ಬ್ರೇಕಿಂಗ್ ನ್ಯೂಸ್
29-08-23 06:46 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 29: ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ನಗರದ ಪಡೀಲ್ ನಲ್ಲಿ ನಡೆಯುತ್ತಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದಾರೆ. ಬೃಹತ್ ಕಚೇರಿಯನ್ನು ನೋಡಿ ಬೆರಗಾದ ಸಚಿವರು ಇಷ್ಟೊಂದು ದೊಡ್ಡ ಸಂಕೀರ್ಣವನ್ನು ಮಾಡಿದ್ದೀರಲ್ಲಾ.. ಇಷ್ಟೆಲ್ಲ ಬೇಕಿತ್ತಾ.. ಪ್ರಾಜೆಕ್ಟ್ ಮೊತ್ತದಲ್ಲಿ ಕೆಲಸ ಮುಗಿಸುವುದು ಬಿಟ್ಟು ಮತ್ತೆ ಹೆಚ್ಚುವರಿ ಮೊತ್ತ ಕೇಳ್ತಿದ್ದೀರಲ್ಲಾ ಎಂದು ಅಧಿಕಾರಿಗಳನ್ನು ತೀವ್ರ ರೈಟ್ ಲೆಫ್ಟ್ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಇಂಜಿನಿಯರಿಂಗ್ ಸಲಹೆ ನೀಡಿದ್ದ ಧರ್ಮರಾಜ್ ಮತ್ತು ಪಿಡಬ್ಲ್ಯುಡಿ ಇಲಾಖೆಯ ಇಂಜಿನಿಯರ್ ಗಳನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಇಷ್ಟೊಂದು ದುಡ್ಡು ಹಾಕಿದ್ದೀರಲ್ಲಾ.. ಇದಕ್ಕೆ ಸುರಿದ ಹಣ ನಿಮ್ಮನೆಯದ್ದಾ ಅಥವಾ ನಮ್ಮನೆಯದ್ದಾ.. ಸಾರ್ವಜನಿಕರ ತೆರಿಗೆಯ ದುಡ್ಡು ಅನ್ನುವ ಕಾಮನ್ ಸೆನ್ಸ್ ಇಲ್ವೇನ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಮೊದಲ ಹಂತದ ಪ್ರಾಜೆಕ್ಟ್ ನಲ್ಲಿ 55 ಕೋಟಿ ಹಣ ಮಂಜೂರಾಗಿದ್ದು, ಅದರ ಕಾಮಗಾರಿ ಆಗಿದೆ. ಮತ್ತೆ 29 ಕೋಟಿ ಅನುದಾನಕ್ಕಾಗಿ ಸರಕಾರಕ್ಕೆ ಬರೆಯಲಾಗಿದೆ. ಅದಕ್ಕೆ ಮಂಜೂರಾತಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ಗಮನ ಸೆಳೆದಾಗ ಸಚಿವರು, ಲೆಕ್ಕಕ್ಕಿಂತ ಹೆಚ್ಚು ಖರ್ಚು ಮಾಡಿರುವುದನ್ನು ತೋರಿಸಿ ಆಕ್ಷೇಪಿಸಿದ್ದಾರೆ.
ಎಲ್ಲ 38 ಇಲಾಖೆಯ ಕಚೇರಿಗಳನ್ನು ಇಲ್ಲಿ ತಗೊಂಡು ಬರಲು ಕಚೇರಿ ಅಂತೀರಲ್ಲಾ.. ಅವರೆಲ್ಲ ಸ್ವಂತ ಕಚೇರಿ ಬಿಟ್ಟು ಇಲ್ಲಿಗೆ ಯಾಕೆ ಬರಬೇಕು. ಅವರು ಬಂದಿಲ್ಲಾಂದ್ರೆ, ಇಲ್ಲಿ ಕಟ್ಟಡ ಕಟ್ಟಿ ವೇಸ್ಟ್ ಆಗಲ್ವೇ.. ಒಟ್ಟು ಪ್ರಾಜೆಕ್ಟ್ ಮೊತ್ತ ಎಂದ ಮೇಲೆ, ಅದರಲ್ಲಿ ಮೊದಲ ಹಂತ, ಎರಡನೇ ಹಂತ ಎಂದು ಮಾಡಿದ್ದು ಯಾರು. ಯೋಜನಾ ವೆಚ್ಚ 55 ಕೋಟಿ ಎಂದು ಕೊಟ್ಟಿದ್ದರಲ್ಲಿ ಎಲ್ಲ ಕೆಲಸ ಮುಗಿಸಬೇಕಿತ್ತು. ನಿಮಗೆ ಬೇಕಾದ ರೀತಿ ರಿವೈಸ್ ಮಾಡ್ಕೊಂಡು ಬೇಕಾಬಿಟ್ಟಿ ಖರ್ಚು ಮಾಡ್ತೀರಾ.. ಬೇರೆ ಜಿಲ್ಲೆಗಳಲ್ಲಿ ಸರಿಯಾದ ಕಚೇರಿಗಳೇ ಇಲ್ಲದ ಸ್ಥಿತಿಯಿದೆ. ಇಲ್ಲಿ ನೋಡಿದರೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿದ್ದೀರಿ. ಒಳಗಡೆ ಜಾಗ ವೇಸ್ಟ್ ಮಾಡಿದ್ದೀರಿ.. ಹೆಚ್ಚುವರಿ ಮೊತ್ತದ ಪ್ರಸ್ತಾಪಕ್ಕೆ ದುಡ್ಡು ಕೊಡೋಕೆ ಆಗಲ್ಲ. ಈಗಾಗಲೇ 80 ಶೇಕಡಾ ಕೆಲಸ ಆಗಿದೆ. ಅದನ್ನು ಇಲ್ಲಿಗೇ ಕಂಪ್ಲೀಟ್ ಮಾಡೋಕೆ ಎಷ್ಟು ಬೇಕು ಹೇಳಿ.. ಸದ್ಯಕ್ಕೆ ಡೀಸಿ ಕಚೇರಿಯನ್ನು ಮಾತ್ರ ಇಲ್ಲಿಗೆ ಸ್ಥಳಾಂತರ ಮಾಡಿಸಿ. ಬೇರೆಲ್ಲ ಇಲಾಖೆ ಆಮೇಲೆ ನೋಡೋಣ. ಅವರು ಬಂದಲ್ಲಿ ಆಯಾ ಇಲಾಖೆಯಿಂದ ಹಣ ತೆಗೆಸ್ಕೊಂಡು ಖರ್ಚು ಮಾಡಲಿ ಎಂದು ಹೇಳಿದ ಸಚಿವರು, ಕೂಡಲೇ ರಿ ಎಸ್ಟಿಮೇಟ್ ಮಾಡಿ ಪ್ರಸ್ತಾವನೆ ಕಳಿಸಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಪಡೀಲಿನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮಾಡಬೇಕೆಂದು 2015ರಲ್ಲಿ ಆಗಿನ ಜಿಲ್ಲಾಧಿಕಾರಿ ಇಬ್ರಾಹಿಂ ಇದ್ದಾಗ 5.8
ಎಕ್ರೆ ವ್ಯಾಪ್ತಿಯಲ್ಲಿ ಯೋಜನೆ ತಯಾರಿಸಲಾಗಿತ್ತು. ಪಡೀಲಿನ ಅರಣ್ಯ ಇಲಾಖೆಯ ಜಾಗ ಸ್ವಾಧೀನಕ್ಕೆ ಮತ್ತು ಅಲ್ಲಿನ ಮರಗಳನ್ನು ಕಡಿಯುವುದಕ್ಕೆ ಮೊದಲಿಗೆ ಆಕ್ಷೇಪವೂ ವ್ಯಕ್ತವಾಗಿತ್ತು. ಕೋರ್ಟ್ ಜಟಾಪಟಿಗಳನ್ನು ಬದಿಗೊತ್ತಿ ಆಗಿನ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ನೇತೃತ್ವದಲ್ಲಿ ಯೋಜನೆಗೆ ಅನುದಾನ ಒದಗಿಸಿದ್ದರು. ಮೊದಲು 41 ಕೋಟಿಯಿದ್ದ ಯೋಜನಾ ವೆಚ್ಚ ಆನಂತರ 55 ಕೋಟಿಗೇರಿತ್ತು. 2018ರಲ್ಲಿಯೇ ಕಾಮಗಾರಿ ಆರಂಭಗೊಂಡಿದ್ದು 2020ರ ವೇಳೆಗೆ ಮೊದಲ ಹಂತದ ಕಾಮಗಾರಿ ಬಹುತೇಕ ಮುಗಿದಿತ್ತು. ಆನಂತರ, ಹಣ ಸಾಕಾಗಲ್ಲವೆಂದು ಹೆಚ್ಚುವರಿ ಅನುದಾನಕ್ಕಾಗಿ ಅಧಿಕಾರಿಗಳು ಸರಕಾರದ ಮಂಜೂರಾತಿಗೆ ಬರೆದಿದ್ದರು. ಆದರೆ ಹೆಚ್ಚುವರಿ ಅನುದಾನಕ್ಕೆ ಮಂಜೂರಾತಿ ಸಿಗದೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.
ಬಿಜೆಪಿ ಸರಕಾರ ಇದ್ದಾಗ ಹಲವು ಮೀಟಿಂಗ್ ಆಗಿದ್ದರೂ, ಕಾಮಗಾರಿಗೆ ವೇಗ ಸಿಕ್ಕಿರಲಿಲ್ಲ. ಹೆಚ್ಚುವರಿ ಮೊತ್ತದ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತುಕತೆ ಮಾಡುತ್ತೇವೆಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಮತ್ತು ಶಾಸಕರು ಹೇಳಿದ್ದರೂ, ಅದಕ್ಕೆ ಮೇಲಿನಿಂದ ಒಪ್ಪಿಗೆ ಸಿಕ್ಕಿರಲಿಲ್ಲ, ಮಂಗಳವಾರ ಬೆಳಗ್ಗೆ ಕಚೇರಿ ಸಂಕೀರ್ಣವನ್ನು ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಭೈರೇಗೌಡ, ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ ಕಾಮಗಾರಿ ಪೂರ್ತಿಗೊಳಿಸದೆ ಉಳಿಸಿದ್ದಾರೆ. ಬಹುತೇಕ ಕಾಮಗಾರಿ ಮುಗಿದಿದ್ದು, ಮುಂದಿನ ಆರು ತಿಂಗಳಲ್ಲಿ ಕಚೇರಿ ಶಿಫ್ಟ್ ಮಾಡುತ್ತೇವೆ. ಜಿಲ್ಲಾಧಿಕಾರಿ ಕಚೇರಿಗೆ ಬೇಕಾದ ಅಗತ್ಯ ಮೂಲಸೌಲಭ್ಯಗಳ ಕಾಮಗಾರಿಗೆ ಟೆಂಡರ್ ಮಾಡುತ್ತೇವೆ. 2024ರಲ್ಲಿ ಎಲ್ಲ ಕಾಮಗಾರಿ ಪೂರ್ತಿಗೊಳಿಸಲಿದ್ದೇವೆ ಎಂದರು.
Minister Krishna Byre Gowda slams officers for delay of DC office complex work in Mangalore. Speaking to media persons after inspecting the incomplete work on the DC office Complex on Tuesday, the Minister said that the work of the complex had commenced in 2017-18. Already, Rs 55 crore has been utilised.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm