ಬ್ರೇಕಿಂಗ್ ನ್ಯೂಸ್
09-12-23 10:41 pm Mangaluru correspondent ಕರಾವಳಿ
ಮಂಗಳೂರು, ಡಿ.9: ಶ್ಯಾಕ್ಸ್ ಎಂಟರ್‌ಪ್ರೈಸಸ್‌ನ ಅಬ್ದುಲ್ ಶಕೀಲ್ ನಿರ್ಮಾಣದ ಬ್ಯಾರಿ ಭಾಷೆಯ ಚಲನಚಿತ್ರ ‘ಮುಸಾಫಿರ್’ಗೆ ‘ಕರ್ನಾಟಕ ನಂದಿ ಫಿಲ್ಮ್ -2023’ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಮುಸಾಫಿರ್’ ಸಿನೆಮಾದ ಮುಖ್ಯ ಪಾತ್ರಧಾರಿ ಮುಹಮ್ಮದ್ ಬಡ್ಡೂರು ಅವರ ಪರವಾಗಿ ಚಲನಚಿತ್ರ ನಿರ್ದೇಶಕ ಅಂಬಳಿಕೆ ರವಿ ಹಾಗೂ ‘ಮುಸಾಫಿರ್’ ಸಿನೆಮಾಕ್ಕೆ ಸಾಹಿತ್ಯ ಬರೆದ ಪತ್ರಕರ್ತ ಹಂಝ ಮಲಾರ್ ಅವರು ‘ಕಾಂತಾರ’ ಸಿನೆಮಾದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಹಂಝ ಮಲಾರ್ ಅವರ ‘ಸೂಫಿ ಬ್ಯಾರಿಯ ಝಕಾತ್ ಯಾತ್ರೆ’ ಕಥೆ ಆಧಾರಿತ ‘ಮುಸಾಫಿರ್’ ಸಿನೆಮಾದಲ್ಲಿ ನಟಿಸಿದ್ದ ಸಾಹಿತಿ ಮುಹಮ್ಮದ್ ಬಡ್ಡೂರ್ ‘ಅಬ್ಬಾ’ ಬ್ಯಾರಿ ಸಿನೆಮಾದಲ್ಲೂ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಕನ್ನಡವಲ್ಲದೆ ತುಳು, ಬ್ಯಾರಿ, ಕೊಂಕಣಿ, ಕೊಡವ, ಬಂಜಾರದಂತಹ ರಾಜ್ಯದ ಪ್ರಾದೇಶಿಕ ಭಾಷೆಗಳ ಸಿನೆಮಾವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಚಿತ್ರನಟರಾದ ರವಿಚಂದ್ರನ್, ವಿನೋದ್ ರಾಜ್, ಶ್ರೀನಾಥ್, ಧ್ರುವ ಸರ್ಜಾ, ಉಮಾಶ್ರೀ, ಅನು ಪ್ರಭಾಕರ್, ವಸಿಷ್ಠ ಸಿಂಹ, ಅನಿರುದ್ಧ, ಪ್ರೇಮಾ, ಹರಿಪ್ರಿಯಾ, ಉಲ್ಲಾಸ್ ಹಾಗೂ ಆಯೋಜಕರಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಂದಳಿಕೆ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್, ಅನಿತಾ ರೆಡ್ಡಿ, ಭಾ.ಮಾ. ಗಿರೀಶ್, ಹರ್ಷಿತಾ, ನಂದಿತಾ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
Musafir Beary movie bags Karnataka Nandi film award. The award was presented by Kantara Hero and director Rishab Shetty to Hamza Malar
25-04-25 07:32 pm
Bangalore Correspondent
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
Pahalgam Attack, Shivamogga, Manjunath: ಉಗ್ರರ...
24-04-25 10:13 pm
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
25-04-25 06:37 pm
HK News Desk
ಪಹಲ್ಗಾಮ್ ದುಷ್ಕೃತ್ಯ ; ಐದು ವರ್ಷ ಕಾಲ ಪಾಕಿನಲ್ಲಿದ್...
25-04-25 02:54 pm
BSF jawan, Pakistan: ಗಡಿಯಲ್ಲಿ ಬಿಕ್ಕಟ್ಟು ; ಪಾಕ...
25-04-25 01:16 pm
Melted plastic, Kollam, Hazard: ವಲಸೆ ಕಾರ್ಮಿಕರ...
24-04-25 09:00 pm
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
25-04-25 07:43 pm
Mangalore Correspondent
Mangalore News, Facebook post, Pahalgam Terro...
24-04-25 11:08 pm
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm