ಬ್ರೇಕಿಂಗ್ ನ್ಯೂಸ್
19-06-23 09:01 pm Mangalore Correspondent ಕರಾವಳಿ
ಮಂಗಳೂರು, ಜೂನ್ 19: ಕೇಂದ್ರ ಸರಕಾರ ಅಕ್ಕಿ ಕೊಡದೆ ಬಡವರ ಹೊಟ್ಟೆಗೆ ಕಲ್ಲು ಹಾಕಿದೆ. ಪುಕ್ಸಟ್ಟೆ ಅಲ್ಲ, ದುಡ್ಡು ಕೊಟ್ಟರೂ ಕೊಡಲ್ಲ ಅನ್ನುವ ಬಿಜೆಪಿ ಸರಕಾರದ ನಡೆ ಖಂಡನೀಯ. ಈ ರೀತಿಯ ನಡೆಯನ್ನು ಖಂಡಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದು, ಬಂಟ್ವಾಳದಲ್ಲಿ ನಾವು ಅನ್ನದ ಬಟ್ಟಲಿಗೆ ಬಡಿದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಹಿಂದೆ ಕೊಲ್ಲೂರು ದೇವಸ್ಥಾನದಿಂದ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿ ಹಣ ಕಲ್ಲಡ್ಕದ ಎರಡು ಶಾಲೆಗಳಿಗೆ ಹೋಗುತ್ತಿದ್ದುದನ್ನು ತಡೆದಿದ್ದೆ. ನಾವು ಶಾಲೆಗೆ ಅಕ್ಕಿ ಕೊಡುವುದನ್ನು ತಡೆದಿಲ್ಲ. ದೇವಸ್ಥಾನದ ಅಭಿವೃದ್ಧಿಗೆ ವಿನಿಯೋಗ ಆಗಬೇಕಿದ್ದ ಹಣ ಶಾಲೆಗೆ ಸಂದಾಯ ಆಗುತ್ತಿದ್ದುದನ್ನು ತಡೆದಿದ್ದೆ. ಆದರೆ ನಾನು ಅಕ್ಕಿ ಕಸಿದಿದ್ದೇನೆಂದು ಹೇಳಿ ಶಾಲಾ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ಅನ್ನದ ಬಟ್ಟಲು ಒಡೆದು ಪ್ರತಿಭಟನೆ ನಡೆಸಿದ್ದರು. ಈಗ ಅದೇ ನೀತಿಯನ್ನು ನಾವು ಕೇಂದ್ರ ಸರಕಾರದ ವಿರುದ್ಧ ಪ್ರಯೋಗ ಮಾಡುತ್ತೇವೆ ಎಂದು ಹೇಳಿದರು.
ಬಿಪಿಎಲ್ ಅಂದರೆ ಬಡವರಿಗೆ ಅಕ್ಕಿ ನೀಡುವುದಕ್ಕೆ ಕೇಂದ್ರದ ಬಿಜೆಪಿ ಸರಕಾರ ತಡೆ ಹಾಕಿದೆ. ಫುಡ್ ಕಾರ್ಪೊರೇಶನ್ ಸಂಸ್ಥೆಯವರು ಅಕ್ಕಿ ಕೊಡುತ್ತೇವೆ ಎಂದರೂ, ರಾಜಕೀಯ ಕಾರಣಕ್ಕೆ ತಡೆದಿದ್ದಾರೆ. ಹಿಂದೆ ಯುಪಿಎ ಸರಕಾರ ಇದ್ದಾಗ ಛತ್ತೀಸ್ಗಢದಲ್ಲಿ ರಮಣಸಿಂಗ್ ಸರ್ಕಾರ ಒಂದು ರೂಪಾಯಿಗೆ ಅಕ್ಕಿ ನೀಡುವುದಾಗಿ ಹೇಳಿದ್ದರು. ಅದಕ್ಕೆ ಯುಪಿಎ ಸರಕಾರ ತಡೆ ಹಾಕಲಿಲ್ಲ. ಆನಂತರ, 2013ರಲ್ಲಿ ಸಿದ್ದರಾಮಯ್ಯ ಸರಕಾರ ಏಳು ಕೆಜಿ ಅಕ್ಕಿಯನ್ನು ಯುಪಿಎ ಸರಕಾರ ಇದ್ದಾಗಲೇ ಆರಂಭಿಸಿತ್ತು. ಆನಂತರ, ಮೋದಿ ಸರಕಾರ ಬಂದ ಮೇಲೆ ನಾವು ಅಕ್ಕಿ ಕೊಡುತ್ತಿದ್ದುದನ್ನು ಮೋದಿ ಕೊಡುವ ಅಕ್ಕಿಯೆಂದು ಬಿಜೆಪಿಯವರು ಪ್ರಚಾರ ಮಾಡಿದ್ದರು. ಈಗ ಅಕ್ಕಿ ಕೊಡುವುದಕ್ಕೇ ಬಿಜೆಪಿ ಅಡ್ಡಿ ಮಾಡಿದ್ದಾರೆ ಎಂದರು ರಮಾನಾಥ ರೈ.
ಬಿಟ್ ಕಾಯಿನ್ ಹಗರಣ ಸೇರಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನು ಕಾಂಗ್ರೆಸ್ ಸರಕಾರ ತನಿಖೆ ನಡೆಸುತ್ತಿಲ್ಲ ಎಂಬ ಬಿಜೆಪಿ ಸಂಸದ ಪ್ರತಾಪಸಿಂಹ ಹೇಳಿಕೆಯ ಬಗ್ಗೆ ಕೇಳಿದ್ದಕ್ಕೆ, ಕಾಂಗ್ರೆಸ್ ಸರಕಾರ ಬಂದು ಎಷ್ಟು ತಿಂಗಳಾಯ್ತು, ಎಲ್ಲ ತನಿಖೆಯೂ ಆಗತ್ತೆ. ನಾವು ಯಾವುದೇ ಅಡ್ಜಸ್ಟ್ ರಾಜಕಾರಣ ಮಾಡೋದಿಲ್ಲ ಎಂದರು. ಮಂಗಳೂರಿನಲ್ಲಿ ಉಚಿತ ಸರ್ಕಾರಿ ಬಸ್ ಯೋಜನೆಯ ಫಲ ಹತ್ತು ಪರ್ಸೆಂಟ್ ಜನರಿಗೂ ಲಭಿಸಿಲ್ಲ, ನಗರ ಭಾಗದಲ್ಲಿ ನರ್ಮ್ ಬಸ್ ಕೂಡ ಪೂರ್ತಿಯಾಗಿ ಓಡಾಟ ನಡೆಸುತ್ತಿಲ್ಲ. ಈ ಬಗ್ಗೆ ಒತ್ತಾಯ ಮಾಡುತ್ತೀರಾ ಎಂಬ ಪ್ರಶ್ನೆಗೆ, ಅದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದರು.
Union Govt Trying to Scuttle Karnataka's Free Rice Scheme, poor people are suffering slams Ramanth Rai in Mangalore.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm