ಬ್ರೇಕಿಂಗ್ ನ್ಯೂಸ್
20-06-23 11:30 am Mangalore Correspondent ಕರಾವಳಿ
ಬೆಳ್ತಂಗಡಿ, ಜೂನ್ 20: ಚಾಕೊಲೇಟ್ ಕೊಡಿಸಿಲ್ಲವೆಂದು ತಂದೆಯ ಮೇಲೆ ಸಿಟ್ಟಾದ ಬಾಲಕಿಯರಿಬ್ಬರು ಮನೆ ತೊರೆದು ಸರ್ಕಾರಿ ಬಸ್ಸಿನ ಉಚಿತ ಪ್ರಯಾಣದ ಲಾಭ ಪಡೆದು ಧರ್ಮಸ್ಥಳಕ್ಕೆ ತೆರಳಿದ ಪ್ರಸಂಗ ನಡೆದಿದ್ದು ಮೊಬೈಲ್ ನೆಟ್ವರ್ಕ್ ಆಧರಿಸಿ ಕೋಣನಕುಂಟೆ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದಾರೆ.
ಕೋಣನಕುಂಟೆ ಠಾಣೆ ವ್ಯಾಪ್ತಿಯ 9 ಹಾಗೂ 11 ವರ್ಷ ವಯಸ್ಸಿನ ಅಕ್ಕ–ತಂಗಿ ಬಾಲಕಿಯರು, ಚಾಕಲೇಟ್ ಖರೀದಿಸುವುದಕ್ಕಾಗಿ ತಂದೆ ಬಳಿ ಹಣ ಕೇಳಿದ್ದರು. ಹಣ ನೀಡದ ತಂದೆ, ಚಾಕೊಲೇಟ್ ತಿನ್ನದಂತೆ ತಾಕೀತು ಮಾಡಿದ್ದರು. ಇದರಿಂದ ಸಿಟ್ಟಿನಲ್ಲಿದ್ದ ಬಾಲಕಿಯರು, ಬೇರೆಯವರ ಬಳಿ ಹಣ ಪಡೆದು ಚಾಕೊಲೇಟ್ ಖರೀದಿಸಿ ತಿಂದಿದ್ದರು. ಬಳಿಕ ತಾವು ಚಾಕೊಲೇಟ್ ತಿಂದಿದ್ದನ್ನು ತಂದೆಗೆ ತಿಳಿಸಿದ್ದರು. ಕೋಪಗೊಂಡ ತಂದೆ, ಮತ್ತಷ್ಟು ಬೈದಿದ್ದರು ಎನ್ನಲಾಗಿದೆ. ಇದರಿಂದ ನೊಂದ ಬಾಲಕಿಯರು, ಮನೆ ಬಿಟ್ಟು ಹೋಗಿದ್ದರು.
ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣವೆಂಬುದನ್ನು ತಿಳಿದಿದ್ದ ಬಾಲಕಿಯರು, ಮನೆಯಿಂದ ಬರುವಾಗಲೇ ತಮ್ಮ ಗುರುತಿನ ಚೀಟಿ ಸಮೇತ ಜೂನ್ 16ರಂದು ರಾತ್ರಿ ಮೆಜೆಸ್ಟಿಕ್ ನಿಲ್ದಾಣಕ್ಕೆ ತೆರಳಿದ್ದರು. ಅಲ್ಲಿಂದ ಕೆಎಸ್ಆರ್ಟಿಸಿ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದರು. ತಮ್ಮಲ್ಲಿದ್ದ ಮೊಬೈಲನ್ನೂ ಎತ್ತಿಕೊಂಡು ಹೋಗಿದ್ದರು. ಇತ್ತ ಮಕ್ಕಳು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಪೋಷಕರು ಕೋಣನಕುಂಟೆ ಠಾಣೆಗೆ ದೂರು ನೀಡಿದ್ದರು.
ಬಾಲಕಿಯರ ಬಳಿಯಿದ್ದ ಮೊಬೈಲ್ ನೆಟ್ವರ್ಕ್ ಆಧರಿಸಿ ತನಿಖೆ ನಡೆಸಿದಾಗ, ಧರ್ಮಸ್ಥಳದಲ್ಲಿರುವ ಮಾಹಿತಿ ಲಭ್ಯವಾಗಿತ್ತು. ಪೊಲೀಸರ ತಂಡ ನೇರವಾಗಿ ಧರ್ಮಸ್ಥಳಕ್ಕೆ ಬಂದು ಬಾಲಕಿಯರನ್ನು ವಶಕ್ಕೆ ಪಡೆದಿದ್ದು ಬೆಂಗಳೂರಿಗೆ ಕರೆತಂದು ಪೋಷಕರಿಗೆ ಒಪ್ಪಿಸಿದೆ.
Angry over father not buying chocolate, sisters travel by free KSRTC bus to Dharmasthala from Belthangady, police trace them by location.
23-09-26 11:05 am
HK News Staffer
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
ಎಡಪಂಥೀಯ ಉಗ್ರವಾದ ಹೆಸರಲ್ಲಿ 'ಮಿಷನರಿ ಚಟುವಟಿಕೆ' ;...
21-09-26 12:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 09:55 am
HK News Staffer
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
23-09-26 09:32 am
HK News Staffer
Inspector Balakrishna Arrest, Police: ಮೇಲಧಿಕಾ...
22-09-26 09:00 pm
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm
ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಶವ...
22-09-26 06:59 pm
ಪೆರ್ನೆಯಲ್ಲಿ ಇಬ್ಬರು ಮಕ್ಕಳ ಬಾವಿಗೆ ಎಸೆತ ಪ್ರಕರಣ :...
22-09-26 02:57 pm