ಬ್ರೇಕಿಂಗ್ ನ್ಯೂಸ್
15-06-23 06:49 pm Mangalore Correspondent ಕರಾವಳಿ
ಮಂಗಳೂರು, ಜೂನ್ 15: ಗೃಹ ಸಚಿವರ ಸೂಚನೆಯಂತೆ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಏಂಟಿ ಕಮ್ಯುನಲ್ ವಿಂಗ್ ಎಂಬ ಹೊಸ ಪೊಲೀಸ್ ತಂಡವನ್ನು ರಚಿಸಿದ್ದಾರೆ. ಸಿಟಿ ಸ್ಪೆಷಲ್ ಬ್ರಾಂಚ್ ಹೆಸರಲ್ಲೇ ಈ ತಂಡ ಅಸ್ತಿತ್ವಕ್ಕೆ ಬಂದಿದ್ದು, ಇದರ ಇನ್ಸ್ ಪೆಕ್ಟರ್ ಆಗಿ ಕೆ.ಎಂ.ಶರೀಫ್ ಅವರನ್ನು ನೇಮಕ ಮಾಡಲಾಗಿದೆ.
ಕಳೆದ ಹತ್ತು ವರ್ಷಗಳಲ್ಲಿ ಕೋಮು ದ್ವೇಷದ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ನಿಗಾ ಇಡುವುದು, ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಕಡೆ ಕೋಮು ದ್ವೇಷದ ಪ್ರಕರಣಗಳಾದಲ್ಲಿ ಅಲ್ಲಿಗೆ ತೆರಳಿ ತನಿಖೆಗೆ ಸಹಕಾರ ನೀಡುವುದು, ಆರೋಪಿಗಳನ್ನು ಪತ್ತೆಹಚ್ಚುವುದು, ನಗರದಲ್ಲಿ ಯಾವುದೇ ರೀತಿಯ ಕೋಮು ದ್ವೇಷದ ಅಥವಾ ನೈತಿಕ ಪೊಲೀಸ್ ರೀತಿಯ ಪ್ರಕರಣ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಈ ತಂಡಕ್ಕೆ ನೀಡಲಾಗಿದೆ ಎಂದು ಕಮಿಷನರ್ ಕುಲದೀಪ್ ಜೈನ್ ತಿಳಿಸಿದ್ದಾರೆ.
ಸಿಟಿ ಸ್ಪೆಷಲ್ ಬ್ರಾಂಚ್ ಎನ್ನುವುದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸ ತಂಡವಲ್ಲ. ಮೊದಲಿನಿಂದಲೂ ಈ ಬ್ರಾಂಚ್ ಇದ್ದು ಕಮಿಷನರ್ ಕಚೇರಿಯಲ್ಲಿ ನಾನ್ ಎಕ್ಸಿಕ್ಯುಟಿವ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಾ ಬಂದಿತ್ತು. ಪಾಸ್ಪೋರ್ಟ್ ಪರಿಶೀಲನೆ ಸೇರಿದಂತೆ ಕಚೇರಿಯ ವಿಶೇಷ ನಿರ್ವಹಣೆಯ ಕೆಲಸಗಳನ್ನು ಮಾಡುವುದು, ವಿಶೇಷ ಸಂದರ್ಭಗಳಲ್ಲಿ ಗುಪ್ತವಾಗಿ ಕಾರ್ಯಾಚರಿಸುವ ಕೆಲಸ ವಹಿಸುತ್ತಿದ್ದರು. ಇದೀಗ ಇದೇ ಸಿಎಸ್ ಬಿ ತಂಡದಲ್ಲೇ ಏಂಟಿ ಕಮ್ಯುನಲ್ ವಿಂಗ್ ಎನ್ನುವ ಹೆಸರಲ್ಲಿ ಹೊಸ ಪಡೆಯನ್ನು ಕಟ್ಟಲಾಗಿದೆ. ಇನ್ಸ್ ಪೆಕ್ಟರ್ ಶರೀಫ್ ನೇತೃತ್ವದಲ್ಲಿ ಈ ತಂಡ ಕಾರ್ಯಾಚರಣೆ ಮಾಡಲಿದೆ.
ಈ ತಂಡವು ಸಿಸಿಬಿ ಎಸಿಪಿ ಪಿಎ ಹೆಗಡೆ ಅವರಿಗೆ ರಿಪೋರ್ಟ್ ಮಾಡಬೇಕಿದೆ. ಯಾವುದೇ ಪ್ರಕರಣಗಳ ಬಗ್ಗೆ ಎಸಿಪಿ ಮೇಲುಸ್ತುವಾರಿಯಲ್ಲಿ ಕಾರ್ಯ ನಿರ್ವಹಣೆ ಮಾಡುವುದು ಮತ್ತು ವರದಿಯನ್ನು ಎಸಿಪಿ ಮೂಲಕ ಕಮಿಷನರ್ ಅವರಿಗೆ ಸಲ್ಲಿಸಬೇಕಿರುತ್ತದೆ. ಕೆಎಂ ಶರೀಫ್ ಈ ಹಿಂದೆ ಉರ್ವಾದಲ್ಲಿ ಇನ್ಸ್ ಪೆಕ್ಟರ್ ಆಗಿದ್ದರು. ಅದಕ್ಕೂ ಹಿಂದೆ ಕದ್ರಿ, ಪಾಂಡೇಶ್ವರದಲ್ಲಿ ಎಸ್ಐ ಆಗಿ ಕೆಲಸ ಮಾಡಿದ್ದರು. ಚುನಾವಣೆ ಘೋಷಣೆಗೂ ಮುನ್ನ ಇದೇ ಸಿಎಸ್ ಬಿ ವಿಭಾಗದಲ್ಲಿ ಇನ್ಸ್ ಪೆಕ್ಟರ್ ಆಗಿದ್ದರು. ಚುನಾವಣೆ ಸಂದರ್ಭದಲ್ಲಿ ಕಾರವಾರಕ್ಕೆ ತಾತ್ಕಾಲಿಕ ವರ್ಗಾವಣೆಯಾಗಿತ್ತು. ಇದೀಗ ಮತ್ತದೇ ಸ್ಥಾನಕ್ಕೆ ಶರೀಫ್ ನಿಯೋಜನೆಗೊಂಡಿದ್ದಾರೆ.
ನೈತಿಕ ಪೊಲೀಸ್ ಗಿರಿ ಪ್ರಕರಣಗಳನ್ನು ಹತ್ತಿಕ್ಕುವ ಪ್ರಯತ್ನವಾಗಿ ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಏಂಟಿ ಕಮ್ಯುನಲ್ ವಿಂಗ್ ಎನ್ನುವ ಹೊಸ ತಂಡವನ್ನು ಕಟ್ಟುವಂತೆ ಸೂಚನೆ ನೀಡಿದ್ದರು. ಆಮೂಲಕ ಶಾಂತಿ, ಸಾಮರಸ್ಯ ಸ್ಥಾಪಿಸುವಂತೆ ಪೊಲೀಸ್ ಕಮಿಷನರ್ ಗೆ ಸೂಚನೆ ನೀಡಿದ್ದರು. ಅದರಂತೆ, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸ ತಂಡವನ್ನು ರಚಿಸಲಾಗಿದೆ. ಅಂದಹಾಗೆ, ಈ ರೀತಿ ಕೋಮು ದ್ವೇಷದ ಪ್ರಕರಣಗಳನ್ನು ಹತ್ತಿಕ್ಕುವ ಸಲುವಾಗಿ ಹೊಸ ಟೀಮ್ ಒಂದನ್ನು ರಚಿಸಿದ್ದು ರಾಜ್ಯದಲ್ಲಿ ಇದೇ ಮೊದಲು.
Police commissioner Kuldeep Jain said, “The anti-communal wing has been formed headed by city special branch inspector under the leadership of city crime branch (CCB) to stop Moral Policing incidents in Mangalore city. The anti-communal wing will monitor the cases pertaining to moral policing, communal murders, cattle theft, trial of the accused, accused troubling victims, hate speeches, and social media posts that instigates communal violence, so that such incidents will be prevented.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 09:29 pm
Mangalore Correspondent
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
Mangalore Kudupu Murder Case, Police Suspende...
01-05-25 12:23 pm
Congress Harish Kumar, Kudupu Murder case, Ma...
30-04-25 11:26 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am