ಬ್ರೇಕಿಂಗ್ ನ್ಯೂಸ್
15-07-23 07:56 pm Mangalore Correspondent ಕರಾವಳಿ
ಬೆಳ್ತಂಗಡಿ, ಜುಲೈ 15: ಹೆಣ ಸುಡಲು ಸ್ಮಶಾನವಿಲ್ಲದ ಕಾರಣ ಗ್ರಾಮಸ್ಥರು ಗ್ರಾಮ ಪಂಚಾಯತ್ ಮುಂದೆಯೇ ಶವಸಂಸ್ಕಾರಕ್ಕೆ ಮುಂದಾದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯಾದಲ್ಲಿ ನಡೆದಿದೆ. ರುದ್ರಭೂಮಿಗೆ ಜಾಗ ಕಾದಿರಿಸದ ಪಂಚಾಯತ್ ಆಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಶವ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ನೆರಿಯಾ ಗ್ರಾಮದ ಜನತಾ ಕಾಲೋನಿಯ ವೃದ್ಧ ವ್ಯಕ್ತಿ ಮೃತಪಟ್ಟಿದ್ದು ಶವ ಸಂಸ್ಕಾರಕ್ಕೆ ಸ್ಥಳವಿಲ್ಲದ ಕಾರಣ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಶವವನ್ನು ಪಂಚಾಯತ್ ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಸ್ಮಶಾನಕ್ಕೆ ಸ್ಥಳ ನಿಗದಿ ಮಾಡದೆ ಹೋದರೆ ಪಂಚಾಯತ್ ಎದುರೇ ಅಂತ್ಯಸಂಸ್ಕಾರ ನಡೆಸುವುದಾಗಿ ಹೇಳಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಈ ಹಿಂದೆ ಗ್ರಾಮಕ್ಕೊಂದು ಸ್ಮಶಾನಕ್ಕಾಗಿ ಹಲವು ಬಾರಿ ನೆರಿಯಾ ಗ್ರಾಮ ಪಂಚಾಯತ್ ಆಡಳಿತಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದರು.


ಜನರ ಆಕ್ರೋಶಕ್ಕೆ ಮಣಿದು ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಆಗಮಿಸಿದ್ದು ರುದ್ರಭೂಮಿಗೆ ಈ ಹಿಂದೆಯೇ ಜಾಗ ನೋಡಿದ್ದಾಗಿ ತಿಳಿಸಿದರು. ಪಕ್ಕದ ಇಟ್ಟಾಡಿ ಎಂಬಲ್ಲಿ ಸ್ಮಶಾನಕ್ಕಾಗಿ ಮೀಸಲಿಟ್ಟ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಆದರೆ ಪರಿಶೀಲನೆ ಸಂದರ್ಭದಲ್ಲಿ ಆ ಸ್ಥಳದಲ್ಲಿ ಸ್ಮಶಾನ ಮಾಡಲು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
ಕೊನೆಗೆ, ಪಂಚಾಯತ್ ಸಮೀಪದ ಸರಕಾರಿ ಜಾಗವನ್ನೇ ಸ್ಮಶಾನಕ್ಕಾಗಿ ನಿಗದಿಪಡಿಸಲು ಆದೇಶ ಮಾಡುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ. ಬಳಿಕ ಪ್ರತಿಭಟನೆಯನ್ನು ಹಿಂಪಡೆದ ಗ್ರಾಮಸ್ಥರು, ತಹಸೀಲ್ದಾರ್ ತೋರಿಸಿದ ಸ್ಥಳದಲ್ಲೇ ಅಂತ್ಯಸಂಸ್ಕಾರ ನಡೆಸಿದ್ದಾರೆ.
Due to the lack of cremation in Neria village of Belthangadi taluk, the funeral of the dead is being hampered and the villagers have protested in front of the village panchayat demanding to solve the problem.They protested in Neria saying that even though they have been demanding in several village councils for the last several years, no one is getting any response to the request of the villagers.
02-04-26 03:56 pm
HK News Staffer
ಮಗನ ರೋಗ ಗುಣಪಡಿಸಲು ಸ್ವಂತ ಮಗಳನ್ನೇ ಕೊಂದ ತಾಯಿ! ಮ...
02-04-26 02:46 pm
ಕೈಚೀಲ ಖರೀದಿಯಲ್ಲಿ ಅವ್ಯವಹಾರ; ಐಎಎಸ್ ಅಧಿಕಾರಿ ರೋಹಿ...
01-04-26 10:51 pm
ಅಡಿಕೆಗೆ ನಿಗದಿಪಡಿಸಿದ ತೇವಾಂಶ ಮಿತಿ ಸಡಿಲಿಕೆಗೆ ಕ್ಯ...
01-04-26 08:56 pm
ದುಬಾರಿ ಏಪ್ರಿಲ್; ನೀರು, ವಿದ್ಯುತ್, ಟೋಲ್, ನಗದು ಎಲ...
01-04-26 12:28 pm
01-04-26 11:03 pm
HK News Staffer
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
02-04-26 02:43 pm
HK News Staffer
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm