Sowjanya rape case, protest Belthangady, voilent protest: ಸೌಜನ್ಯಾ ಸ್ತ್ರೀ ಸ್ವರೂಪ ಬಿಟ್ಟು ಕಾಳಿಯಾಗಿದ್ದಾಳೆ, ಉಗ್ರ ರೂಪ ಪಡೆಯುವ ಮುನ್ನ ಎಚ್ಚತ್ತುಕೊಳ್ಳಿ ; ಹೋರಾಟಕ್ಕೆ ಒಕ್ಕಲಿಗ ಸಮಾಜದ ಪೂರ್ಣ ಬೆಂಬಲ ಇದೆ ; ಆದಿಚುಂಚನಗಿರಿ ಮಠದ ಧರ್ಮಪಾಲನಾಥ ಸ್ವಾಮೀಜಿ 

03-09-23 12:25 pm       Mangalore Correspondent   ಕರಾವಳಿ

ಸೌಜನ್ಯಾ ಸ್ತ್ರೀ ಸ್ವರೂಪ ತೊರೆದು ಕಾಳಿ ಸ್ವರೂಪವನ್ನ ಪಡೆದಿದ್ದಾಳೆ. ಅವಳ ಆತ್ಮ ಭೀಕರ ಸ್ವರೂಪ ಪಡೆಯುವ ಮುನ್ನ ಸರಕಾರ ಎಚ್ಚೆತ್ತು ಕೊಳ್ಳಬೇಕು ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಹೇಳಿದ್ದಾರೆ.

ಬೆಳ್ತಂಗಡಿ, ಸೆ.3: ಸೌಜನ್ಯಾ ಸ್ತ್ರೀ ಸ್ವರೂಪ ತೊರೆದು ಕಾಳಿ ಸ್ವರೂಪವನ್ನ ಪಡೆದಿದ್ದಾಳೆ. ಅವಳ ಆತ್ಮ ಭೀಕರ ಸ್ವರೂಪ ಪಡೆಯುವ ಮುನ್ನ ಸರಕಾರ ಎಚ್ಚೆತ್ತು ಕೊಳ್ಳಬೇಕು ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಹೇಳಿದ್ದಾರೆ. 

ಸೌಜನ್ಯಾ ಪರವಾಗಿ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಧರ್ಮಪಾಲನಾಥ ಸ್ವಾಮೀಜಿ ಭಾಷಣ ಮಾಡಿದ್ದಾರೆ. ಸತ್ಯ, ನ್ಯಾಯದ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಸಂಪೂರ್ಣ ಬೆಂಬಲವಿದೆ. ಒಕ್ಕಲಿಗ ಸಮಾಜದ ಬೆಂಬಲ ಇದೆ. 

ಆರು ವರ್ಷ ಜೈಲಿನಲ್ಲಿದ್ದ ಸಂತೋಷ ರಾವ್ ಗೆ ಮರಳಿ ಜೀವನ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ರಾಜ್ಯ ಸರಕಾರ ಅವನ ಬದುಕಿಗೆ ಏನಾದ್ರು ವ್ಯವಸ್ಥೆ ಮಾಡಬೇಕು. ಜೊತೆಗೆ ಸೌಜನ್ಯಾ ಕುಟುಂಬಕ್ಕೂ ರಾಜ್ಯ ಸರಕಾರ ರಕ್ಷಣೆ ನೀಡಬೇಕು. 11 ವರ್ಷಗಳ ಸಿಬಿಐ ತನಿಖೆಯಲ್ಲಿ ನ್ಯಾಯ ಸಿಗದೇ ಇರುವುದು ನಮ್ಮ ವ್ಯವಸ್ಥೆಯ ದುರಂತ. 

ತನಿಖೆಯ ಸಂದರ್ಭದಲ್ಲಿ ಒಬ್ಬನಿಂದ ಆಗಿರುವ ಕೃತ್ಯ ಅಲ್ಲ. ಸಾಮೂಹಿಕ ಅತ್ಯಾಚಾರ ಆಗಿರುವುದು ಪತ್ತೆಯಾಗಿತ್ತು. ಹಾಗಾದರೆ ಯಾರು ಈ ಕೃತ್ಯ ಎಸಗಿದ್ದೆಂದು ಪತ್ತೆಯಾಗಬೇಕು. ಅದಕ್ಕಾಗಿ ಶವ ಪರೀಕ್ಷೆ ಮಾಡಿದ ವೈದ್ಯರು ಮತ್ತು ಪೊಲೀಸ್ ತನಿಖಾಧಿಕಾರಿಯನ್ನ ಮಂಪರು ಪರೀಕ್ಷೆ ಮಾಡಬೇಕು. ಮಹೇಶ್ ಶೆಟ್ಟಿ ಅವರ ಹೋರಾಟಕ್ಕೆ ಆದಿಚುಂಚನಗಿರಿ ಮಠ ಮತ್ತು ಒಕ್ಕಲಿಗ ಸಮಾಜದ ಬೆಂಬಲ ಇದೆ.‌ ನಮ್ಮ ಮಠದ ಹಿರಿಯ ಸ್ವಾಮೀಜಿಗಳು ಸಭೆ ಕರೆದಿದ್ದಾರೆ. ಮಾಹಿತಿ ನೀಡುತ್ತೇವೆ.‌ ಸರಕಾರ ಶೀಘ್ರ ತನಿಖೆ ನಡೆಸಿ ಯಾರು ಆರೋಪಿ ಎಂಬುದನ್ನು ಪತ್ತೆ ಮಾಡಬೇಕು‌ ಎಂದು ಸ್ವಾಮೀಜಿ ಪ್ರಖರ ಭಾಷಣ ಮಾಡಿದ್ದಾರೆ. 

ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ಗಿರೀಶ್ ಮಟ್ಟೆಣ್ಣವರ್, ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ ಮತ್ತಿತರರು ಇದ್ದಾರೆ. ಸಾವಿರಾರು ಜನರು ಸೇರಿದ್ದಾರೆ.

Sowjanya rape case, massive protest held at Belthangady, Mangalore Shaka math swamiji warns about voilent protest.