ಬ್ರೇಕಿಂಗ್ ನ್ಯೂಸ್
04-09-23 08:34 pm Mangalore Correspondent ಕರಾವಳಿ
ಮಂಗಳೂರು, ಸೆ.4: ಅವರೆಲ್ಲ ವೈದ್ಯರಾಗುವ ಕನಸು ಹೊತ್ತು ಲಕ್ಷಾಂತರ ರೂಪಾಯಿ ಸುರಿದು ಮೆಡಿಕಲ್ ಕಾಲೇಜು ಸೇರಿದವರು. ಆದರೆ ಬರಗೆಟ್ಟ ಕಾಲೇಜು ಆಡಳಿತ, ಸರಕಾರಿ ವ್ಯವಸ್ಥೆಯ ಕಾರಣದಿಂದಾಗಿ ಆ ಹದಿಹರೆಯದ ಮಕ್ಕಳು ಈಗ ತಮ್ಮ ಭವಿಷ್ಯದ ಬಗ್ಗೆಯೇ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಸರಕಾರದ ಗಮನಸೆಳೆಯಲು ಪ್ರತಿಭಟನೆಯ ಅಸ್ತ್ರ ಹಿಡಿದಿದ್ದಾರೆ. ಇದು ಮಂಗಳೂರು ಹೊರವಲಯದ ನೀರುಮಾರ್ಗದಲ್ಲಿ ಎರಡು ವರ್ಷಗಳ ಹಿಂದೆ ಆರಂಭಗೊಂಡ ಜಿಆರ್ ಮೆಡಿಕಲ್ ಕಾಲೇಜಿನ ಸದ್ಯದ ಸ್ಥಿತಿ.
ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಒಡೆತನದಲ್ಲಿ ಜಿಆರ್ ಮೆಡಿಕಲ್ ಕಾಲೇಜನ್ನು 2021ರಲ್ಲಿ ಸ್ಥಾಪಿಸಲಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮತಿ ಪಡೆದೇ ಕಾಲೇಜು ಆರಂಭಿಸಲಾಗಿತ್ತು. ಆದರೆ ಎರಡೇ ವರ್ಷದಲ್ಲಿ ವೈದ್ಯಕೀಯ ಆಯೋಗದ ಅಧಿಕಾರಿಗಳು ಕಾಲೇಜಿನಲ್ಲಿ ಅನುಮತಿಯನ್ನು ರದ್ದುಗೊಳಿಸಿದ್ದರು. ಸೂಕ್ತ ಸೌಲಭ್ಯ ಇಲ್ಲದೇ ಮೆಡಿಕಲ್ ಕಾಲೇಜು ಆರಂಭಿಸಿದ್ದೇ ಅದಕ್ಕೆ ಕಾರಣ. ಅಗತ್ಯ ಮೂಲಸೌಕರ್ಯ, ನುರಿತ ಸಿಬಂದಿ, ವಿದ್ಯಾರ್ಥಿಗಳ ಕಲಿಕೆಗೆ ಸುಸಜ್ಜಿತ ಆಸ್ಪತ್ರೆ ಆರಂಭಿಸಿದ ಬಳಿಕವೇ ಕಾಲೇಜು ಪ್ರವೇಶ ಮಾಡುವಂತೆ ಹೇಳಿ ಆಯೋಗದಿಂದ ಕಾಲೇಜು ಆಡಳಿತಕ್ಕೆ ನೋಟಿಸ್ ಮಾಡಲಾಗಿತ್ತು. ಇದಲ್ಲದೆ, 2022-23ನೇ ಸಾಲಿನಲ್ಲಿ ಎರಡನೇ ವರ್ಷಕ್ಕೆ ಕಾಲೇಜು ಪ್ರವೇಶಾತಿ ಮಾಡಿಕೊಳ್ಳದಂತೆ ಸೂಚನೆ ನೀಡಲಾಗಿತ್ತು. ಆದರೆ ಕಾಲೇಜಿನ ಆಡಳಿತ, ಆಯೋಗದ ಸೂಚನೆಯನ್ನೇ ಬದಿಗೊತ್ತಿ ಕಳೆದ ವರ್ಷ 150 ವಿದ್ಯಾರ್ಥಿಗಳನ್ನು ಅಡ್ಮಿಶನ್ ಮಾಡಿಕೊಂಡಿತ್ತು.
2022ರ ಸೆಪ್ಟಂಬರ್ ತಿಂಗಳಲ್ಲಿ ಆಯೋಗದಿಂದ ಸೂಚನೆ ನೀಡಿದ್ದರೂ, ಆನಂತರ 150 ವಿದ್ಯಾರ್ಥಿಗಳಿಗೆ ಪ್ರವೇಶ ಮಾಡಿಕೊಂಡಿದ್ದೇ ಅಕ್ರಮ. ಲಕ್ಷಾಂತರ ರೂಪಾಯಿ ಕಟ್ಟಿ ಎಂಬಿಬಿಎಸ್ ಸೀಟು ಪಡೆದಿದ್ದವರು ಈಗ ಅತಂತ್ರರಾಗಿದ್ದಾರೆ. 150 ಸೀಟುಗಳ ಪೈಕಿ 120 ಸೀಟು ಸರಕಾರಿ ಕೋಟಾ ಆಗಿದ್ದರೆ, 30 ಸೀಟು ಮ್ಯಾನೇಜ್ಮೆಂಟ್ ಕೋಟಾದಲ್ಲಿ ತುಂಬಿಕೊಳ್ಳಲಾಗಿತ್ತು. ಸರಕಾರಿ ಕೋಟಾದಡಿ ಪ್ರವೇಶ ಪಡೆದಿದ್ದವರ ಪೈಕಿ 83 ಸೀಟು ಜನರಲ್ ಮೆರಿಟ್ ಮತ್ತು 37 ಸೀಟು ಮೀಸಲಿನ ಆಧಾರದಲ್ಲಿತ್ತು. ಎಂಬಿಬಿಎಸ್ ಕಲಿಯಲು ಜನರಲ್ ಮೆರಿಟಲ್ಲಿ ಸೀಟು ಪಡೆದವರು ಪ್ರತಿ ವರ್ಷಕ್ಕೆ 10,92,800 ರೂ. ಶುಲ್ಕ ಮತ್ತು 1.15 ಲಕ್ಷ ರೂಪಾಯಿ ಹೆಚ್ಚುವರಿ ಮೊತ್ತವನ್ನು ತುಂಬಬೇಕಿತ್ತು. ಮೀಸಲು ಕೋಟಾದಲ್ಲಿ ಬಂದಿರುವ 37 ಮಂದಿ ವರ್ಷಕ್ಕೆ 1.40 ಲಕ್ಷ ಶುಲ್ಕ ಮತ್ತು 1.15 ಲಕ್ಷ ಹೆಚ್ಚುವರಿ ಮೊತ್ತವನ್ನು ಡೊನೇಶನ್ ರೂಪದಲ್ಲಿ ತುಂಬಿದ್ದಾರೆ. ಉಳಿದಂತೆ 30 ಸೀಟುಗಳನ್ನು ಮ್ಯಾನೇಜ್ಮೆಂಟ್ ಕೋಟಾದಡಿ ತುಂಬಲಾಗಿದ್ದು, ಅದರಲ್ಲಿ ಇಷ್ಟ ಬಂದಷ್ಟು ಡೊನೇಶನ್ ಬಾಚಿಕೊಳ್ಳುವುದು ಮಾಮೂಲಿ. ಮೊದಲು ವರ್ಷವೂ 150 ಸೀಟು ಭರ್ತಿ ಮಾಡಲಾಗಿತ್ತು.
ಅಕ್ರಮದ ಬಗ್ಗೆ ಒಂದು ತಿಂಗಳ ಹಿಂದೆ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ರಾಜ್ಯ ಸರಕಾರದ ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ತನಿಖೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಆದರೆ ರಾಜ್ಯ ಆರೋಗ್ಯ ಇಲಾಖೆಯಿಂದ ಯಾವುದೇ ತನಿಖೆ ಆಗಿರುವಂತೆ ಕಾಣುತ್ತಿಲ್ಲ. ಈ ನಡುವೆ, ವಿದ್ಯಾರ್ಥಿಗಳು ಕಾಲೇಜಿನ ಸಿಬಂದಿ ಬಳಿ ಮಾಹಿತಿ ಕೇಳಿದರೆ, ಸರಿಯಾಗುತ್ತೆ ಅನ್ನುವ ಉತ್ತರವನ್ನಷ್ಟೇ ನೀಡುತ್ತಿದ್ದರು. ಆಗಸ್ಟ್ 18, 22, 25 ಹೀಗೆ ಗಡುವು ನೀಡುತ್ತಾ ಬಂದಿದ್ದು, ಈಗ ಸೆ.6, 12ಕ್ಕೆ ಸರಿಯಾಗುತ್ತೆ ಅಂತ ಹೇಳುತ್ತಿದ್ದಾರೆ. ಈವರೆಗೂ ಕಾಲೇಜಿನ ಚೇರ್ಮನ್ ಮುಂದೆ ಬಂದು ನಮ್ಮಲ್ಲಿ ಮಾತನಾಡಿಲ್ಲ. ನಾವು ಸರಕಾರಿ ಕೋಟಾದಲ್ಲಿಯೇ ಪ್ರವೇಶ ಪಡೆದಿದ್ದೇವೆ. ಕಾಲೇಜಿಗೆ ಅನುಮತಿ ಇಲ್ಲಾಂದ್ರೆ, ಇವರು ಸೀಟ್ ಅಲಾಟ್ ಮಾಡಿದ್ದು ಯಾಕೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಬಳಿ ಸಮಸ್ಯೆ ಬಗ್ಗೆ ಕೇಳಿದಾಗ, ಹಾಸ್ಪಿಟಲ್ ಇದೆಯೆಂದು ಹೇಳುತ್ತಾರೆ, ಇಲ್ಲಿ ರೋಗಿಗಳೇ ಇಲ್ಲ. ಸರಿಯಾದ ಫ್ಯಾಕಲ್ಟಿ ಇಲ್ಲ. ಮೊದಲ ವರ್ಷದಲ್ಲಿದ್ದವರೂ ಈಗ ಯಾಕೆ ಬಂದಿದ್ದೇವೋ ಅನ್ನುವ ಚಿಂತೆಯಲ್ಲಿದ್ದಾರೆ. ನಾವು ಎರಡನೇ ವರ್ಷಕ್ಕೆ ಬಂದವರು ಪೂರ್ತಿ ನಡು ನೀರಿನಲ್ಲಿದ್ದೇವೆ. ಈಗ ಕ್ಲಾಸ್ ಮಾಡುತ್ತಿದ್ದಾರೆ. ಸರಿಯಾಗುತ್ತೆ ಎನ್ನುತ್ತಿದ್ದಾರೆ. ಸರಿಯಾಗಿದ್ದರೆ, ದಾಖಲೆ ತೋರಿಸಿ ಎಂದರೆ ಇಲ್ಲ. ಸರಕಾರ ಆದ್ರೂ ನಮ್ಮ ಸಹಾಯಕ್ಕೆ ಬರಬೇಕಲ್ಲಾ ಎಂದು ಹೇಳುತ್ತಾರೆ. ಮಾಹಿತಿ ಪ್ರಕಾರ, ಮಾಲೀಕ ಗಣೇಶ್ ರಾವ್ ದೆಹಲಿ ಮಟ್ಟದಲ್ಲಿ ಕಾಲೇಜಿಗೆ ಮತ್ತೆ ಮಾನ್ಯತೆ ದೊರಕಿಸಿಕೊಳ್ಳಲು ಹೆಣಗಾಡುತ್ತಿದ್ದಾರಂತೆ.
GR Medical College Medical seat fraud, hundreds of students gather to protesy against administration in Mangalore.
29-04-25 04:28 pm
HK News Desk
Praveen Nettaru, Mohsin Shukur, Karwar Police...
29-04-25 01:04 pm
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 05:45 pm
Mangalore Correspondent
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
29-04-25 02:53 pm
Mangalore Correspondent
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm