ಬ್ರೇಕಿಂಗ್ ನ್ಯೂಸ್
27-06-23 10:06 pm Mangalore Correspondent ಕರಾವಳಿ
ಮಂಗಳೂರು, ಜೂನ್ 27: ಅಸೈಗೋಳಿಯ ಕೆಎಸ್ ಆರ್ ಪಿ ಬೆಟಾಲಿಯನ್ನಲ್ಲಿ ಪೊಲೀಸ್ ಪೇದೆಗಳನ್ನು ಡ್ರೈನೇಜ್ ಕ್ಲೀನಿಂಗ್ ಮಾಡಲು ಬಳಸಿಕೊಂಡಿದ್ದ ಪ್ರಕರಣ ಪೊಲೀಸ್ ಇಲಾಖೆಯಲ್ಲಿ ಸಂಚಲನ ಎಬ್ಬಿಸಿದೆ. ಪ್ರಕರಣದ ಗಂಭೀರತೆ ಅರಿತ ಕೆಎಸ್ ಆರ್ ಪಿ ವಿಭಾಗದ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಇನ್ನೆರಡು ದಿನದಲ್ಲಿ ಮಂಗಳೂರಿಗೆ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಮಂಗಳೂರು ಹೊರವಲಯದ ಕೋಣಾಜೆ ಬಳಿಯ ಅಸೈಗೋಳಿಯಲ್ಲಿರುವ ಕೆಎಸ್ ಆರ್ ಪಿ ಬೆಟಾಲಿಯನ್ನಲ್ಲಿ ಪೊಲೀಸ್ ಪೇದೆಗಳನ್ನು ಬಳಸಿ ಡ್ರೈನೇಜ್ ಕ್ಲೀನ್ ಮಾಡಿಸಿದ್ದು ಅಲ್ಲಿನ ಅವಾಂತರಕ್ಕೆ ಸಾಕ್ಷಿಯಾಗಿತ್ತು. ರಾಜ್ಯದ ಪ್ರಮುಖ ಸುದ್ದಿ ವಾಹಿನಿ ಮತ್ತು ಹೆಡ್ ಲೈನ್ ಕರ್ನಾಟಕ ಈ ಬಗ್ಗೆ ವಿಡಿಯೋ ಸಹಿತ ಸುದ್ದಿ ಪ್ರಕಟಿಸಿತ್ತು. ಪೊಲೀಸ್ ಇಲಾಖೆಯ ಒಳಗಿನ ಆರ್ಡರ್ಲೀ ಪದ್ಧತಿ ಮತ್ತು ಕೆಳಹಂತದ ಪೊಲೀಸರಲ್ಲಿ ಮಾಡಬಾರದ ಕೆಲಸವನ್ನು ಮಾಡಿಸುವ ಕೃತ್ಯದ ಬಗ್ಗೆ ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು. ಈ ಸುದ್ದಿ ಬಿತ್ತರವಾದ ಮರುದಿನವೇ ರಜೆ ಇನ್ನಿತರ ಆರ್ಡರ್ಲೀ ಕೆಲಸಕ್ಕೆ ಹೋಗಿದ್ದವರು ಅಸೈಗೋಳಿಯ ಕೇಂದ್ರ ಸ್ಥಾನಕ್ಕೆ ಮರಳಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿದೆ.

ರಾಜ್ಯ ಮೀಸಲು ಪಡೆಯ ಏಳನೇ ಬೆಟಾಲಿಯನ್ನಿನ ಮಂಗಳೂರು ವಿಭಾಗದಲ್ಲಿ 700ಕ್ಕೂ ಹೆಚ್ಚು ಸಿಬಂದಿ ಇದ್ದಾರೆ. ಈ ಪೈಕಿ 600ರಷ್ಟು ಪೇದೆಗಳಿದ್ದರೆ, 100ರಷ್ಟು ಡಿ ದರ್ಜೆ ಮತ್ತು ಇನ್ನಿತರ ನೌಕರರಿದ್ದಾರೆ. ಡಿ ದರ್ಜೆಯ ನೌಕರರು ಕಚೇರಿಯ ಸ್ವಚ್ಛತೆ ನೋಡಿಕೊಳ್ಳುವುದು, ಪೇದೆಗಳ ಹೇರ್ ಕಟ್ಟಿಂಗ್, ಮೇಲಧಿಕಾರಿಗಳಿಗೆ ಚಹಾ ರೆಡಿ ಮಾಡುವುದು, ಕಚೇರಿ ಗುಡಿಸುವುದು ಇನ್ನಿತರ ಕೆಲಸ ಮಾಡುತ್ತಾರೆ. ಉಳಿದಂತೆ, ಪೇದೆಗಳಲ್ಲಿ ಸಿವಿಲ್ ಪೊಲೀಸರ ರೀತಿಯಲ್ಲೇ ಕೆಳಹಂತದಿಂದ ಮೇಲಿನ ಹಂತದ ವರೆಗೆ ಶ್ರೇಣಿ ಇರುತ್ತದೆ. ಮೊನ್ನೆ ಡ್ರೈನೇಜ್ ಕ್ಲೀನಿಂಗ್ ಕೆಲಸ ಮಾಡುತ್ತಿದ್ದವರಲ್ಲಿ ನಾಲ್ವರು ಪೇದೆಗಳಾಗಿದ್ದರೆ, ಒಬ್ಬರು ಹೆಡ್ ಕಾನ್ಸ್ ಟೇಬಲ್, ಇನ್ನೊಬ್ಬರು ಎಎಸ್ಐ ದರ್ಜೆಯವರಿದ್ದರು ಎನ್ನುವ ಮಾಹಿತಿ ಇದೆ. ಒಬ್ಬ ಮಾತ್ರ ಡಿ ದರ್ಜೆಯ ನೌಕರ ಇವರ ಜೊತೆಗೆ ಇದ್ದುದಂತೆ.

ಅಸೈಗೋಳಿಯ ಹಳೆಯ ಕ್ವಾಟ್ರಸ್ ಆಸುಪಾಸಿನಲ್ಲಿ ಸ್ವಚ್ಛತೆ ತೀರಾ ಕಳಪೆಯಾಗಿದ್ದು, ಕೆಲವು ಕಟ್ಟಡಗಳ ಮುಂದೆ ಗಲೀಜು ತುಂಬಿದೆ. ಕಟ್ಟಡದ ಗೋಡೆಯ ಸಿಮೆಂಟ್ ಚಪ್ಪಡಿ ರೀತಿ ಒಡೆದು ಬೀಳುತ್ತಿದೆ. ಮಳೆಗಾಲಕ್ಕೆ ಸೋರುತ್ತಿರುವುದರಿಂದ ಅದರಲ್ಲಿ ನಿಲ್ಲುವುದಕ್ಕೂ ಆಗುತ್ತಿಲ್ಲ ಎನ್ನುವ ನೋವನ್ನು ಅಲ್ಲಿನ ಸಿಬಂದಿ ಹೇಳಿಕೊಂಡಿದ್ದಾರೆ. ಬ್ಯಾಚುಲರ್ ಇದ್ದವರು ನಾಲ್ಕೈದು ಮಂದಿ ಒಂದೇ ರೂಮಲ್ಲಿ ಇದ್ದರೆ, ಫ್ಯಾಮಿಲಿ ಇದ್ದವರು ಪ್ರತ್ಯೇಕ ಒಂದು ಮನೆಯನ್ನು ಪಡೆದಿದ್ದಾರೆ. ಕ್ವಾಟ್ರಸ್, ನೀರಿನ ಹೆಸರಲ್ಲಿ ಕನಿಷ್ಠ ಮೊತ್ತವನ್ನು ಸಿಬಂದಿಯ ಸಂಬಳದಿಂದ ಕಟ್ ಮಾಡಲಾಗುತ್ತದೆ. ಅದು ಬಿಟ್ಟರೆ, ಸರ್ಕಾರಿ ಸವಲತ್ತು, ಉತ್ತಮ ಸಂಬಳ ಅಲ್ಲಿನ ಸಿಬಂದಿಗಿದೆ.
ಹೀಗಿದ್ದರೂ, ಅಲ್ಲಿನ ಪೇದೆಗಳು ರಜೆಯಲ್ಲಿ ಹೋಗುವುದು, ಮೇಲಧಿಕಾರಿಗಳ ಕೃಪೆಯಿಂದ ತಿಂಗಳ ಕಾಲ ಊರು ಅಥವಾ ಬೇರೆ ಕಡೆ ಉಳಿಯುವುದು ಇತ್ಯಾದಿ ನಡೆಯುತ್ತಂತೆ. ಮೇಲಧಿಕಾರಿಗಳಿಗೆ ಸಹಕರಿಸದೇ ಇದ್ದವರನ್ನು ಟಾರ್ಗೆಟ್ ಮಾಡಲಾಗುತ್ತೆ. ಡ್ಯೂಟಿ, ಕೆಲಸದ ನೆಪದಲ್ಲಿ ಕಿರುಕುಳ ನೀಡಲಾಗುತ್ತೆ ಎನ್ನುವ ಕೊರಗನ್ನು ಸಿಬಂದಿ ಹೇಳುತ್ತಾರೆ. ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಭೇಟಿ ಕೊಟ್ಟು ಒಟ್ಟು ಪ್ರಕರಣದ ಬಗ್ಗೆ ತನಿಖೆಗೆ ಆದೇಶ ಮಾಡಿದರೆ, ಒಳಗಿನ ಹುಳುಕುಗಳೆಲ್ಲ ಹೊರಬೀಳಬಹುದು ಎನ್ನುತ್ತಾರೆ ಸಿಬಂದಿ.
Mangalore KSRP police cleaning drinage News Impact, ADGP Seemanth Kumar Singh likely to visit. Headline Karnataka had recently exposed a Video which show KSRP police Staffs cleaning drainage the news of this went viral on social media.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 10:08 am
HK News Staffer
Mangalore Eye, Project: ಕದ್ರಿಯ ನೂರಾರು ಕೋಟಿ ಜಾ...
20-09-26 08:59 pm
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm