ಕುಡಿದ ನಶೆಯಲ್ಲಿ ಮೂವರು ಗಂಡು ಮಕ್ಕಳ ಜಗಳ ; ಮನನೊಂದ ತಾಯಿ ಮನೆಯಲ್ಲೇ ನೇಣಿಗೆ ಶರಣು 

01-09-23 09:45 pm       Mangalore Correspondent   ಕರಾವಳಿ

ತನ್ನ ಮೂವರು ಗಂಡು ಮಕ್ಕಳು ವಿಪರೀತ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದುದರಿಂದ ಮನನೊಂದ ತಾಯಿ ಮನೆ ಪಕ್ಕಾಸಿಗೆ ನೇಣು ಬಿಗಿದು ಸಾವಿಗೆ ಶರಣಾದ ಘಟನೆ ಮುಲ್ಕಿಯಲ್ಲಿ ನಡೆದಿದೆ.

ಮಂಗಳೂರು, ಸೆ.1: ತನ್ನ ಮೂವರು ಗಂಡು ಮಕ್ಕಳು ವಿಪರೀತ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದುದರಿಂದ ಮನನೊಂದ ತಾಯಿ ಮನೆ ಪಕ್ಕಾಸಿಗೆ ನೇಣು ಬಿಗಿದು ಸಾವಿಗೆ ಶರಣಾದ ಘಟನೆ ಮುಲ್ಕಿಯಲ್ಲಿ ನಡೆದಿದೆ.

ಮುಲ್ಕಿಯ ಕೆ.ಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದ ಕೊರಂಟಬೆಟ್ಟು ಕಾಲೋನಿಯಲ್ಲಿ ಘಟನೆ ನಡೆದಿದ್ದು ಸುಮಿತ್ರ (45) ಮೃತ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಮಕ್ಕಳಾದ ಮಂಜುನಾಥ (25), ಪ್ರಹ್ಲಾದ ಯಾನೆ ಪ್ರಭು (19), ಸಂಜೀವ(22) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಗುರುವಾರ ರಾತ್ರಿ 11.30 ಸುಮಾರಿಗೆ ಮದ್ಯದ ನಶೆಯಲ್ಲಿ ಮೂವರು ಮಕ್ಕಳು ಮನೆಯಲ್ಲಿ ಜಗಳ ಮಾಡಿಕೊಂಡಿದ್ದಾರೆ. ಇದರಿಂದ ತಾಯಿ ಸುಮಿತ್ರ ನೊಂದಿದ್ದು ಮನೆಯ ಕೋಣೆಯ ಪಕ್ಕಾಸಿಗೆ ಸೀರೆಯನ್ನು ಬಿಗಿದು ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪಣಂಬೂರು ಎಸಿಪಿ, ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

45 year old women commits suicide after fight with her children at Mulki in Mangalore.