ಬ್ರೇಕಿಂಗ್ ನ್ಯೂಸ್
13-06-23 10:56 pm Mangalore Correspondent ಕರಾವಳಿ
ಬಂಟ್ವಾಳ, ಜೂನ್ 13: ಬೆಂಗಳೂರಿಗೆ ಹೋಗುತ್ತೇನೆಂದು ಮೆಸೇಜ್ ಮಾಡಿ ಹೋದ 22 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ ಮೂಡ ಗ್ರಾಮದ ಲೆಕ್ಕೆಸಿರಿ ಪಾದೆ ನಿವಾಸಿ ರಮೇಶ್ ಸಾಲ್ಯಾನ್ ಎಂಬವರ ಪುತ್ರಿ ನೇಹಾ(22) ನಾಪತ್ತೆಯಾದವಳು. ಮಂಗಳೂರಿನಲ್ಲಿ ಸೇಫ್ಟಿ ಇನ್ಸ್ಟ್ರುಮೆಂಟ್ ಶಾಪ್ ನಲ್ಲಿ ಕೆಲಸಕ್ಕಿದ್ದ ನೇಹಾ ಮೇ 27ರಂದು ತಾನು ಬೆಂಗಳೂರಿಗೆ ಹೋಗುತ್ತಿದ್ದೇನೆಂದು ಆಂಟಿ ಒಬ್ಬರಿಗೆ ಮೆಸೇಜ್ ಮಾಡಿದ್ದು, ಆನಂತರ ಫೋನ್ ಸ್ವಿಚ್ ಆಫ್ ಮಾಡಿದ್ದಾಳೆ.
ಮನೆಯವರು ನೇಹಾಗೆ ಮದುವೆ ಮಾಡಲು ರೆಡಿ ಮಾಡುತ್ತಿದ್ದರು. ಹುಡುಗ ನೋಡುವುದಕ್ಕೆ ರೆಡಿ ಮಾಡುತ್ತಿದ್ದರೆ, ನೇಹಾ ಮಾತ್ರ ತಾನು ಈಗ ಮದುವೆಯಾಗುವುದಿಲ್ಲ. ಮತ್ತೆ ಶಿಕ್ಷಣ ಮುಂದುವರಿಸುತ್ತೇನೆ ಎಂದು ನೆಪ ಹೇಳುತ್ತಿದ್ದಳು. ಮೇ 27ರಂದು ಎಂದಿನಂತೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದು, ಸಂಜೆ 4 ಗಂಟೆಗೆ ಆಂಟಿಯ ಮೊಬೈಲಿಗೆ ಮೆಸೇಜ್ ಬಂದಿತ್ತು. ನೇಹಾ ಈ ರೀತಿ ನಾಪತ್ತೆಯಾಗಿದ್ದು ಮನೆಯವರನ್ನು ದಿಗಿಲುಗೊಳಿಸಿದೆ.
ಮೇ 29 ಮತ್ತು ಜೂನ್ 6ರಂದು ಮನೆಯವರಿಗೆ ಪತ್ರವೊಂದು ಬಂದಿದ್ದು ತಾನು ಬೆಂಗಳೂರಿನಲ್ಲಿದ್ದೇನೆ. ಹುಡುಕುವ ಪ್ರಯತ್ನ ಬೇಡ ಎಂದು ಬರೆದಿತ್ತು. ಆನಂತರ ಯಾವುದೇ ಮೆಸೇಜ್ ಆಗಲೀ, ಫೋನ್ ಕರೆಯಾಗಲೀ ಬಂದಿಲ್ಲ. ಹೀಗಾಗಿ ನೇಹಾ ನಾಪತ್ತೆ ಆಗಿರುವುದು ಮನೆಯವರನ್ನು ಆತಂಕಕ್ಕೆ ತಳ್ಳಿದೆ. ನಾಪತ್ತೆ ಬಗ್ಗೆ ಆಕೆಯ ತಮ್ಮ ಅವಿನಾಶ್ ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದು, ಮೊಬೈಲ್ ಲೊಕೇಶನ್ ಆಧರಿಸಿ ಪತ್ತೆ ಮಾಡುವಂತೆ ಮನವಿ ಮಾಡಿದ್ದಾರೆ.
A young girl has gone missing after sending a message stating that she is going to Bengaluru. A missing person's complaint has been registered at the Bantwal town police station in connection with the incident. The missing girl is Neha (22), daughter of B Muda, a resident of Kasba village in Lekkasiri Pade, Ramesh Salian.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
22-09-26 02:57 pm
HK News Staffer
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm