ಬ್ರೇಕಿಂಗ್ ನ್ಯೂಸ್
01-06-24 11:16 am Mangalore Correspondent ಕರಾವಳಿ
ಮಂಗಳೂರು, ಜೂನ್ 1: ಈಗಾಗಲೇ ಅಯೋಧ್ಯಾ ಧಾಮ್ ಹಾಗೂ ಬೆಳಗಾವಿ ಸುವರ್ಣ ವಿಧಾನ ಸೌಧವನ್ನು ಪರ್ಮನೆಂಟ್ ಲೈಟಿಂಗ್ ಮೂಲಕ ಶೃಂಗಾರಗೊಳಿಸಿ ದೇಶ ಹಾಗೂ ರಾಜ್ಯದಾದ್ಯಂತ ಹೆಸರುವಾಸಿಯಾಗಿದ್ದ ಲೆಕ್ಸಾ ಲೈಟಿಂಗ್ ಸಂಸ್ಥೆಯ ಗರಿಮೆಗೆ ಇನ್ನೊಂದು ಪ್ರಶಸ್ತಿ ಲಭಿಸಿದೆ.
ಮುಂಬೈಯಲ್ಲಿ ಬಾಂಬೇ ಎಕ್ಸಿಬಿಷನ್ ಸೆಂಟರ್ ನಲ್ಲಿ ನಡೆಯುತ್ತಿರುವ ಭಾರತದ ಅತಿದೊಡ್ಡ Sound & Light ಎಕ್ಸಿಬಿಷನ್ - PALM Expo 2024 ನಲ್ಲಿ ಮಂಗಳೂರಿನ ಲೆಕ್ಸಾ ಲೈಟಿಂಗ್ ಸಂಸ್ಥೆಗೆ HIGH - END LIGHTING SOLUTION AWARD 2024 ದೊರಕಿದೆ. ಅವಾರ್ಡ್ ಅನ್ನು ಲೆಕ್ಸಾ ಸಂಸ್ಥೆಯ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ರೊನಾಲ್ಡ್ ಸಿಲ್ವನ್ ಡಿಸೋಜ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಸ್ವೀಕರಿಸಿದರು. ಈ ಪ್ರಶಸ್ತಿಯನ್ನು ಭಾರತ ದೇಶದಲ್ಲಿಯೇ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಉತ್ಕೃಷ್ಟ ದರ್ಜೆಯ ಲೈಟಿಂಗ್ ಸೊಲ್ಯೂಷನ್ಸ್ ಹಾಗೂ ಎಕ್ಸಿಕುಶನ್ ಗಳನ್ನು ಮಾಡುತ್ತಿರುವ ಲೆಕ್ಸಾ ಸಂಸ್ಥೆಗೆ ನೀಡಲಾಗಿದೆ. ಇದು ಮಂಗಳೂರು ಮತ್ತು ಕರಾವಳಿಗೆ ಹೆಮ್ಮೆಯ ಪ್ರಶಸ್ತಿಯಾಗಿದೆ.
ಕರ್ನಾಟಕದ ಮಂಗಳೂರು ಸಮೀಪದ ಮೂಡುಬಿದಿರೆಯ ಅಶ್ವತಪುರ ಎಂಬ ಗ್ರಾಮದಲ್ಲಿ ಇರುವ ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜಪಾನೀಸ್ ಸಂಸ್ಕೃತಿ ಮತ್ತು ಉತ್ಪಾದನಾ ವ್ಯವಸ್ಥೆಯನ್ನು ತನ್ನ ಮೂಲದಲ್ಲಿ ಅಳವಡಿಸಿಕೊಂಡು ಸ್ಥಳೀಯ 300ಕ್ಕೂ ಹೆಚ್ಚು ಉತ್ಸಾಹಿ ಯುವಕರ ತಂಡದೊಂದಿಗೆ ಮುನ್ನಡೆಯುತ್ತಿದೆ. ಲೆಕ್ಸಾ ಸಂಸ್ಥೆ ಉತ್ಪನ್ನಗಳು ಮೇಕ್ ಇನ್ ಇಂಡಿಯಾ ತತ್ವವನ್ನು ಸಾಕಾರಗೊಳಿಸುತ್ತಿವೆ. ಸಂಶೋಧನೆ ಮತ್ತು ಅಭಿವೃದ್ಧಿ, ಪರಿಕಲ್ಪನೆ, ಕಚ್ಚಾ ವಸ್ತುಗಳನ್ನು ಪಡೆಯುವುದು, ಯೋಜನೆ, ವಿನ್ಯಾಸ, ಉತ್ಪಾದನೆ ಮತ್ತು ವಿತರಣೆ ಮತ್ತು ಸ್ಥಾಪನೆಯಿಂದ, ಅವರು ತಮ್ಮ ಸ್ವಂತ ಕಾರ್ಖಾನೆಯಲ್ಲಿ 400 ಕ್ಕೂ ಹೆಚ್ಚು ವಿಶೇಷ ಬೆಳಕಿನ ಉತ್ಪನ್ನಗಳನ್ನು ಉತ್ಪಾದಿಸುತ್ತಾರೆ.
2018 ರಲ್ಲಿ ದುಬೈನಲ್ಲಿ ಇಂಟರ್ನ್ಯಾಷನಲ್ ಅಚೀವರ್ಸ್ ಕೌನ್ಸಿಲ್ನಿಂದ 'ವೇಗವಾಗಿ ಬೆಳೆಯುತ್ತಿರುವ ಭಾರತೀಯ ಕಂಪನಿ ಶ್ರೇಷ್ಠತೆ ಪ್ರಶಸ್ತಿ' ಹಾಗೂ 2019 ರಲ್ಲಿ ಥಾಯ್ಲೆಂಡ್ನಲ್ಲಿ ನಡೆದ ಗ್ಲೋಬಲ್ ಬ್ಯುಸಿನೆಸ್ ಮೀಟ್ನಲ್ಲಿ 'ಉತ್ಪಾದನೆಯಲ್ಲಿ ಮತ್ತು ಗ್ರಾಹಕರ ತೃಪ್ತಿಯಲ್ಲಿ ಶ್ರೇಷ್ಠತೆ' ಪಡೆದ ಕಂಪೆನಿ ಎಂಬ ಗೌರವಕ್ಕೆ ಪಾತ್ರವಾಗಿದೆ.
2019 ರಲ್ಲಿ 'ಅತ್ಯುತ್ತಮ 5000 MSMEಗಳ ಲಿಸ್ಟ್ನಲ್ಲಿ LEKSA ಲೈಟಿಂಗ್ ಕೂಡ ನಾಮನಿರ್ದೇಶನಗೊಂಡಿತ್ತು. "ವಿಶೇಷ ಬೆಳಕಿನ ಉತ್ಪನ್ನ ತಯಾರಿಕೆಯಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್" ಎಂದು ಕೇಂದ್ರ ಸರ್ಕಾರದಿಂದ ATMA NIRBHAR BHARAT ಅಡಿಯಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ರೊನಾಲ್ಡ್ ಅವರಿಗೆ ಮುಂಬೈನಲ್ಲಿ ಅತ್ಯುತ್ತಮ ಸಾಧನೆ ಹಾಗೂ ಅವರ ಯಶೋಗಾಥೆಗಾಗಿ "ಹೈ ಫ್ಲೈಯರ್ಸ್ 50 - ಗ್ಲೋಬಲ್ ಇಂಡಿಯನ್ಸ್" ಎಂದು ಆಯ್ಕೆ ಮಾಡಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗಿದೆ.
ಎಮರ್ಜಿಂಗ್ ಬ್ರಾಂಡ್ ಇನ್ ಲೈಟಿಂಗ್ ನಲ್ಲಿ
ಎಕನಾಮಿಕ್ ಟೈಮ್ಸ್ ಎಚೀವರ್ಸ್ ಆಫ್ ಕರ್ನಾಟಕ ಅವಾರ್ಡ್ 2023 ಪ್ರಶಸ್ತಿ ಪಡೆದಿದ್ದಾರೆ. ಉದ್ಯಮ ಕ್ಷೇತ್ರದ ಸಾಧನೆಗೆ ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಪ್ರಸ್ತುತ ಇವರ ಸಾಧನೆಗೆ PALM Expo 2024 ನಲ್ಲಿ PALM SOUND AND LIGHT AWARD 2024 ಪ್ರಶಸ್ತಿ ನೀಡಿ ಗೌರವಿಸಿದೆ.
Mangalore based company Leksa lighting wins palm sound light award held at Mumbai called the palm expo 2024. Leksa lighting company founder Ronald Silvan Dsouza grabbed the high end lighting solution award 2024.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm