Sullia Gram Panchayat staff arrested by Lokayukta: ಲಂಚ ಕೇಳಿ ಲೋಕಾಯುಕ್ತ ಬಲೆಗೆ ಬಿದ್ದ ಅರಂತೋಡು ಗ್ರಾಮ ಕರಣಿಕ 

19-08-23 03:35 pm       Mangalore Correspondent   ಕರಾವಳಿ

ತಾಲೂಕಿನ ಅರಂತೋಡು ಗ್ರಾಮದ ಗ್ರಾಮ ಕರಣಿಕ ಐದು ಸಾವಿರ ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ‌‌. 

ಸುಳ್ಯ, ಆಗಸ್ಟ್ 19: ತಾಲೂಕಿನ ಅರಂತೋಡು ಗ್ರಾಮದ ಗ್ರಾಮ ಕರಣಿಕ ಐದು ಸಾವಿರ ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ‌‌. 

ಗ್ರಾಮ ಕರಣಿಕ ಮೀಯಾಸಾಬ್ ಮುಲ್ಲ ಲೋಕಾಯುಕ್ತ ಬಲೆಗೆ ಬಿದ್ದ ವ್ಯಕ್ತಿ. ಖಾತೆ ಬದಲಾವಣೆಗೆ ಎನ್ಓಸಿ ನೀಡಲು ಎಂಟು ಸಾವಿರ ನೀಡಬೇಕೆಂದು ವ್ಯಕ್ತಿಯೊಬ್ಬರ ಬಳಿ ಡಿಮ್ಯಾಂಡ್ ಮಾಡಿದ್ದ. ಇಂದು ಬೆಳಗ್ಗೆ ಹಣ ಪಡೆಯುತ್ತಿದ್ದಾಗಲೇ ಆರೋಪಿ ರೆಡ್‌ಹ್ಯಾಂಡ್ ಆಗಿ‌ ಸಿಕ್ಕಿ ಬಿದ್ದಿದ್ದಾನೆ. 

ಅರಂತೋಡು ನಿವಾಸಿ ಹರಿಪ್ರಸಾದ್ ಎಂಬವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಕರಣಿಕ 8 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಅಲ್ಲದೆ, ಮೊದಲ ಕಂತಿನಲ್ಲಿ‌ 3 ಸಾವಿರ ರೂಪಾಯಿ ಪಡೆದಿದ್ದ.

ಬಾಕಿ ಉಳಿದ‌ ಐದು ಸಾವಿರ ಹಣವನ್ನು ಇಂದು ಬೆಳಗ್ಗೆ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿದ್ದಾರೆ. ಆರೋಪಿಯ ಬಳಿ ಲಂಚದ 5 ಸಾವಿರ ರೂಪಾಯಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ದ‌.ಕ. ಎಸ್ಪಿ ಸೈಮನ್ ಮತ್ತು ಡಿವೈಎಸ್ಪಿ ಚೆಲುವರಾಜು ಮಾರ್ಗದರ್ಶನದಲ್ಲಿ

Sullia Gram Panchayat staff arrested by Lokayukta for demanding 5 thousand bribe. The arrested has been identified as Miyasab Mulla.