ಬ್ರೇಕಿಂಗ್ ನ್ಯೂಸ್
05-07-23 10:47 pm Mangalore Correspondent ಕರಾವಳಿ
ಮಂಗಳೂರು, ಜುಲೈ 5: ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿ, ಮೀನುಗಾರಿಕೆ, ನದಿ, ಸಮುದ್ರಕ್ಕೆ ಇಳಿಯುವುದನ್ನು ನಿಷೇಧಿಸಿದ್ದರೂ, ಹರೇಕಳದ ಮೀನುಗಾರನೊಬ್ಬ ದುಸ್ಸಾಹಸ ಮಾಡಿದ್ದು ಅಪಾಯದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾನೆ.
ಬುಧವಾರ ಬೆಳಗ್ಗೆ ನೇತ್ರಾವತಿ ನದಿಯಲ್ಲಿ ಉಳ್ಳಾಲದ ಹರೇಕಳದ ಮೀನುಗಾರನೊಬ್ಬ ದೋಣಿಯಲ್ಲಿ ಮೀನು ಹಿಡಿಯಲು ಹೋಗಿದ್ದ. ಮಧ್ಯಾಹ್ನ ವೇಳೆಗೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ದೋಣಿಯನ್ನು ಬದಿಗೆ ಸರಿಸುವ ಯತ್ನದಲ್ಲಿದ್ದಾಗಲೇ ದೋಣಿ ನೀರಿನಲ್ಲಿ ಮಗುಚಿ ಬಿದ್ದಿದೆ. ಹರೇಕಳ- ಅಡ್ಯಾರ್ ನಡುವೆ ಕಟ್ಟಿರುವ ಹೊಸ ಸೇತುವೆಯ ಬಳಿಯಲ್ಲೇ ಘಟನೆ ನಡೆದಿದ್ದು, ಮೀನುಗಾರ ದುಸ್ಸಾಹಸ ಮೆರೆದಿದ್ದನ್ನು ಸ್ಥಳೀಯರು ನೋಡಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದ ಯುವಕರು ಮೀನುಗಾರನಿಗೆ ಹಗ್ಗ ಇಳಿಸಿ, ರಕ್ಷಿಸುವ ಯತ್ನ ಮಾಡಿದ್ದಾರೆ. ದೋಣಿಯನ್ನು ಬಿಟ್ಟು ಮೀನುಗಾರ ಸೇತುವೆಯ ಮೂಲಕ ಮೇಲಕ್ಕೇರಿದ್ದು, ಅಪಾಯದಿಂದ ಪಾರಾಗಿದ್ದಾನೆ. ತುಂಬೆಯ ಡ್ಯಾಮಿನಲ್ಲಿ ಗೇಟ್ ಓಪನ್ ಮಾಡಿದ್ದರಿಂದ ನದಿಯಲ್ಲಿ ಒಮ್ಮಿಂದೊಮ್ಮೆಗೆ ನೀರಿನ ಪ್ರಮಾಣ ಏರಿಕೆಯಾಗಿತ್ತು. ಅಡ್ಯಾರ್ ಭಾಗದಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರ ದೋಣಿಯನ್ನು ಬದಿಗೆ ಸರಿಸುವ ಯತ್ನದಲ್ಲಿದ್ದಾಗಲೇ ನೀರಿನಲ್ಲಿ ಸಿಲುಕಿದ್ದು ಅಪಾಯಕ್ಕೀಡಾಗಿದ್ದ. ಯುವಕನ ರಕ್ಷಣೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ.
The boat of a youth who went fishing by boat despite warnings of Red Alert by the weather department capsized. He was rescued by the residents of Harekala. The incident happened below Harekala-Adyar bridge in the Netravati river on Wednesday July 5.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
14-11-25 03:34 pm
Mangalore Correspondent
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm