ಬ್ರೇಕಿಂಗ್ ನ್ಯೂಸ್
21-10-23 05:18 pm Mangalore Correspondent ಕರಾವಳಿ
ಮಂಗಳೂರು, ಅ.21: ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ವಿಭಾಗದ ಉಪ ನಿರ್ದೇಶಕಿಯಾಗಿರುವ ಮಹಿಳಾ ಅಧಿಕಾರಿ ಲಾಕ್ ಆಗಿದ್ದಾರೆ. ದಕ್ಷಿಣ ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಅಧಿಕಾರಿ.
2023ರ ಆಗಸ್ಟ್ 31ರಂದು ವಲಯ ಅರಣ್ಯ ಅಧಿಕಾರಿಯಾಗಿ ನಿವೃತ್ತರಾಗಿದ್ದ ಪರಮೇಶ್ ಎನ್.ಪಿ ಎಂಬವರು ಈ ಪ್ರಕರಣದಲ್ಲಿ ದೂರುದಾರರು. ಇವರು ನಿವೃತ್ತಿ ಆಗೋದಕ್ಕೂ ಮುನ್ನ ಕೃಷಿ ಇಲಾಖೆ, ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ನಿಯೋಜನೆ ಮೇಲೆ ಕೆಲಸ ಮಾಡಿದ್ದರು. ಇವರು ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 2022-23 ಮತ್ತು 24ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬಂಟ್ವಾಳ ತಾಲೂಕಿನ ಸಜಿಪ ನಡು, ಸಜಿಪ ಮುನ್ನೂರು, ಸಜಿಪ ಮೂಡ, ಕುರ್ನಾಡು, ನರಿಂಗಾನ, ಬಾಳೆಪುಣಿ, ಮಂಜನಾಡಿ ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ 50 ಲಕ್ಷ ಮೌಲ್ಯದ ಸಸಿಗಳನ್ನು ವಿತರಣೆ ಮಾಡಿದ್ದರು.
ಇದಕ್ಕಾಗಿ ತೋಟಗಾರಿಕಾ ಸಸಿಗಳನ್ನು ಕಣ್ಣನ್ ನರ್ಸರಿ ಮಾಲಕರಾದ ಧೋರಿ ಮತ್ತು ಶಬರೀಶ್ ನರ್ಸರಿಯ ಭೈರೇ ಗೌಡ ಎಂಬವರಿಂದ ಖರೀದಿಸಿದ್ದು, ಅವರಿಗೆ 18 ಲಕ್ಷ ಮೊತ್ತ ನೀಡಬೇಕಾಗಿತ್ತು. ಇದಲ್ಲದೆ, ಅರಣ್ಯ ಗುತ್ತಿಗೆದಾರರಿಂದ ನಾಟಿ ಮಾಡಿಸಿದ್ದ ಸಸಿಗಳ ಮೊತ್ತ 32 ಲಕ್ಷ ಬಿಲ್ ಬಾಕಿಯಿತ್ತು. ಮುಂಗಡ ಸಸಿಗಳನ್ನು ಪಡೆದು ನಾಟಿ ಮಾಡಿದ್ದು, ಸರಕಾರದಿಂದ ಹಣ ಬಾರದೆ ಹಣ ಪಾವತಿಯಾಗದೆ ಬಾಕಿ ಉಳಿದಿತ್ತು. ಈ ಹಣವನ್ನು ನೀಡುವರೇ ನರ್ಸರಿ ಮಾಲಕರು ಕೇಳುತ್ತಿದ್ದುದರಿಂದ ನಿವೃತ್ತ ಅಧಿಕಾರಿ ಪರಮೇಶ್ ಬಿಲ್ ಪಾಸ್ ಮಾಡುವಂತೆ ಮಂಗಳೂರು ವಿಭಾಗದ ಕೃಷಿ ನಿರ್ದೇಶಕಿ ಭಾರತಮ್ಮ ಅವರಲ್ಲಿ ಕೇಳಿಕೊಂಡಿದ್ದರು. ಬಿಲ್ ಪಾಸ್ ಮಾಡಿಸಲು ಒಟ್ಟು ಮೊತ್ತದ 15 ಶೇಕಡಾ ಲಂಚ ನೀಡಬೇಕೆಂದು ಭಾರತಮ್ಮ ಬೇಡಿಕೆ ಇರಿಸಿದ್ದರು.
ಈ ಬಗ್ಗೆ ಅ.20ರಂದು ಪರಮೇಶ್, ಕೃಷಿ ನಿರ್ದೇಶಕಿ ಭಾರತಮ್ಮ ಅವರ ಕಚೇರಿಗೆ ತೆರಳಿದಾಗ ಒಂದು ಲಕ್ಷ ರೂ. ಲಂಚ ಮೊದಲು ನೀಡುವಂತೆ ಕೇಳಿಕೊಂಡಿದ್ದರು. ಅಧಿಕಾರಿಯ ಭ್ರಷ್ಟಾಚಾರದ ಬಗ್ಗೆ ಪರಮೇಶ್, ಲೋಕಾಯುಕ್ತ ಗಮನಕ್ಕೆ ತಂದಿದ್ದು ಅವರ ಸೂಚನೆಯಂತೆ ಶನಿವಾರ ಒಂದು ಲಕ್ಷ ರೂ. ಲಂಚ ನೀಡುತ್ತಿದ್ದಾಗಲೇ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ಮಹಿಳಾ ಅಧಿಕಾರಿ ಭಾರತಮ್ಮ ಅವರನ್ನು ಲೋಕಾಯುಕ್ತ ಬಂಧಿಸಿದ್ದು, ಹಣವನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಸಿ.ಎ. ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚೆಲುವರಾಜು, ಕಲಾವತಿ, ಇನ್ಸ್ ಪೆಕ್ಟರ್ ಸುರೇಶ್ ಕುಮಾರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
Mangalore Assistant Director of Agriculture Bharatamma arrested by Lokayukta over bribe.
27-04-25 09:22 pm
HK News Desk
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
27-04-25 08:42 pm
HK News Desk
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
ಸಿಂಧು ನದಿಯನ್ನು ತಡೆದರೆ ರಕ್ತ ಹರಿಯುತ್ತದೆ ; ಮಾಜಿ...
26-04-25 08:21 pm
Iran Blast: ಇರಾನ್ ಬಂದರಿನಲ್ಲಿ ಭಯಾನಕ ಸ್ಫೋಟ ; 4...
26-04-25 07:46 pm
27-04-25 11:09 pm
Mangalore Correspondent
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
KMF Elections 2025, Belupu Deviprasad Shetty:...
26-04-25 08:03 pm
27-04-25 10:59 pm
Mangalore Correspondent
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm