ಬ್ರೇಕಿಂಗ್ ನ್ಯೂಸ್
31-08-23 10:51 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 31: ಖಾಸಗಿ ಸಿಟಿ ಬಸ್ಸಿನಿಂದ ಕಂಡಕ್ಟರ್ ಹೊರಕ್ಕೆ ಎಸೆಯಲ್ಪಟ್ಟು ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಎಚ್ಚತ್ತುಕೊಂಡಿದ್ದಾರೆ. ಸಿಟಿ ಬಸ್ಸುಗಳ ಧಾವಂತ, ನಿಯಂತ್ರಣ ಇಲ್ಲದ ಚಾಲನೆಯ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬಂದಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಬಸ್ ಮಾಲಕರ ಸಭೆಯನ್ನು ಕರೆದು ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಇದೇ ವೇಳೆ, ಮಂಗಳೂರು ನಗರ ಭಾಗದಲ್ಲಿ ಸಂಚಾರಿ ವಿಭಾಗದ ಪೊಲೀಸರು ಸ್ಪೆಷಲ್ ಡ್ರೈವ್ ಮಾಡಿದ್ದು, ಬಸ್ಸಿನಲ್ಲಿ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದವರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ. ಒಂದೇ ದಿನ ಒಟ್ಟು 123 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಮಿಷನರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ 30ಕ್ಕೂ ಹೆಚ್ಚು ಬಸ್ ಮಾಲಕರು ಪಾಲ್ಗೊಂಡಿದ್ದು, ಪೊಲೀಸರ ಸೂಚನೆಗಳನ್ನು ಆಲಿಸಿದ್ದಾರೆ.
ಪ್ರಮುಖವಾಗಿ ಸಿಟಿ ಬಸ್ಸುಗಳಲ್ಲಿ ಡೋರ್ ಅಳವಡಿಸಬೇಕು, ಬಾಗಿಲು ರಹಿತ ಪ್ರಯಾಣದಿಂದಾಗಿ ಪ್ರಯಾಣಿಕರು ಹೊರಗೆ ಎಸೆಯಲ್ಪಟ್ಟು ಅಪಘಾತ ಆಗಿರುವುದನ್ನು ಉಲ್ಲೇಖಿಸಿ ಆ ರೀತಿ ಆಗದಂತೆ ನೋಡಿಕೊಳ್ಳಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ಬಸ್ಸಿನ ಫುಟ್ ಬೋರ್ಡಿನಲ್ಲಿ ನಿಂತು ಪ್ರಯಾಣ ಮಾಡಲು ಅವಕಾಶ ನೀಡಬಾರದು. ಪ್ರಯಾಣಿಕರು ಫುಟ್ ಬೋರ್ಡಿನಲ್ಲಿ ನಿಂತಿದ್ದರೆ, ಬಸ್ಸನ್ನು ಚಾಲನೆ ಮಾಡಬಾರದು, ಚಾಲಕರು ಟೈಮ್ ಕೀಪಿಂಗ್ ಹೆಸರಲ್ಲಿ ಬೇಕಾಬಿಟ್ಟಿಯಾಗಿ ಬಸ್ ಚಾಲನೆ ಮಾಡುತ್ತಾರೆ. ಇದರಿಂದ ವ್ಯಾಪಕ ಸಾರ್ವಜನಿಕ ದೂರು ಬಂದಿರುವುದನ್ನು ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಬಸ್ ಮಾಲಕರ ಗಮನಕ್ಕೆ ತಂದಿದ್ದಾರೆ.
ಡೋರ್ ಅಳವಡಿಕೆಗೆ ಕಡ್ಡಾಯ ಮಾಡುವಂತಿಲ್ಲ
ಕರ್ನಾಟಕ ಮೋಟಾರು ವಾಹನ ಕಾಯ್ದೆಯಡಿ ಸಿಟಿ ಬಸ್ಸುಗಳಲ್ಲಿ ಡೋರ್ ಅಳವಡಿಸಬೇಕೆಂಬ ನಿಯಮದ ಉಲ್ಲೇಖ ಇಲ್ಲ. ಇದರಿಂದಾಗಿ ಬಸ್ಸುಗಳಲ್ಲಿ ಡೋರ್ ಅಳವಡಿಸುವುದನ್ನು ಕಾನೂನಿನಡಿ ಕಡ್ಡಾಯಗೊಳಿಸಲು ಆಗುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಅಸಹಾಯಕತೆ ಹೇಳಿಕೊಂಡಿದ್ದಾರೆ. ಎಂವಿ ಆಕ್ಟ್ 155ರ ಪ್ರಕಾರ, ಮುನ್ಸಿಪಾಲಿಟಿ ಮತ್ತು ಕಾರ್ಪೊರೇಶನ್ ಏರಿಯಾಗಳಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಡೋರ್ ಅಳವಡಿಸಬೇಕಿಲ್ಲ ಎಂದಿದೆ. ಇದೇ ಕಾನೂನನ್ನು ಮುಂದಿಟ್ಟು ಸಿಟಿ ಬಸ್ ಗಳಲ್ಲಿ ಡೋರ್ ಅಳವಡಿಸದೇ ಬಸ್ ಮಾಲಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಒಂದು ವರ್ಷದ ಹಿಂದೆ ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಿಂದ ವಿದ್ಯಾರ್ಥಿ ಹೊರಕ್ಕೆ ಎಸೆಯಲ್ಪಟ್ಟು ಸಾವು ಕಂಡಿದ್ದ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಸಿಟಿ ಬಸ್ಸುಗಳಲ್ಲಿ ಡೋರ್ ಕಡ್ಡಾಯಗೊಳಿಸಬೇಕು ಅನ್ನುವ ಆಗ್ರಹ ಕೇಳಿಬಂದಾಗ ಮಂಗಳೂರು ಪೊಲೀಸರು, ರಾಜ್ಯ ಸರಕಾರಕ್ಕೆ ಪತ್ರ ಬರೆದು ಎಂವಿ ಆಕ್ಟ್ ನಲ್ಲಿ ತಿದ್ದುಪಡಿ ಮಾಡಿ ಡೋರ್ ಕಡ್ಡಾಯ ಮಾಡುವಂತೆ ಕೇಳಿಕೊಂಡಿದ್ದರು. ರಾಜ್ಯ ಸರಕಾರ ಆ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರದೇ ಇರುವುದು ಅಮಾಯಕರು ಮತ್ತೆ ಮತ್ತೆ ಪ್ರಾಣ ಕಳಕೊಳ್ಳುವಂತಾಗಿದೆ.
ಡೋರ್ ಅಳವಡಿಸಲು ಸಲಹೆ ಮಾಡಿದ್ದೇವಷ್ಟೇ !
ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಅವರಲ್ಲಿ ಈ ಬಗ್ಗೆ ಕೇಳಿದಾಗ, ನಾವು ಬಸ್ ಮಾಲಕರ ಸಭೆಯಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಿಟಿ ಬಸ್ಸುಗಳಲ್ಲಿ ಡೋರ್ ಅಳವಡಿಸುವಂತೆ ಕೇಳಿಕೊಂಡಿದ್ದೇವೆ. ಹಾಗಂತ, ಈ ಬಗ್ಗೆ ಕಡ್ಡಾಯ ಸೂಚನೆ ನೀಡುವಂತೆ ಇಲ್ಲ. ಮೋಟಾರು ವಾಹನ ಕಾಯ್ದೆಯಲ್ಲೇ ಆ ರೀತಿ ಇಲ್ಲ. ಮುನ್ಸಿಪಾಲಿಟಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಡೋರ್ ಕಡ್ಡಾಯದಿಂದ ವಿನಾಯ್ತಿ ಇದೆ. ಆದರೆ ಕಾರ್ಕಳ, ಮೂಡುಬಿದ್ರೆ, ಉಡುಪಿಗೆ ತೆರಳುವ ದೂರದ ಪ್ರಯಾಣದ ಬಸ್ಸುಗಳಲ್ಲಿ ಡೋರ್ ಅಳವಡಿಸುವಂತೆ ಬಸ್ ಮಾಲಕರಿಗೆ ಕಡ್ಡಾಯ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
No order for closed bus doors of private bus says Mangalore Police Commissioner Kuldeep Jain after accident at Nanthoor. Commissioner has made it clear that the police department cannot order the buses to have closed doora to avoid accident. It was just a suggestion to avoid accidents. This came to light after bus conductor lost his life after falling from the speeding bus.
09-07-25 10:45 pm
Bangalore Correspondent
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
ಸಿಎಂ ಸೀಟು ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ; ಮೊದಲು...
08-07-25 08:35 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
09-07-25 10:25 pm
Mangalore Correspondent
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
Mangalore Peace meeting Home Minister: ಎಳೆಯ ಮ...
09-07-25 07:37 pm
ಮಂಗಳೂರಿನಲ್ಲಿ ಒಂದೇ ದಿನ ಅಂತರದಲ್ಲಿ ಹಾರ್ಟ್ ಅಟ್ಯಾಕ...
09-07-25 06:53 pm
09-07-25 10:56 pm
Mangalore Correspondent
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm