ಬ್ರೇಕಿಂಗ್ ನ್ಯೂಸ್
05-07-23 10:01 pm Mangalore Correspondent ಕರಾವಳಿ
ಮಂಗಳೂರು, ಜುಲೈ 5: ಜೂನ್ ತಿಂಗಳ ಅಂತ್ಯಕ್ಕೆ ಆರಂಭಗೊಂಡ ಮುಂಗಾರು ಕಡೆಗೂ ತೀವ್ರತೆ ಪಡೆದಿದೆ. ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಮುಂಗಾರಿನ ಅಬ್ಬರ ಹಳೆಕಾಲದ ರೀತಿಯಲ್ಲೇ ಮರುಕಳಿಸಿದೆ. ಇಡೀ ದಿನವೂ ಎಡೆಬಿಡದೆ ಮಳೆ ಸುರಿಯುವುದು, ನಡು ನಡುವೆ ಬಿರುಸು ಪಡೆಯುವುದು ಮಳೆಗಾಲದ ಉಚ್ಛ್ರಾಯ ಸ್ಥಿತಿ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ನೋಡಿದರೆ, ಅದೇ ರೀತಿಯ ಅನುಭವ ಆಗುತ್ತದೆ.
ಹವಾಮಾನ ಇಲಾಖೆಯ ಪ್ರಕಾರ, ಜುಲೈ 4 ಮತ್ತು 5ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಅಂದರೆ, 24 ಗಂಟೆಯಲ್ಲಿ 20 ಸೆಂಟಿ ಮೀಟರಿಗಿಂತ(200 ಮಿಮೀ) ಹೆಚ್ಚು ಮಳೆಯಾಗುತ್ತದೆ ಅನ್ನುವ ಅಂದಾಜು ಹೇಳಲಾಗಿತ್ತು. ಬಹುತೇಕ ಅದೇ ಪ್ರಮಾಣದಲ್ಲಿ ಮಳೆಯಾಗಿದ್ದು, ಜುಲೈ 5ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 101.3 ಮಿಮೀ ಅಂದರೆ, ಹತ್ತು ಸೆಂಟಿ ಮೀಟರ್ ಗಿಂತ ಹೆಚ್ಚು ಮಳೆಯಾಗಿದೆ. ಮೂಡುಬಿದ್ರೆಯಲ್ಲಿ 143 ಮಿಮೀ(14 ಸೆಮೀ) ಅತಿ ಹೆಚ್ಚು ಮಳೆಯಾಗಿದ್ದರೆ, ಆನಂತರ ಬೆಳ್ತಂಗಡಿಯಲ್ಲಿ 114 ಮಿಮೀ, ಬಂಟ್ವಾಳದಲ್ಲಿ 123 ಮಿಮೀ, ಮಂಗಳೂರಿನಲ್ಲಿ 97, ಪುತ್ತೂರಿನಲ್ಲಿ 90, ಸುಳ್ಯದಲ್ಲಿ 70, ಕಡಬದಲ್ಲಿ 77 ಮಿಮೀ ಮಳೆಯಾಗಿದೆ. ವಾಡಿಕೆಯ ಪ್ರಕಾರ, ಈ ಸಮಯದಲ್ಲಿ 38 ಮಿಮೀ ಮಳೆಯಾಗಬೇಕಿದ್ದರೆ, ಇದೀಗ 101 ಮಿಮೀ ಮಳೆ ದಾಖಲಾಗಿದೆ.


ಜುಲೈ 6 ಮತ್ತು 7ರಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಇದರ ಪ್ರಕಾರ, 115 ಮಿಮೀಗಿಂತ 200 ಮಿಮೀ ಮಳೆಯಾಗಬಹುದು ಎಂಬ ಲೆಕ್ಕಾಚಾರ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಆದರೆ ಎರಡು ದಿನಗಳಿಂದ ಧಾರಾಕಾರ ಮಳೆಯಾದರೂ, ನದಿಗಳಲ್ಲಿ ನೀರಿನ ಹರಿವು ದೊಡ್ಡ ಮಟ್ಟಿನಲ್ಲಿ ಹೆಚ್ಚಿಗೆಯಾಗಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆಯ ಮಳೆಯೂ ಬಾರದೇ ಇರುವುದರಿಂದ ಜೂನ್ ಕೊನೆಯ ವರೆಗೂ ಹೆಚ್ಚಿನ ಕಡೆಗಳಲ್ಲಿ ನದಿಗಳಲ್ಲಿ ಹರಿವು ಆರಂಭ ಆಗಿರಲಿಲ್ಲ.

ಮೊನ್ನೆ ಜುಲೈ ಬಳಿಕ ಮಳೆ ತೀವ್ರತೆ ಪಡೆದಿದ್ದು ಈಗಷ್ಟೇ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಹೀಗಾಗಿ ಎರಡು ದಿನಗಳಲ್ಲಿ ಎಡೆಬಿಡದೆ ಮಳೆ ಬಂದರೂ, ಬಂಟ್ವಾಳದಲ್ಲಿ ನೆರೆ ಆವರಿಸುವ ಸ್ಥಿತಿ ಬಂದಿಲ್ಲ. ತುಂಬೆಯ ಅಣೆಕಟ್ಟಿನಲ್ಲಿ ಇನ್ನೂ ನೀರು ತುಂಬಿಲ್ಲ. ಅಣೆಕಟ್ಟಿನ ಒಟ್ಟು 30 ಗೇಟ್ ಗಳಲ್ಲಿ 15 ಗೇಟನ್ನಷ್ಟೇ ಓಪನ್ ಮಾಡಲಾಗಿದೆ. ಇದಲ್ಲದೆ, ನೇತ್ರಾವತಿ ತುಂಬಿ ಹರಿಯುವ ಮಟ್ಟ 9 ಮೀಟರ್ ಆಗಿದ್ದರೆ, ಈಗ 3.6 ಮೀಟರ್ ಎತ್ತರದಲ್ಲಷ್ಟೇ ನೀರು ಹರಿಯುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Hevay rain in Mangalore and moodbidri, yet dams not filled with enough water.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 10:08 am
HK News Staffer
Mangalore Eye, Project: ಕದ್ರಿಯ ನೂರಾರು ಕೋಟಿ ಜಾ...
20-09-26 08:59 pm
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm