ಬ್ರೇಕಿಂಗ್ ನ್ಯೂಸ್
14-06-23 09:41 pm Mangalore Correspondent ಕರಾವಳಿ
ಮಂಗಳೂರು, ಜೂನ್ 14: ಹುಬ್ಬಳ್ಳಿ ಹುಡ್ಗಿ, ಮಂಗ್ಳೂರು ಹುಡ್ಗ ಸೀರಿಯಲ್ ಹಿಂದೊಮ್ಮೆ ಟಿವಿಯಲ್ಲಿ ಹಿಟ್ ಆಗಿ ಮನೆಮಾತಾಗಿತ್ತು. ಈಗ ಅದೇ ರೀತಿ ಹುಬ್ಬಳ್ಳಿಯ ವಿವಾಹಿತ ಗೃಹಿಣಿಯೊಬ್ಬಳು ಪುತ್ತೂರಿನಲ್ಲಿದ್ದ ಪ್ರಿಯಕರನ ಹುಡುಕ್ಕೊಂಡು ಫ್ರೀ ಬಸ್ ಹತ್ಕೊಂಡು ಬಂದಿದ್ದಾಳೆ. ಅಷ್ಟೇ ಅಲ್ಲ, ತನ್ನ ಹಳೆ ಪ್ರಿಯಕರನ ಜೊತೆಗೆ ನಾಪತ್ತೆಯಾಗಿದ್ದಾಳೆ.
ಹನ್ನೊಂದು ತಿಂಗಳ ಮಗು ಹೊಂದಿರುವ ಹುಬ್ಬಳ್ಳಿ ಮೂಲದ ಮಹಿಳೆ ತನ್ನ ಗಂಡನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡುತ್ತೇನೆಂದು ಹೇಳಿ ಆಧಾರ್ ಕಾರ್ಡ್ ಹಿಡ್ಕೊಂಡು ಮನೆಯಿಂದ ಹೊರಟಿದ್ದಳು. ಬಳಿಕ ಆಧಾರ್ ಕಾರ್ಡ್ ತೋರಿಸಿ ಉಚಿತ ಸರ್ಕಾರಿ ಬಸ್ ಮೂಲಕ ಹುಬ್ಬಳ್ಳಿಯಿಂದ ನೇರವಾಗಿ ಪುತ್ತೂರಿಗೆ ಆಗಮಿಸಿದ್ದಾಳೆ. ಆಕೆಯ ಪ್ರಿಯಕರ ಪುತ್ತೂರಿನ ಕೋಡಿಂಬಾಡಿ ಸಮೀಪದಲ್ಲಿ ತೋಟದ ಕೆಲಸ ಮಾಡುತ್ತಿದ್ದ. ಪ್ರಿಯಕರನನ್ನು ನೋಡಲು ಪುತ್ತೂರಿಗೆ ಆಗಮಿಸಿದ ಮಹಿಳೆ, ಆತನ ಜೊತೆಗೆ ಪರಾರಿಯಾಗಿದ್ದಾಳೆ.

ವರ್ಷದ ಹಿಂದೆ ಮದುವೆಯಾಗಿದ್ದ ಯುವತಿ, ಅದರ ನಡುವೆಯೂ ತನ್ನ ಹಳೇ ಪ್ರಿಯಕರನ ಒಡನಾಟ ಮುಂದುವರಿಸಿದ್ದಳು. ಅದೇ ಸಲುಗೆಯಲ್ಲಿ ಗಂಡನ ಮೇಲಿನ ಕೋಪದಲ್ಲಿ ಕೈಯಲ್ಲಿ ಹಣ ಇಲ್ಲದಿದ್ದರೂ ಉಚಿತ ಬಸ್ ಪ್ರಯಾಣದ ಅವಕಾಶ ಬಳಸಿ ಪ್ರಿಯಕರನನ್ನು ಹುಡುಕುತ್ತಲೇ ದೂರದ ಪುತ್ತೂರಿಗೆ ಬಂದಿದ್ದಾಳೆ ಎನ್ನಲಾಗಿದೆ.
ಮೂರು ದಿನದಿಂದ ಮಹಿಳೆ ನಾಪತ್ತೆಯಾಗಿದ್ದಲ್ಲದೆ, ಪುತ್ತೂರಿಗೆ ಬಂದಿರೋದು ತಿಳಿಯುತ್ತಲೇ ಹುಬ್ಬಳ್ಳಿಯಿಂದ ಗಂಡನ ಮನೆಯವರು ಹಾಗೂ ಯುವತಿ ಮನೆಯವರು ಆಗಮಿಸಿ, ಮಂಗಳವಾರ ರಾತ್ರಿಯೂ ಪುತ್ತೂರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಯುವತಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಮನೆಯವರು ಇತ್ತ ದಿಕ್ಕಿಲ್ಲದೆ ಹುಡುಕಾಟ ಆರಂಭಿಸಿದ್ದಾರೆ.
ಕಂಗಾಲಾಗಿದ್ದ ಕುಟುಂಬಸ್ಥರಿಗೆ ಸ್ಥಳೀಯ ಕೆಲವರು ಸಹಕಾರ ನೀಡಿದ್ದು ಯುವಕ - ಯುವತಿಯನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ್ದಾರೆ. ಪುತ್ತೂರು ಪೊಲೀಸರಿಗೆ ದೂರು ನೀಡಿ ಟವರ್ ಲೊಕೇಶನ್ ಪತ್ತೆ ಹಚ್ಚಿದಾಗ ಇಬ್ಬರೂ ಪುತ್ತೂರಿನಿಂದ ಸಿದ್ಧಕಟ್ಟೆಗೆ ಪರಾರಿಯಾದ ಮಾಹಿತಿ ಸಿಕ್ಕಿದೆ.
Married Women uses KSRTC free bus service from Hubbali to Puttur to see her boyfriend, and flees with him.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm