ಬ್ರೇಕಿಂಗ್ ನ್ಯೂಸ್
29-11-23 12:21 pm Udupi Correspondent ಕರಾವಳಿ
ಕುಂದಾಪುರ, ನ 29 : ಅಜ್ಜ ಮೃತಪಟ್ಟ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗಾಗಿ ಚಾಮರಾಜನಗರದಿಂದ ಬೈಕಿನಲ್ಲಿ ಬರುತ್ತಿದ್ದ ಮೊಮ್ಮಗ ಅಪಘಾತಕ್ಕೀಡಾಗಿ ಸಾವಿಗೀಡಾದ ಘಟನೆ ನಡೆದಿದೆ. ಶೇಡಿಮನೆ ಗ್ರಾಮದ ಪಾಟ್ಲಮಕ್ಕಿಯಲ್ಲಿನ ನಾರಾಯಣ ಪೂಜಾರಿ (70) ಮೃತಪಟ್ಟಿದ್ದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲೆಂದು ಮೊಮ್ಮಗ ಬೈಕಿನಲ್ಲಿ ಹೊರಟಿದ್ದ.
ಆಜ್ರಿ ಗ್ರಾಮದ ಚೌಕುಳಮಕ್ಕಿ ನಿವಾಸಿ ಚೆನ್ನ ಪೂಜಾರಿ ಅವರ ಏಕೈಕ ಪುತ್ರ ನಿತೀಶ್ ಪೂಜಾರಿ (20) ಮೃತ ಯುವಕ.
ಚಾಮರಾಜನಗರದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ನಿತೀಶ್, ತಾಯಿ ಮನೆಯಲ್ಲಿ ಅಜ್ಜ ಮೃತಪಟ್ಟ ಸುದ್ದಿ ಕೇಳಿ ಊರಿಗೆ ಹೊರಟಿದ್ದ. ಅವಸರದಲ್ಲಿ ಊರಿಗೆ ಬರುವುದು ಬೇಡ ಎಂದು ಮನೆಯವರು ಹೇಳಿದ್ದರೂ ಅಜ್ಜನ ಮೇಲಿನ ಮೋಹದಿಂದ ತನ್ನ ಬೈಕಿನಲ್ಲಿ ಕುಂದಾಪುರಕ್ಕೆ ಹೊರಟಿದ್ದ.
ಸೋಮವಾರ ಸಂಜೆ ಚಾಮರಾಜನಗರ ತಾಲೂಕಿನ ಪಣ್ಯದಹಂಡಿ ಬಳಿ ರಸ್ತೆಯಲ್ಲಿ ಬರುತ್ತಿದ್ದಾಗ ಹಂಪ್ಸ್ ಗಮನಿಸದೇ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾನೆ. ಯುವಕನ ಮೃತದೇಹವನ್ನು ಊರಿಗೆ ತಂದು ಶೇಡಿಮನೆಯಲ್ಲಿ ಅಜ್ಜ - ಮೊಮ್ಮಗನ ಶವ ಸಂಸ್ಕಾರವನ್ನು ಜೊತೆಯಾಗಿ ನಡೆಸಲಾಯಿತು.
21 year old youth from kundapura killed in road accident on grandfathers death.
01-01-26 06:21 pm
Bangalore Correspondent
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಸವಾರಿ ; 70ರ...
01-01-26 03:05 pm
ಕೋಗಿಲು ಬಡಾವಣೆ ವಿವಾದ ; ಬಿಜೆಪಿಯಿಂದ ಸತ್ಯಶೋಧನಾ ಸಮ...
31-12-25 10:57 pm
ಕೋಗಿಲು ಬಡಾವಣೆ ವಿವಾದ ನಡುವೆಯೇ ಕೇರಳ ಸಿಎಂ ಪಿಣರಾಯಿ...
31-12-25 02:35 pm
01-01-26 09:34 pm
HK News Desk
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
01-01-26 09:43 am
Mangalore Correspondent
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮ...
31-12-25 11:47 am
01-01-26 08:25 pm
Mangalore Correspondent
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm
ಪುತ್ತೂರಿನ ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ಕಳ...
31-12-25 05:48 pm
ಸ್ಟಾಕ್ ಮಾರ್ಕೆಟ್ ಹೆಸ್ರಲ್ಲಿ ವಂಚಕರಿಂದ ಪಂಗನಾಮ ; 5...
30-12-25 10:40 pm