ಬ್ರೇಕಿಂಗ್ ನ್ಯೂಸ್
27-11-20 08:39 pm Mangaluru Correspondant ಕರಾವಳಿ
ಮಂಗಳೂರು, ನ. 27: ಉಗ್ರರ ಪರ ಗೋಡೆ ಬರಹ ಕಂಡುಬಂದ ಪ್ರಕರಣದ ಬಗ್ಗೆ ತನಿಖೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ತ್ವರಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆ ಸಮೀಪದ ಬಿಜೈ ಬಳಿಯ ಅಪಾರ್ಟ್ಮೆಂಟ್ ಒಂದರ ಆವರಣ ಗೋಡೆಯಲ್ಲಿ ಈ ಬರಹ ಕಂಡುಬಂದಿತ್ತು. ಕಂಪೌಂಡ್ ಮೇಲೆ ‘ಲಷ್ಕರ್ ಝಿಂದಾಬಾದ್’ ಎಂದು ಬರೆಯಲಾಗಿದ್ದು, ಉಗ್ರರನ್ನು ಮಂಗಳೂರಿಗೆ ಕರೆಸುವ ಬೆದರಿಕೆ ಹಾಕಲಾಗಿದೆ. ಸಂಘ ಪರಿವಾರಕ್ಕೆ ಬೆದರಿಕೆಯ ಮಾತುಗಳನ್ನು ಬರೆಯಲಾಗಿದೆ.
ಘಟನೆ ನಡೆದ ಸಮೀಪ ರಸ್ತೆಯ ಸುತ್ತಮುತ್ತ ಸಿ.ಸಿ. ಕ್ಯಾಮೆರಾಗಳಿದ್ದು, ಅದರಲ್ಲಿ ದಾಖಲಾಗಿರುವ ದೃಶ್ಯಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ತನಿಖೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ತ್ವರಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಉಗ್ರರ ಪರವಾದ ಬರಹ ಇದೇ ಮೊದಲ ಬಾರಿಗೆ ಕಂಡುಬಂದಿದೆ. ಈ ಹಿಂದೆ ನಕ್ಸಲ್ ಪರ ಬರಹಗಳು ಪತ್ತೆಯಾಗಿದ್ದವು. ಆದರೆ ಯಾರು ಬರೆದವರು ಎಂಬುದು ಪತ್ತೆಯಾಗಿರಲಿಲ್ಲ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
The Mangaluru City Police commissioner Vikas Kumar has launched a special team to nab the miscreants who unidentified miscreants have created the graffiti of Pro-terror at Bejai, Kadri in Mangalore.
03-07-25 05:24 pm
Bangalore Correspondent
Rain kadaba, Sullia, Mangalore: ಕಡಬ, ಸುಳ್ಯದಲ್...
03-07-25 10:54 am
Tumakuru, Fathers Jail, Traffic, Bike: ತುಮಕೂರ...
03-07-25 10:52 am
Dk Shivakumar, CM Siddaramaiah: ನನ್ನ ಹೆಸ್ರು ಹ...
02-07-25 11:02 pm
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
03-07-25 10:50 pm
Mangalore Correspondent
ರಹಿಮಾನ್ ಕೊಲೆ ಪ್ರಕರಣ ; ಅನುಮತಿ ನಿರಾಕರಿಸಿದ್ದರೂ ಬ...
03-07-25 10:39 pm
Mangalore Police, New Rules, Festival; ಮೊಸರು...
03-07-25 03:43 pm
Mangalore, Heart Attack Spike: ದಕ್ಷಿಣ ಕನ್ನಡ ಜ...
03-07-25 02:33 pm
Mangalore Police, Task Force: ಕೋಮು ಗಲಭೆ ನಿಗ್ರ...
03-07-25 10:50 am
03-07-25 11:03 pm
Mangalore Correspondent
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm
ಮಹಾದೇವ್ ಬೆಟ್ಟಿಂಗ್ ಹಗರಣ ; ಮೋಸ್ಟ್ ವಾಂಟೆಡ್ ಆರೋಪಿ...
03-07-25 07:09 pm
Infosys Employee, Video Recording, Crime: ಇನ್...
02-07-25 10:15 pm
Massive Scam, Mangalore City Corporation, Fak...
02-07-25 12:24 pm