ಮಂಗಳೂರಿಗೆ ವಂದೇ ಭಾರತ್ ರೈಲು ಬಾರದ್ದಕ್ಕೆ ಅರಣ್ಯ ಇಲಾಖೆ ಕಾರಣವಂತೆ ; ಸಂಸದ ನಳಿನ್ ಸಮರ್ಥನೆ ! 

18-07-23 04:48 pm       Mangalore Correspondent   ಕರಾವಳಿ

ರಾಜ್ಯದಲ್ಲಿ ಬೇರೆಲ್ಲ ಕಡೆ ಬಂದಿದೆ, ಮಂಗಳೂರಿಗೆ ವಂದೇ ಮಾತರಂ ರೈಲು ಬರುತ್ತಿಲ್ಲ ಯಾಕೆಂಬ ಪ್ರಶ್ನೆಗೆ ಸಂಸದ ನಳಿನ್ ಕುಮಾರ್, ಅರಣ್ಯ ಇಲಾಖೆಯ ಮೇಲೆ ಬೆರಳು ತೋರಿಸಿದ್ದಾರೆ.

ಪುತ್ತೂರು, ಜುಲೈ 18: ರಾಜ್ಯದಲ್ಲಿ ಬೇರೆಲ್ಲ ಕಡೆ ಬಂದಿದೆ, ಮಂಗಳೂರಿಗೆ ವಂದೇ ಮಾತರಂ ರೈಲು ಬರುತ್ತಿಲ್ಲ ಯಾಕೆಂಬ ಪ್ರಶ್ನೆಗೆ ಸಂಸದ ನಳಿನ್ ಕುಮಾರ್, ಅರಣ್ಯ ಇಲಾಖೆಯ ಮೇಲೆ ಬೆರಳು ತೋರಿಸಿದ್ದಾರೆ. ‌ರೈಲ್ವೇ ಹಳಿಯ ವಿದ್ಯುತ್ತೀಕರಣ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಸಮಸ್ಯೆಯಾಗಿದೆ.‌ ಹಾಗಾಗಿ ವಿಳಂಬ ಆಗಿದೆ ಎಂದು ನಳಿನ್ ಕುಮಾರ್ ಕಟೀಲ್ ಸಮರ್ಥನೆ ಹೇಳಿಕೊಂಡಿದ್ದಾರೆ. 

ಮಂಗಳೂರು- ಬೆಂಗಳೂರು- ಮೈಸೂರು ಸಂಪರ್ಕಿಸುವ ರೈಲು ಹಳಿಯ ವಿದ್ಯುತ್ತೀಕರಣ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿ ಶೀಘ್ರದಲ್ಲೇ ಮುಗಿಯಲಿದ್ದು ಆಬಳಿಕ ವಂದೇ ಭಾರತ್ ರೈಲು ಮಂಗಳೂರಿಗೆ ಆಗಮಿಸಲಿದೆ.‌ ಇದಕ್ಕಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಅಂಡರ್ ಪಾಸ್ ಮತ್ತು ಮೇಲ್ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ. ಮಂಗಳೂರು - ಬೆಂಗಳೂರು ರೈಲು ಹಳಿ ವಿದ್ಯುದೀಕರಣ ಆಗಿಲ್ಲ. ಕರಾವಳಿಯ ಕೊಂಕಣ ರೈಲ್ವೇ, ಕೇರಳದಿಂದ ಮಂಗಳೂರು ಸಂಪರ್ಕದ ಹಳಿಗಳು ವಿದ್ಯುದೀಕರಣ ಆಗಿವೆ. ಮಂಗಳೂರಿನಿಂದ ಗೋವಾಕ್ಕೆ, ಮುಂಬೈಗೆ ಅಥವಾ ಕೇರಳಕ್ಕೆ ಹೊಸ ರೈಲು ಬಿಡುವುದಕ್ಕೆ ಇಂಥ ಅಡ್ಡಿಯಿಲ್ಲ. ತಿರುವನಂತಪುರದಿಂದ ಕಾಸರಗೋಡಿಗೆ ಬರುವ ವಂದೇ ಭಾರತ್ ರೈಲನ್ನೂ ಮಂಗಳೂರಿಗೆ ವಿಸ್ತರಿಸಲು ಸಂಸದರಿಂದ ಆಗಿಲ್ಲ. ಈಗ ಮಂಗಳೂರು- ಬೆಂಗಳೂರು ರೈಲಿಗೆ ಅರಣ್ಯ ಇಲಾಖೆಯ ನೆಪ ಹೇಳಿದ್ದಾರೆ ಅಷ್ಟೇ. 

PM Narendra Modi turns 72: Top 10 economic policies by 14th Prime Minister  of India | Economy News | Zee News

VP Singh's Action-Packed Career in a Bipolar Political Arena | NewsClick

Deve Gowda: The man of the moment | Mint #AskBetterQuestions

ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆಯ ಕುರಿತ ಪ್ರಶ್ನೆಗೆ, ಕಾಂಗ್ರೆಸ್ ಗೆ ಪ್ರಧಾನಿಗಳನ್ನು ಅಧಿಕಾರದಿಂದ ಇಳಿಸಿದ ಇತಿಹಾಸವಿದೆ. ವಿ.ಪಿ.ಸಿಂಗ್, ಹೆಚ್.ಡಿ. ದೇವೇಗೌಡ ಅವರನ್ನು ಪ್ರಧಾನಿ ಮಾಡಿ ಕಾಂಗ್ರೆಸ್ ಅರ್ಧಕ್ಕೆ ಕೆಳಗಿಳಿಸಿದೆ.‌ ಇಂದು ದೇಶ ಕಾಂಗ್ರೆಸ್ ಮುಕ್ತವಾಗಿದೆ.‌ ದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುವ ಅರ್ಹತೆ ಹೊಂದಿಲ್ಲ. ಇದಕ್ಕಾಗಿ ದೇಶದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಲವಾರು ಷಡ್ಯಂತ್ರಗಳನ್ನು ಮಾಡುತ್ತಿದೆ.‌ ಇದರಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಸಫಲವಾಗಲ್ಲ.‌ ಕಳೆದ ಬಾರಿಯೂ ಇದೇ ರೀತಿ ಮಾಡಿದ್ದಾರೆ. ದೇಶದಲ್ಲಿ ಇರುವ ಮೋದಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

Forest department reason for Vande Bharat Express train not to be in Mangalore says MP Nalin Kateel.