ಬ್ರೇಕಿಂಗ್ ನ್ಯೂಸ್
09-12-23 11:37 am Mangalore Correspondent ಕರಾವಳಿ
ಮಂಗಳೂರು, ಡಿ.9: ಶಿರಸಿ ತಾಲೂಕಿನ ಬಂಡಲ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮದುವೆ ಸಮಾರಂಭಕ್ಕೆ ಹೊರಟಿದ್ದ ಮಂಗಳೂರಿನ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಮಂಗಳೂರು ಕಿನ್ನಿಕಂಬಳ ಸಮೀಪದ ಕಂದಾವರ ನಿವಾಸಿ ರಾಮಕೃಷ್ಣ ರಾವ್(71), ಅವರ ಪತ್ನಿ ವಿದ್ಯಾಲಕ್ಷ್ಮೀ(67), ಪುಷ್ಪಾ ಮೋಹನ್ ರಾವ್(62), ಸುಹಾಸ ರಾವ್(30) ಹಾಗೂ ಕಾರು ಚಾಲಕ ಮೂಲತಃ ಸುರತ್ಕಲ್ ನಿವಾಸಿ, ಸದ್ಯ ಚೆನ್ನೈನಲ್ಲಿ ವೈದ್ಯರಾಗಿರುವ ಅರವಿಂದ(38) ಮೃತಪಟ್ಟವರು.


ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರಾಮಕೃಷ್ಣ ರಾವ್ ಅವರ ತಮ್ಮನ ಸೊಸೆಯ ಅಣ್ಣನ ಮಗನ ಮದುವೆ ಇತ್ತು. ಮದುವೆ ಕಾರ್ಯಕ್ಕೆ ಕುಟುಂಬಸ್ಥರು ತೆರಳುತ್ತಿದ್ದಾಗ ಕುಮಟಾ- ಶಿರಸಿ ಮಾರ್ಗದಲ್ಲಿ ಹುಬ್ಬಳ್ಳಿಯಿಂದ ಭಟ್ಕಳಕ್ಕೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ದೇಹಗಳು ಅದರೊಳಗೆ ಸಿಲುಕಿಕೊಂಡಿದ್ದವು. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನಿಬ್ಬರು ಆಸ್ಪತ್ರೆಗೆ ಒಯ್ಯುವ ಮಧ್ಯೆ ಕೊನೆಯುಸಿರೆಳೆದಿದ್ದರು.


ಮದುವೆಗೆ ತೆರಳಿದ ಕುಟುಂಬ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಕಂದಾವರ ಗ್ರಾಮದಲ್ಲಿ ಶೋಕ ಸಾಗರವೇ ನೆಲೆಸಿತ್ತು. ಮನೆಮಂದಿಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಭ್ರಮ ನೆಲೆಸಿದ್ದ ಮನೆಯಲ್ಲಿ ಸೂತಕ ಮನೆಮಾಡಿತ್ತು. ರಾಮಕೃಷ್ಣ ರಾವ್ – ವಿದ್ಯಾಲಕ್ಷ್ಮಿ ದಂಪತಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಪುತ್ರಿಯರಿಗೆ ಮದುವೆಯಾಗಿದ್ದು ಪುತ್ರ ವಕೀಲ ಕಂದಾವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರೂ ಆಗಿದ್ದಾರೆ. ಮೃತ ಪುಷ್ಪಾ ಮೋಹನ್ ರಾವ್ ಅವರು ರಾಮಕೃಷ್ಣ ರಾವ್ ಅವರ ತಮ್ಮನ ಪತ್ನಿ. ರಾಮಕೃಷ್ಣ ಅವರು ಕಿನ್ನಿಕಂಬಳ ರಾಧಾಕೃಷ್ಣ ಭಜನಾ ಮಂದಿರದ ಅರ್ಚಕರಾಗಿದ್ದು ಗುರುಪುರ ಕೈಕಂಬದಲ್ಲಿ ರಿಕ್ಷಾ ಚಾಲಕರಾಗಿದ್ದರು. ಜೊತೆಗೆ ಭಜನೆ, ನಗರ ಸಂಕೀರ್ತನೆ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.
ಮೃತ ಸುಹಾಸ ರಾವ್ ಅವರು ರಾಮಕೃಷ್ಣರ ತಮ್ಮನ ಮಗನಾಗಿದ್ದು, ಇನ್ಫೋಸಿಸ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಕಾರು ಚಲಾಯಿಸುತ್ತಿದ್ದ ಮೂಲತಃ ಸುರತ್ಕಲ್ ನಿವಾಸಿಯಾಗಿರುವ ಅರವಿಂದ್, ಸುಹಾಸ್ ಅವರ ತಮ್ಮನ ಪತ್ನಿಯ ಅಣ್ಣನಾಗಿದ್ದು, ಚೆನ್ನೈಯಲ್ಲಿ ವೈದ್ಯರಾಗಿದ್ದಾರೆ.
Five members of a family from Mangalore killed in bus car accident at Sirsi uttar kannada. According to police, three of the now-deceased were car occupants hailing from Mangalore and another belonged to Tamil Nadu. While three of them died on the spot, two others succumbed to their injuries at a hospital. They were on their way to attend a wedding at Sirsi.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm