ಬ್ರೇಕಿಂಗ್ ನ್ಯೂಸ್
03-12-20 02:42 pm Mangalore Correspondent ಕರಾವಳಿ
ಉಳ್ಳಾಲ: ಡಿ. 3: ಸೋಮೇಶ್ವರ ಗ್ರಾಮದ ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ತುಳು ಭಜನಾ ಸ್ಪರ್ಧೆ ತಂಬೂರಿ - 2020 ಡಿ. 6 ಹಾಗೂ 13ರಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಗುರುವಾರ ತೊಕ್ಕೊಟ್ಟಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಪರ್ಧೆಯು ಪುರುಷರು, ಮಹಿಳೆಯರು, ಬಾಲಕರು ಹಾಗೂ ಬಾಲಕಿಯರು ಸೇರಿದಂತೆ ಮೂರು ವಿಭಾಗಗಳಲ್ಲಿ ನಡೆಯಲಿದ್ದು ಪುರುಷರ ವಿಭಾಗದ ಸ್ಪರ್ಧೆಯು ಡಿ. 6ಕ್ಕೆ ನಡೆಯಲಿದ್ದು, ಮಹಿಳೆಯರು, ಬಾಲಕರು ಹಾಗೂ ಬಾಲಕಿಯರ ವಿಭಾಗದ ಸ್ಪರ್ಧೆಯು ಡಿ.13ರಂದು ನಡೆಯಲಿದೆ ಎಂದರು.
ಮೂರು ವಿಭಾಗಗಳಿಗೂ ಪ್ರಶಸ್ತಿ ವಿತರಣೆ ಸಮಾರಂಭವು ಡಿ.13ರಂದು ಸಂಜೆ 6ಕ್ಕೆ ನಡೆಯಲಿದ್ದು ಪ್ರತಿ ತಂಡಕ್ಕೂ 20 ನಿಮಿಷ ಕಾಲಾವಧಿ ನೀಡಲಾಗಿದೆ. ಮೂರೂ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ನಗದು ಹಾಗೂ ಫಲಕ, ಪ್ರಶಸ್ತಿ ಪತ್ರ ಸೇರಿದಂತೆ ಭಾಗವಹಿಸಿದ ಎಲ್ಲ ತಂಡಗಳಿಗೂ ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು. ವೈಯಕ್ತಿಕವಾಗಿ ಹಾರ್ಮೋನಿಯಂ ವಾದಕ, ತಬಲಾ ವಾದಕ ಹಾಗೂ ಉತ್ತಮ ಭಜಕ ಪ್ರಶಸ್ತಿ ನೀಡಲಾಗುವುದು ಎಂದರು.
ಡಿ. 6ರಂದು ಬೆಳಗ್ಗೆ 8.30ಕ್ಕೆ ಕುಂಪಲ ಶಾಲಾ ಮೈದಾನದಿಂದ ಭಜಕರ ವರ್ಣರಂಜಿತ ಶೋಭಾಯಾತ್ರೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಎಲ್ಲರೂ ಸಮವಸ್ತ್ರಧಾರಿಗಳಾಗಿ ಭಾಗವಹಿಸಲಿದ್ದು ವಿಶೇಷ ಶೋಭಾಯಾತ್ರೆ ನಡೆಯಲಿದೆ. ತುಳುನಾಡಿನಲ್ಲಿಯೇ ಅಪೂರ್ವ ಆಗಿರುವ ಈ ಭಜನಾ ಸ್ಪರ್ಧೆಗೆ ಈಗಾಗಲೇ 65ಕ್ಕೂ ಅಧಿಕ ತಂಡಗಳು ನೊಂದಣಿ ಮಾಡಿರುತ್ತದೆ.
ತಂಬೂರಿ- 2020ರ ಸ್ಪರ್ಧೆಯನ್ನು ಡಿ.6 ರಂದು ಜಿಲ್ಲಾ ಉಸ್ತುವಾರಿ ಸಚಿವರು, ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದು, ಜಿಲ್ಲೆಯ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಡಿ.13ರ ಮಹಿಳಾ ಮತ್ತು ಮಕ್ಕಳ ಭಜನಾ ಸ್ಪರ್ಧೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಂಸದರಾದ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದು, ಹಲವು ಗಣ್ಯರು ಭಾಗವಹಿಸುವರು. ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಉಪಾಧ್ಯಕ್ಷ ಚಂದ್ರಶೇಖರ್ ಬಿ.ಜೆ, ಆಡಳಿತ ಮಂಡಳಿ ಸದಸ್ಯರುಗಳಾದ ಗಣೇಶ್ ಅಂಚನ್, ಜಗದೀಶ್ ಆಚಾರ್ಯ, ಕಿಶೋರ್ ಡಿ.ಕೆ ಹಾಗೂ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ ಉಪಸ್ಥಿತರಿದ್ದರು.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm