ಸೌಜನ್ಯಾ ಕೊಲೆಗೆ ಜಾಗದ ಮೋಹ ಕಾರಣ ; ಸ್ಫೋಟಕ ಹೇಳಿಕೆ ನೀಡಿದ ವಸಂತ ಬಂಗೇರ 

18-08-23 04:51 pm       Mangalore Correspondent   ಕರಾವಳಿ

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಘಟನೆಗೆ ಜಾಗದ ಮೋಹ ಕಾರಣ. ಅದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೊಸ ಬಾಂಬ್ ಸಿಡಿಸಿದ್ದಾರೆ. 

ಬೆಳ್ತಂಗಡಿ, ಆಗಸ್ಟ್ 17:  ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಘಟನೆಗೆ ಜಾಗದ ಮೋಹ ಕಾರಣ. ಅದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೊಸ ಬಾಂಬ್ ಸಿಡಿಸಿದ್ದಾರೆ. 

ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಸಂತ ಬಂಗೇರ ಸ್ಫೋಟಕ ಹೇಳಿಕೆ ನೀಡಿದ್ದು ಧರ್ಮಸ್ಥಳದ ಹೆಗಡೆ ಪರಿವಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. 

ಹೆಗಡೆ ಪರಿವಾರದಂತಹ ಜಮೀನ್ದಾರರು ಹುಟ್ಟಲೇಬಾರದು. ತಾಲೂಕಿನಲ್ಲಿ ಎಲ್ಲಾ ಕಡೆ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.‌ ನನ್ನ ತಂದೆಯೂ ಜಮೀನ್ದಾರ ಆಗಿದ್ದವರು. ಆದರೆ ಯಾರ್ಯಾರ ಜಮೀನನ್ನು ವಶಪಡಿಸಿಕೊಳ್ಳಲು ನಾನು ಬಿಡಲಿಲ್ಲ. ಆ ಕಾರಣಕ್ಕಾಗಿ ನನ್ನ ಹೆಸರಿನಲ್ಲಿ ಇಂದಿಗೂ ಯಾವುದೇ ಜಮೀನಿಲ್ಲ. 

ಈ ಪರಿವಾರ ಮಾತ್ರ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳ ಪಕ್ಕದ ಜಮೀನುಗಳನ್ನೇ  ವಶಪಡಿಸಿಕೊಳ್ಳುತ್ತಿದ್ದಾರೆ. ಬಿಟ್ಟಿಯಾಗಿ ಜಮೀನು ಸಿಕ್ಕಿದರೆ ಆ ಪರಿವಾರಕ್ಕೆ ಭಾರೀ ಖುಷಿ. ಹಣ ಕೊಟ್ಟು ಜಮೀನು ಪಡೆದಿದ್ದರೆ ಅವರಿಗೆ ಕೊಂಚ ಬಿಸಿ. ಇಂತಹ ಜಮೀನ್ದಾರಿಕೆಯನ್ನು ಜನರು ವಿರೋಧಿಸಬೇಕು. ವಿರೋಧಿಸದೇ ಇದ್ದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. 

ಸೌಜನ್ಯ ಪ್ರಕರಣವೂ ಇದೇ ಕಾರಣಕ್ಕೆ ನಡೆದಿರುವುದು. ಸೌಜನ್ಯ ಕೊಲೆ ನಡೆದಿರುವುದೂ ಜಾಗದ ವಿಚಾರಕ್ಕಾಗಿ ಎಂದು ನೇರವಾಗಿ ವಸಂತ ಬಂಗೇರ ಸಾರ್ವಜನಿಕ ವೇದಿಕೆಯಲ್ಲಿ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈಗಾಗಲೇ ಕರಾವಳಿಯಲ್ಲಿ ಸಂಚಲನ ಎಬ್ಬಿಸಿರುವ ಸೌಜನ್ಯಾ ಪ್ರಕರಣದ ಬಗ್ಗೆ ವಸಂತ ಬಂಗೇರ ನೀಡುತ್ತಿರುವ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಬಿಸಿ ಏಳುವಂತೆ ಮಾಡಿದೆ.

Dharmasthala Sowjanya was killed becuase of Land dispute says former congress MLA of Belthangady Vasantha Bangera, sparks controversy. The video of this has gone viral on social media.