ಬ್ರೇಕಿಂಗ್ ನ್ಯೂಸ್
01-01-26 09:30 pm HK News Desk ದೇಶ - ವಿದೇಶ
ಬೆರ್ನ್, ಜ 01, 26 : ಅವರೆಲ್ಲ ನ್ಯೂ ಇಯರ್ ಪಾರ್ಟಿಗಾಗಿ ಆ ರೆಸ್ಟೋರೆಂಟ್‌ನಲ್ಲಿ ಸೇರಿದ್ದರು. ಆ ಪ್ರಸಿದ್ಧ ರೆಸ್ಟೋರೆಂಟ್ ಹೊಸ ವರ್ಷಾಚರಣೆಗೆ ಭರದ ಸಿದ್ಧತೆ ಮಾಡಿದ್ದರು. ಜನರು ಕೂಡ ಕುಡಿತ, ಡ್ಯಾನ್ಸ್, ಮೋಜು ಮಸ್ತಿ ಮಾಡುತ್ತಾ ನ್ಯೂ ಇಯರ್ ಸೆಲೆಬ್ರೇಟ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಸಂಭವಿಸಿದ ಸ್ಫೋಟದಿಂದ ಹೊಸ ವರ್ಷಾಚರಣೆ ನಡೆಯುತ್ತಿದ್ದ ಆ ಜಾಗದಲ್ಲಿ ಶೋಕಾಚರಣೆ ನಡೆಯುವಂತೆ ಆಗಿದೆ.
ಹೌದು.. ಸ್ವಿಟ್ಜರ್ಲೆಂಡ್‌ನ ಸ್ವಿಸ್ ನಗರದ ಕ್ರಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಬಾರ್ ಒಂದರಲ್ಲಿ ಭಾರೀ ಸ್ಫೋಟ ಸಂಭವಿಸಿ ಬಹುದೊಡ್ಡ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.




ಮನಮೋಹಕ ಸ್ವಿಸ್ ಆಲ್ಪ್ಸ್‌ನ ಹೃದಯಭಾಗದಲ್ಲಿರುವ ಕ್ರಾನ್ಸ್ ಮೊಂಟಾನಾ ಪಟ್ಟಣ, ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಸ್ಕೀಯಿಂಗ್, ಸ್ನೋಬೋರ್ಡಿಂಗ್ ಮತ್ತು ಗಾಲ್ಫ್‌ನಂತಹ ಚಟುವಟಿಕೆಗಳಿಂದ ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಸ್ವಿಟ್ಜರ್‌ಲೆಂಡ್‌ನ ಜಿನೀವಾದ ಹೃದಯಭಾಗದಲ್ಲಿರುವ ಅತ್ಯಂತ ಹಳೆಯ ಐಷಾರಾಮಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಿಂಗಳುಗಳ ನಂತರ ಈ ಘಟನೆ ಸಂಭವಿಸಿದೆ.
1834ರಲ್ಲಿ ಆರಂಭವಾದ ಮತ್ತು ದೇಶದ ಹೆಗ್ಗುರುತೆಂದು ಪರಿಗಣಿಸಲಾದ ಪ್ರಸಿದ್ಧ ಫೋರ್ ಸೀಸನ್ಸ್ ಹೋಟೆಲ್ ಡೆಸ್ ಬರ್ಗ್ಯೂಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
'ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಕಾರ್ಯಕರ್ತರು ತಕ್ಷಣವೇ ಧಾವಿಸಿ ಹಲವಾರು ಸಂತ್ರಸ್ತರಿಗೆ ಸಹಾಯ ಮಾಡಿದರು. ಗಂಟೆಗಳ ನಂತರವೂ ಬಾರ್ ಹೊರಗೆ ಆಂಬ್ಯುಲೆನ್ಸ್‌ಗಳು ನಿಂತಿದ್ದವು ಹಾಗೂ ಬಾರ್ನ ಕಿಟಕಿಗಳು ಒಡೆದಿರುವುದು ಕಾಣುತ್ತಿತ್ತು' ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
What began as a joyful New Year celebration in a popular Swiss resort town turned into a devastating tragedy. A massive explosion followed by a fire at a luxury bar in Crans-Montana left over 40 people dead and more than 100 injured, many of them critically.
01-01-26 06:21 pm
Bangalore Correspondent
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಸವಾರಿ ; 70ರ...
01-01-26 03:05 pm
ಕೋಗಿಲು ಬಡಾವಣೆ ವಿವಾದ ; ಬಿಜೆಪಿಯಿಂದ ಸತ್ಯಶೋಧನಾ ಸಮ...
31-12-25 10:57 pm
ಕೋಗಿಲು ಬಡಾವಣೆ ವಿವಾದ ನಡುವೆಯೇ ಕೇರಳ ಸಿಎಂ ಪಿಣರಾಯಿ...
31-12-25 02:35 pm
01-01-26 09:34 pm
HK News Desk
ಸ್ವಿಟ್ಜರ್‌ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
01-01-26 09:43 am
Mangalore Correspondent
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮ...
31-12-25 11:47 am
01-01-26 08:25 pm
Mangalore Correspondent
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm
ಪುತ್ತೂರಿನ ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ಕಳ...
31-12-25 05:48 pm
ಸ್ಟಾಕ್ ಮಾರ್ಕೆಟ್ ಹೆಸ್ರಲ್ಲಿ ವಂಚಕರಿಂದ ಪಂಗನಾಮ ; 5...
30-12-25 10:40 pm