Moodbidri moral policing, Mangalore: ಮೂಡುಬಿದ್ರೆಯಲ್ಲಿ ನೈತಿಕ ಪೊಲೀಸ್ ಪ್ರಕರಣ ; ಮೂವರು ಯುವಕರ ಬಂಧನ 

24-08-23 02:10 pm       Mangalore Correspondent   ಕರಾವಳಿ

ಮೂಡಬಿದ್ರೆಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಿಂದು ಸಂಘಟನೆಗೆ ಸೇರಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಭಿಲಾಷ್, ಪ್ರೇಮ್ ಭಂಡಾರಿ ಮತ್ತು ಸಂಜಯ್ ಬಂಧಿತರು. 

ಮಂಗಳೂರು, ಆಗಸ್ಟ್ 24: ಮೂಡಬಿದ್ರೆಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಿಂದು ಸಂಘಟನೆಗೆ ಸೇರಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಭಿಲಾಷ್, ಪ್ರೇಮ್ ಭಂಡಾರಿ ಮತ್ತು ಸಂಜಯ್ ಬಂಧಿತರು. 

ಮೂಡಬಿದ್ರೆ ಬಳಿಯ ರಾಜೀವ ಗಾಂಧಿ ಸಂಕೀರ್ಣದ ಎದುರು ಆಗಸ್ಟ್ 22ರಂದು ಘಟನೆ ನಡೆದಿತ್ತು. ಖಾಸಗಿ ಕಾಲೇಜಿನ ಹಿಂದು ವಿದ್ಯಾರ್ಥಿನಿಯ ಜೊತೆ ಮಾತನಾಡುತ್ತಿದ್ದ ಅನ್ಯಮತೀಯ ವಿದ್ಯಾರ್ಥಿಗೆ ತಂಡವೊಂದು ಹಲ್ಲೆ ನಡೆಸಿತ್ತು. ಈ ಕುರಿತು ಮೂವರು ಯುವಕರ ವಿರುದ್ಧ ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.‌

ಮೂಡುಬಿದ್ರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಬೆಂಗಳೂರಿಗೆ ತೆರಳಲು ಪೇಟೆಗೆ ಬಂದಿದ್ದು ಅಂದು ರಾತ್ರಿ ಬಸ್ಸಿಗಾಗಿ ಕಾಯುತ್ತಿದ್ದಳು. ಅದೇ ಸಮಯದಲ್ಲಿ ಆಗಮಿಸಿದ್ದ ಕೋಟೆಬಾಗಿಲು ಸಮೀಪದ ವಿದ್ಯಾರ್ಥಿ, ಹುಡುಗಿಯೊಂದಿಗೆ ಮಾತನಾಡಿದ್ದಾನೆ. ಯುವತಿ ಬಸ್ ಹತ್ತಿ ತೆರಳಿದ ಬಳಿಕ ವಿದ್ಯಾರ್ಥಿಗೆ ಗುಂಪು ಸೇರಿದ್ದ ಯುವಕರು ಹಲ್ಲೆ ನಡೆಸಿ ನಿಂದಿಸಿದ್ದರು.‌ ಮೂಡಬಿದ್ರೆ ಪೊಲೀಸರು ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Moodbidri moral policing,three Hindu activist arrested by Mangalore Police.