ಪ್ರಶ್ನಿಸಲು ಸಾಧ್ಯವೇ..? ಮುಸ್ಲಿಮರ ಪರವಾಗಿ ಯಾವ ಸರಕಾರನೂ ಇಲ್ಲ. ಇರೋದಾಗಿದ್ದರೆ ಮುಸ್ಲಿಂ ಮಹಿಳೆಯರ ವಿರುದ್ಧ ತುಚ್ಚವಾಗಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕ್ರಮ ಕೈ ಕೈಗೊಳ್ಳಬೇಕಿತ್ತು. ರಾಜ್ಯ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಯೋಜನೆಗಳನ್ನ ನೀಡಿ ಮಗು ಅಳದಂತೆ ಮೊದಲೇ ಚಾಕಲೇಟ್ ನೀಡುವ ತಂತ್ರ ನಡೆಸಿದೆ ಎಂದರು.
ಠಾಣೆಯ ಮುಂದೆ ನೂರಾರು ಪ್ರತಿಭಟನಾಕಾರರು ನೆರೆದಿದ್ದರಿಂದ ಸುಮಾರು ಎರಡು ತಾಸುಗಳ ತನಕ ಮಂಗಳೂರು ವಿ.ವಿ ಮುಖ್ಯ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಯಿತು. ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತರು ಬರಲೇ ಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಕಮೀಷನರ್ ಅನುಪಸ್ಥಿತಿಯಲ್ಲಿ ಎಸಿಪಿ ಧನ್ಯ ನಾಯಕ್ ಅವರು ಮನವಿ ಸ್ವೀಕರಿಸಿದರು.
ಧಾರಾಕಾರ ಮಳೆ, ಠಾಣೆಯೆದುರು ರಾರಾಜಿಸಿದ ಬಣ್ಣದ ಕೊಡೆಗಳು
ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಗೂ ಎದುರೊಡ್ಡಲು ಎಸ್ಡಿಪಿಐನ ಪ್ರತಿಭಟನಾಕಾರರು ಬಣ್ಣ, ಬಣ್ಣದ ಬೃಹತ್ ಕೊಡೆಗಳನ್ನ ತಂದಿದ್ದು ,ಮಳೆಯನ್ನೂ ಲೆಕ್ಕಿಸದೆ ಪ್ರತಿಭಟಿಸಿದರು. ವರದಿಗೆ ತೆರಳಿದ್ದ ಮಾಧ್ಯಮದವರೂ ಧಾರಾಕಾರ ಮಳೆಯ ಹೊಡೆತದಿಂದ ಕ್ಯಾಮೆರಾಗಳನ್ನ ರಕ್ಷಿಸಲು ರಂಗಿನ ಕೊಡೆಗಳನ್ನೇ ಆಶ್ರಯಿಸಿದರು.
Alleging that innocent people are being arrested and harassed in the Boliyar stabbing incident, the SDPI led a protest and laid siege to the Konaje police station.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm