Mangalore Heart Attack, Nursing Student: ಹಠಾತ್ ಹೃದಯಾಘಾತ ; ಮಂಗಳೂರಿನ ನರ್ಸಿಂಗ್ ವಿದ್ಯಾರ್ಥಿನಿ ಸಾವು, ಲೋ ಬಿಪಿ ಕಾರಣವಂತೆ ! 

14-08-23 02:50 pm       Mangalore Correspondent   ಕರಾವಳಿ

ಹಠಾತ್ ಹೃದಯಾಘಾತಕ್ಕೀಡಾಗಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. 

ಮಂಗಳೂರು, ಆಗಸ್ಟ್ 14: ಹಠಾತ್ ಹೃದಯಾಘಾತಕ್ಕೀಡಾಗಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. 

ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ನೆರಿಯ ನಿವಾಸಿ ಸುಮಾ(19) ಮೃತ ವಿದ್ಯಾರ್ಥಿನಿ. ಮಂಗಳೂರಿನ ನರ್ಸಿಂಗ್ ಕಾಲೇಜು ಒಂದರಲ್ಲಿ ಸುಮಾ ಮೊದಲ ವರ್ಷದ ಬ್ಯಾಚ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈಕೆಗೆ ಆಗಸ್ಟ್ 9 ರಂದು ಅನಾರೋಗ್ಯ ಉಂಟಾಗಿದ್ದು ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. 11 ರಂದು ಮತ್ತೆ ಅಸ್ವಸ್ಥಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. 

ಆ.13ರಂದು ರಾತ್ರಿ ಮತ್ತೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಕುಟುಂಬದ ಮಾಹಿತಿ ಪ್ರಕಾರ, ಲೋ ಬಿಪಿಯಿಂದಾಗಿ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. 

ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿದ್ದು ಸಮಾಜದಲ್ಲಿ ಈ ಬಗ್ಗೆ ಭಾರೀ ಆತಂಕ ವ್ಯಕ್ತವಾಗಿದೆ. ಇತ್ತೀಚೆಗೆ ಚಿತ್ರನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಲೋ ಬಿಪಿಯಿಂದಾಗಿಯೇ ಹೃದಯಾಘಾತಕ್ಕೀಡಾಗಿ ಸಾವು ಕಂಡಿದ್ದರು ಎನ್ನಲಾಗಿತ್ತು. ಈ ರೀತಿಯ ಸಾವು ಹೇಗಾಗುತ್ತೆ, ಯಾಕಾಗಿ ಹೆಚ್ಚುತ್ತಿದೆ ಎಂಬ ಬಗ್ಗೆ ತಜ್ಞ ವೈದ್ಯರೇ ಸ್ಪಷ್ಟನೆ ನೀಡಬೇಕಾಗಿದೆ.

Mangalore 19 year old Nursing Student dies of sudden heart attack. The deceased have been identified as Suma.