ಬ್ರೇಕಿಂಗ್ ನ್ಯೂಸ್
10-03-24 11:03 pm Mangalore Correspondent ಕರಾವಳಿ
ಮಂಗಳೂರು, ಮಾ.10: ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಕಾಯ್ದೆ ತಿದ್ದುಪಡಿಯನ್ನು ವಿಶ್ವ ಹಿಂದು ಪರಿಷತ್ ವಿರೋಧಿಸುತ್ತದೆ. ಈ ಕಾಯ್ದೆಯಿಂದ ಹಿಂದು ದೇಗುಲದ ಹಣ ಅಲ್ಪಸಂಖ್ಯಾತರಿಗೆ ನೀಡುವ ಪ್ರಸ್ತಾಪ ಇದೆ. ಅಲ್ಪಸಂಖ್ಯಾತ ಕ್ರೈಸ್ತರ ಚರ್ಚ್, ಮುಸ್ಲಿಮರ ಮಸೀದಿಯ ಹಣದ ಬಳಕೆ ಬಗ್ಗೆ ಕಾನೂನು ಇಲ್ಲ. ಹಿಂದುಗಳ ದೇಗುಲದ ಮೇಲೆ ನಿಯಂತ್ರಣ ಸಾಧಿಸುವುದು, ಅದರ ಒಂದಂಶವನ್ನು ಬೇರೆ ಧರ್ಮಗಳ ಸಂಸ್ಥೆಗಳಿಗೆ ಹಂಚುವುದನ್ನು ವಿರೋಧಿಸುತ್ತೇವೆ ಎಂದು ಎಂ.ಬಿ. ಪುರಾಣಿಕ್ ಹೇಳಿದ್ದಾರೆ.
ಸಂಘ ನಿಕೇತನದಲ್ಲಿ ನಡೆದ ಎರಡು ದಿನಗಳ ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಮಟ್ಟದ ಪ್ರತಿನಿಧಿಗಳ ಸಭೆಯ ಬಳಿಕ ಸುದ್ದಿಗೋಷ್ಟಿ ನಡೆಸಿದ್ದಾರೆ. ಸದ್ರಿ ಕಾನೂನು ತಿದ್ದುಪಡಿಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನು ಸರಕಾರವೇ ನೇಮಿಸುವ ಪ್ರಸ್ತಾವನೆ ಇದ್ದು ದೇವಸ್ಥಾನದ ಆಡಳಿತವನ್ನು ಸರಕಾರ ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರ ಅಡಗಿದೆ. ದೇವಸ್ಥಾನಗಳು ಹಿಂದು ಸಮಾಜದ ಖಾಸಗಿ ಒಡೆತನದ ಸಂಸ್ಥೆಗಳಾಗಿದ್ದು, ಅದರ ಆಡಳಿತದಲ್ಲಾಗಲೀ, ಪೂಜಾ ವಿಧಿಯಲ್ಲಾಗಲೀ ಸರಕಾರಕ್ಕೆ ಹಕ್ಕಿರುವುದಿಲ್ಲ. ಹಣವನ್ನು ಯಾವುದಕ್ಕೆ ಉಪಯೋಗಿಸಬೇಕು, ಉಪಯೋಗಿಸಬಾರದು ಎಂದು ಸರಕಾರ ನಿರ್ದೇಶನ ನೀಡಬಾರದು. ದೇವಸ್ಥಾನಗಳಿಗೆ ಮೂಲಭೂತ ಅಂಶಗಳನ್ನು ಕೊಡುವುದು ಸರಕಾರದ ಜವಾಬ್ದಾರಿ. ಅದಕ್ಕಾಗಿ ಮೂಲಭೂತ ಸೌಕರ್ಯವನ್ನು ಯೋಜಿಸಲು ಸಮಿತಿಯನ್ನು ರಚಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಮೂಲಸೌಕರ್ಯ ಒದಗಿಸುವ ಯೋಜನೆಗೆ ದೇವಸ್ಥಾನದ ಹಣ ಬಳಕೆ ಮಾಡಬಾರದು ಎಂದು ಸಂಘ ನಿಕೇತನದಲ್ಲಿ ನಡೆದ ಎರಡು ದಿನಗಳ ಸಮ್ಮೇಳನದಲ್ಲಿ ನಿರ್ಣಯ ಮಂಡಿಸಲಾಗಿದೆ ಎಂದು ಹೇಳಿದರು.
ವಿಹಿಂಪಕ್ಕೆ 60 ವರ್ಷ, ಜಗತ್ತಿನಾದ್ಯಂತ ಶಾಖೆ ಸ್ಥಾಪನೆ
ವಿಶ್ವ ಹಿಂದು ಪರಿಷತ್ತಿಗೆ 60 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಎಲ್ಲಿ ಹತ್ತು ಸಾವಿರದಷ್ಟು ಹಿಂದುಗಳಿದ್ದಾರೋ ಅಂತಹ ದೇಶಗಳಲ್ಲಿ ವಿಶ್ವ ಹಿಂದು ಪರಿಷತ್ತಿನ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು. ಈಗಾಗಲೇ 50ಕ್ಕೂ ಹೆಚ್ಚು ದೇಶಗಳಲ್ಲಿ ಸಂಘಟನೆ ಇದೆ. ಸಂಘಟನೆ ಇರುವ ಜಪಾನ್, ಕೆನಡಾ, ಇಂಡೋನೇಷ್ಯಾ ಸೇರಿ ಎಲ್ಲ ಕಡೆಯೂ ಮೊನ್ನೆ ರಾಮ ಮಂದಿರ ಸ್ಥಾಪನೆ ದಿನದಂದು ರಾಮ ಪೂಜೆ ನಡೆಸಲಾಗಿದೆ. ಮೈನಸ್ ಡಿಗ್ರಿ ಇರುವ ನಾರ್ವೆಯಂತಹ ದೇಶದಲ್ಲೂ ರಾಮನ ಪೂಜೆ ನಡೆಸಲಾಗಿದೆ ಎಂದು ವಿಹಿಂಪ ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನು ಮಲಯನ್ ಹೇಳಿದ್ದಾರೆ.
ಕುವೈತ್ ದೇಶಕ್ಕೆ ಹೋಗಿದ್ದಾಗ ಅಲ್ಲಿನ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಒಂದು ಜಾಗದಲ್ಲಿ ಮೂರು ಸಾವಿರ ವರ್ಷಗಳ ಹಿಂದೆ ಆ ಜಾಗದಲ್ಲಿ ಸೂರ್ಯನ ದೇಗುಲ ಇತ್ತೆಂದು ಬರೆಯಲಾಗಿದೆ. ಅಂದರೆ, ಇರಾನ್, ಇರಾಕ್ ದೇಶಗಳಲ್ಲಿ ಮೂರು ಸಾವಿರ ವರ್ಷಗಳ ಹಿಂದೆಯೇ ಹಿಂದು ಸನಾತನ ಧರ್ಮದ ಕುರುಹುಗಳು ಇತ್ತು ಎನ್ನುವುದಕ್ಕೆ ಬಹಳಷ್ಟು ಸಾಕ್ಷಿ ಸಿಗುತ್ತದೆ. ಹಿಂದು ಸನಾತನ ಧರ್ಮದ ಮೌಲ್ಯಗಳನ್ನು ಮತ್ತೆ ಪಸರಿಸುವ ಉದ್ದೇಶದಿಂದ ಜಗತ್ತಿನಾದ್ಯಂತ ವರ್ಲ್ಡ್ ಹಿಂದು ಅಸೋಸಿಯೇಶನ್ ಇದೆ. ಹಳೆಯ ಸಂಪ್ರದಾಯಗಳನ್ನು ಆಧುನಿಕ ಮೆಥಡಾಲಜಿ ಪ್ರಕಾರ ಪ್ರಸಾರ ಮಾಡುವ ಉದ್ದೇಶ ಹೊಂದಿದೆ. ಇದರಲ್ಲಿ ಮತಾಂತರ ಆದವರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಉದ್ದೇಶವೂ ಇದೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ದೇಶದ ಹಿತದೃಷ್ಟಿಯಿಂದ ಹಿಂದುಗಳ ಪರ ಇರುವವರಿಗೆ ಮತ ಚಲಾವಣೆ ಆಗುವಂತೆ ವಿಶ್ವ ಹಿಂದು ಪರಿಷತ್ ಕರೆ ಕೊಡುತ್ತದೆ. ನೋಟಾ ಮತ ಹಾಕುವವರಲ್ಲಿ ಅತಿ ಹೆಚ್ಚು ವಿದ್ಯಾವಂತರೇ ಇದ್ದಾರೆ. ನೋಟಾದಿಂದ ನಷ್ಟವೇ ಹೊರತು ಲಾಭ ಇಲ್ಲ. ಇದಕ್ಕಾಗಿ ದೇಶದ ಹಿತ ಬಯಸುವ ಅಭ್ಯರ್ಥಿಗಳಿಗೆ ಮತ ಹಾಕುವಂತೆ ನಾವು ಅಭಿಯಾನ ಮಾಡುತ್ತೇವೆ ಎಂದು ಸ್ಥಾನು ಮಲಯನ್ ಹೇಳಿದರು. ಶರಣ್ ಪಂಪ್ವೆಲ್ ಉಪಸ್ಥಿತರಿದ್ದರು.
South Karnataka Executive President of the VHP M. B. Puranik said that about 300 representatives took part in the convention which passed a resolution opposing the Karnataka Hindu Religious Institutions and Charitable Endowments (Amendment) Bill, 2024. The Bill was passed by both the Houses of Legislature last month and is awaiting the approval of the Governor.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm