ಬ್ರೇಕಿಂಗ್ ನ್ಯೂಸ್
13-08-23 08:34 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 13: ನಿಷೇಧಿತ ಪಿಎಫ್ಐ ಸಂಘಟನೆಗೆ ಫಂಡಿಂಗ್ ಮಾಡಿರುವ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಉಳ್ಳಾಲದ ಕಿನ್ಯಾ, ಮಂಗಳೂರು ಹೊರವಲಯದ ವಳಚ್ಚಿಲ್ ಪದವು ಮತ್ತು ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಉಳ್ಳಾಲದ ಕಿನ್ಯಾದಲ್ಲಿ ಕೇರಳದ ಮೂಲದ ಇಬ್ರಾಹಿಂ ಎಂಬ ಧಾರ್ಮಿಕ ಶಿಕ್ಷಕರೊಬ್ಬರ ಮನೆಗೆ ದಾಳಿ ನಡೆಸಿದ್ದು, ಮನೆಯಲ್ಲಿದ್ದ ಕೆಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಇಬ್ರಾಹಿಂ ಒಂದು ವರ್ಷದ ಹಿಂದೆ ಪಿಎಫ್ಐ ಸಂಘಟನೆ ನಿಷೇಧ ಬೆನ್ನಲ್ಲೇ ನಾಪತ್ತೆಯಾಗಿದ್ದರು. ನಿಷೇಧ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪಿಎಫ್ಐ ನಾಯಕರನ್ನು ಬಂಧಿಸಲಾಗಿತ್ತು. ಅವರು ನೀಡಿದ ಮಾಹಿತಿ ಆಧರಿಸಿ ಇಬ್ರಾಹಿಂ ಪತ್ತೆಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಇದೀಗ ಆತನ ಮನೆಯಲ್ಲಿ ತಲಾಶ್ ನಡೆಸಿದ್ದಾರೆ.
ಪಿಎಫ್ಐ ಪರವಾಗಿ ಫಂಡಿಂಗ್ ನಡೆಸುತ್ತಿರುವ ಹವಾಲಾ ನೆಟ್ವರ್ಕ್ ನಲ್ಲಿ ಇಬ್ರಾಹಿಂ ಲಿಂಕ್ ಹೊಂದಿದ್ದಾನೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ವಳಚ್ಚಿಲ್ ಪದವು ನಿವಾಸಿ ಮುಸ್ತಾಕ್ ಮತ್ತು ಮೆಲ್ಕಾರ್ ನಲ್ಲಿ ಇಬ್ರಾಹಿಂ ನಂದಾವರ ಎಂಬವರ ಮನೆಗೂ ದಾಳಿ ನಡೆದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿ ತೆರಳಿದ್ದಾರೆ ಎಂಬ ಮಾಹಿತಿಗಳಿವೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ.
NIA riads three places of Mangalore in Ullal, Valachil and Melkar over PFI funding network. A regious teacher house was also raided by NIA at Ullal. The Raid was conducted suspecting Hawala Network.
09-07-25 04:12 pm
HK News Desk
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
ಸಿಎಂ ಸೀಟು ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ; ಮೊದಲು...
08-07-25 08:35 pm
Karnataka Ban Online Betting and Gambling: ಆನ...
08-07-25 05:01 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
09-07-25 07:37 pm
Mangalore Correspondent
ಮಂಗಳೂರಿನಲ್ಲಿ ಒಂದೇ ದಿನ ಅಂತರದಲ್ಲಿ ಹಾರ್ಟ್ ಅಟ್ಯಾಕ...
09-07-25 06:53 pm
Mangalore Modern Fire Safety , Ullal Fire Sta...
09-07-25 06:20 pm
Rename Dakshina Kannada, Tulu: ವಿಜಯನಗರ ಕಾಲದಲ್...
08-07-25 09:33 pm
“Mission Possible: KMC Attavar Performs Life-...
08-07-25 03:37 pm
08-07-25 10:01 pm
Bengaluru Staffer
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm
Digital Arrest, Cyber Fraud, Mangalore: ಡಿಜಿಟ...
07-07-25 03:30 pm