Mangalore commissioner Kuldeep Jain: ಕಮಿಷನರ್ ಫೋನ್ ಇನ್ ; ಖಾಸಗಿ ಬಸ್ಸಿನ ಬಗ್ಗೆಯೇ ದೂರು, ಚಿಟ್ ಫಂಡ್ ಮಾಡಿ ಸೋತು ಹೋಗಿದ್ದೇನೆಂದು ಅಳಲು, ಸಿಗರೇಟ್ ಮಾರಿದ್ದಕ್ಕೆ ದಂಡ ವಿಧಿಸುವ ಪೊಲೀಸರು !

02-09-23 11:01 pm       Mangalore Correspondent   ಕರಾವಳಿ

ಖಾಸಗಿ ಬಸ್ ಸಿಬಂದಿಗಳ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಫೋನ್ ಇನ್ ಕಾರ್ಯಕ್ರಮದಲ್ಲಿಯೂ ದೂರುಗಳ ಸುರಿಮಳೆ ಕೇಳಿಬಂತು. ಹಿರಿಯ ನಾಗರಿಕರು ಫೋನ್ ಮಾಡಿ, ಬಸ್ ಸಿಬಂದಿಯ ಅಸಭ್ಯ ಭಾಷೆ, ಸೌಜನ್ಯ ರಹಿತ ನಡತೆಗಳ ಬಗ್ಗೆ ದೂರು ಹೇಳಿಕೊಂಡಿದ್ದಾರೆ. ಅಲ್ಲದೆ, ಸಿಟಿ ಬಸ್ ಗಳಲ್ಲಿ ಎತ್ತರದ ಸ್ಟೆಪ್ ಇರುವುದರಿಂದ ಹತ್ತಲು ಸಾಧ್ಯವಾಗುತ್ತಿಲ್ಲ ಎಂದೂ ದೂರಿದ್ದಾರೆ.

ಮಂಗಳೂರು, ಸೆ.2: ಖಾಸಗಿ ಬಸ್ ಸಿಬಂದಿಗಳ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಫೋನ್ ಇನ್ ಕಾರ್ಯಕ್ರಮದಲ್ಲಿಯೂ ದೂರುಗಳ ಸುರಿಮಳೆ ಕೇಳಿಬಂತು. ಹಿರಿಯ ನಾಗರಿಕರು ಫೋನ್ ಮಾಡಿ, ಬಸ್ ಸಿಬಂದಿಯ ಅಸಭ್ಯ ಭಾಷೆ, ಸೌಜನ್ಯ ರಹಿತ ನಡತೆಗಳ ಬಗ್ಗೆ ದೂರು ಹೇಳಿಕೊಂಡಿದ್ದಾರೆ. ಅಲ್ಲದೆ, ಸಿಟಿ ಬಸ್ ಗಳಲ್ಲಿ ಎತ್ತರದ ಸ್ಟೆಪ್ ಇರುವುದರಿಂದ ಹತ್ತಲು ಸಾಧ್ಯವಾಗುತ್ತಿಲ್ಲ ಎಂದೂ ದೂರಿದ್ದಾರೆ.

ಇನ್ನೊಬ್ಬ ನಾಗರಿಕರು ಫೋನ್ ಮಾಡಿ, ಸಿಟಿ ಬಸ್ಸಿನಲ್ಲಿ ಹಿರಿಯ ನಾಗರಿಕರಿಗೆಂದು ಸೀಟು ರಿಸರ್ವ್ ಇದ್ದರೂ ಅದನ್ನು ಸಿಬಂದಿ ಮಾಡಿಕೊಡುವುದಿಲ್ಲ. ಕೇಳಿದರೆ ಉಲ್ಟಾ ಮಾತನಾಡುತ್ತಾರೆ ಎಂದು ಅಳಲು ಹೇಳಿದ್ದಾರೆ. ಮತ್ತೊಬ್ಬರು ಕರೆ ಮಾಡಿ, ಕುಂಜತ್ತ್ ಬೈಲಿಗೆ ಬರುವ ಬಸ್ ಅಲ್ಲಿಯೇ ಮುಂದೆ ಇರುವ ಅತ್ರಬೈಲಿನ ವರೆಗೆ ಬಾರದೆ ಅರ್ಧದಲ್ಲೇ ಹಿಂತಿರುಗುತ್ತದೆ ಎಂದಿದ್ದಾರೆ. ಮತ್ತೊಬ್ಬರು ಕರೆ ಮಾಡಿ, ಶಕ್ತಿನಗರದ ಪ್ರೀತಿನಗರಕ್ಕೆ ಸಿಟಿ ಬಸ್ ಹಾಕಬೇಕು, ಅಲ್ಲಿನ ನಿವಾಸಿಗಳು ಬಸ್ ಸೌಲಭ್ಯ ಇಲ್ಲದೆ ಕಷ್ಟಪಡುತ್ತಾರೆ ಎಂದಿದ್ದಾರೆ.

ಇದೇ ವೇಳೆ, ವ್ಯಕ್ತಿಯೊಬ್ಬರು ಕರೆ ಮಾಡಿ ಚಿಟ್ ಫಂಡ್ ಮಾಡಿ ಸೋತು ಹೋಗಿದ್ದೇನೆ, ಈಗ ಹಣ ಕೇಳಿ ನನ್ನನ್ನು ಸತಾಯಿಸುತ್ತಿದ್ದಾರೆ. ದಾರಿ ತೋರಿಸಬೇಕೆಂದು ಕೇಳಿಕೊಂಡಿದ್ದಾರೆ. ಕಮಿಷನರ್ ಪ್ರತಿಕ್ರಿಯಿಸಿ, ಏನು ಸಮಸ್ಯೆಯಾಗಿದೆ ಎಂದು ಲಿಖಿತವಾಗಿ ಪೊಲೀಸ್ ದೂರು ಕೊಡಿ. ಏನಾದ್ರೂ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಾ ನೋಡೋಣ, ಧೃತಿ ಗೆಡಬೇಡಿ ಎಂದು ಧೈರ್ಯ ಹೇಳಿದ್ದಾರೆ.

ಮತ್ತಿಬ್ಬರು ಕರೆ ಮಾಡಿ, ಕೆಲವು ಬಸ್ಸಿನವರು ರಸ್ತೆ ಮಧ್ಯೆ ಬಸ್ ನಿಲ್ಲಿಸುತ್ತಾರೆ. ಇದರಿಂದ ತೊಂದರೆಯಾಗುತ್ತೆ ಎಂದಿದ್ದಾರೆ. ಪಂಪ್ವೆಲ್ ಬಸ್ ನಿಲ್ದಾಣ ಇದ್ದರೂ ನಡುವೆ ಬಸ್ ನಿಲ್ಲಿಸಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ, ಇದಕ್ಕೆ ಕೂಡಲೇ ಸ್ಪಂದಿಸಬೇಕು ಎಂದಿದ್ದಾರೆ. ಈ ಬಗ್ಗೆ ಟ್ರಾಫಿಕ್ ಪೊಲೀಸರಿಗೆ ಸ್ಥಳದಿಂದಲೇ ಕಮಿಷನರ್ ಸೂಚನೆ ನೀಡಿದ್ದು, ಆನಂತರ ಪಂಪ್ವೆಲ್ ಜಂಕ್ಷನ್ನಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ತೀವಿ ಎಂದು ಸ್ಥಳೀಯ ಪೊಲೀಸರು ತಾವು ಸ್ಪಂದಿಸಿದ್ದನ್ನು ಸ್ಥಳದಿಂದಲೇ ಫೋಟೋ ಹಾಕಿ ತೋರಿಸಿದ್ದಾರೆ.

ಇಬ್ಬರು ಕರೆ ಮಾಡಿ, ನಾವು ಸಿಗರೇಟ್ ಮಾರಿದ್ದಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಆಕ್ಷೇಪ ಹೇಳಿಕೊಂಡಿದ್ದಾರೆ. ಪ್ರತಿಕ್ರಿಯೆ ನೀಡಿದ ಕಮಿಷನರ್ ಕುಲದೀಪ್ ಜೈನ್, ಶಾಲೆ, ಕಾಲೇಜು ಆವರಣದ ನೂರು ಮೀಟರ್ ಆವರಣದಲ್ಲಿ ಮಾದಕ ವಸ್ತು ಮಾರಾಟ ಮಾಡಬಾರದು. ಅದು ಬಿಟ್ಟರೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದಿದ್ದಾರೆ. ಮರವೂರಿನಲ್ಲಿ ಅಕ್ರಮ ಮರಳು ಮಾಫಿಯಾ, ಆಟೋ ರಿಕ್ಷಾಗಳು ಕರ್ಕಶ ಹಾರ್ನ್ ಹಾಕುವ ಬಗ್ಗೆಯೂ ಸಾರ್ವಜನಿಕರು ದೂರು ಹೇಳಿದ್ದಾರೆ.

People throng to complain against private buses in Phone in program held by commissioner Kuldeep Jain. The phone in program was held after accidented Nandu accidented Nanthoor in Mangalore.