ಬ್ರೇಕಿಂಗ್ ನ್ಯೂಸ್
06-06-23 11:00 pm Mangalore Correspondent ಕರಾವಳಿ
ಮಂಗಳೂರು, ಜೂನ್ 6: ರಾಜ್ಯದ ಜನ ಬಿಜೆಪಿ ಮೇಲಿನ ಆಕ್ರೋಶದಿಂದ ನಮಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಅದರ ನಾಯಕತ್ವ ನಂಬಿ ನಮಗೆ 135 ಸೀಟ್ ಕೊಟ್ಟಿದ್ದಾರೆ. ನಾವು ಐದು ಗ್ಯಾರಂಟಿ ತಯಾರು ಮಾಡಿ ಕೊಟ್ಟಿದ್ದೆವು. ನಾವೇನು ಗ್ಯಾರಂಟಿ ಘೋಷಣೆಯನ್ನು ಬೇಕಾಬಿಟ್ಟಿ ತೀರ್ಮಾನಿಸಿರಲಿಲ್ಲ. ಹಣಕಾಸು ಖರ್ಚಿನ ಲೆಕ್ಕಾಚಾರ ಮಾಡಿ ಸಾದ್ಯತೆ ಬಳಿಕ ಪ್ರಕಟ ಮಾಡಿದ್ದೆವು ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆಗಿದ್ದ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ, ಕಾರ್ಯಕರ್ತರನ್ನುದ್ದೇಶಿ ಪರಮೇಶ್ವರ್ ಭಾಷಣ ಮಾಡಿದರು. ನಾವು ಯಾವುದೇ ಬೇಜವಾಬ್ದಾರಿಯಿಂದ ಗ್ಯಾರಂಟಿ ಘೋಷಣೆ ಮಾಡಿಲ್ಲ. ಕಾಂಗ್ರೆಸ್ ಗ್ಯಾರಂಟಿ ಕೊಟ್ಟು ದಿವಾಳಿ ಮಾಡುತ್ತೆ ಅಂತ ಬಿಜೆಪಿ ಮತ್ತು ಮೋದಿ ಹೇಳ್ತಾ ಇದಾರೆ. ಆದರೆ ನಾವು ಗ್ಯಾರಂಟಿ ಘೋಷಣೆಯನ್ನು ಯಾವುದೇ ಬೇಜವಾಬ್ದಾರಿಯಿಂದ ಮಾಡಿರಲಿಲ್ಲ ಎಂದರು.

ಗೃಹ ಇಲಾಖೆ ನನಗೆ ಈ ಬಾರಿ ಹ್ಯಾಟ್ರಿಕ್ ಸಿಕ್ಕಿದೆ, ಈ ಖಾತೆ ಕೊಟ್ಟಾಗ ನಾನು ಸಿದ್ದರಾಮಯ್ಯರಿಗೆ ಹೇಳಿದೆ. ನಿಮಗೆ ಯಾಕೆ ಇಷ್ಟು ಪ್ರೀತಿ? ಜನರಿಗೆ ಸೇವೆ ಮಾಡಲು ಬೇರೆ ಖಾತೆ ಕೊಡಿ ಅಂದೆ. ಸೆಲ್ಯೂಟ್ , ಸೆಲ್ಯೂಟ್ ಒಂದೇ ಆಯ್ತು ನನಗೆ ಅಂದಿದ್ದೆ. ಆದರೆ ಅವರು ದ.ಕ ಜಿಲ್ಲೆಯರಿಗೆ ನೀವೇ ಹೋಂ ಮಿನಿಸ್ಟರ್ ಆಗಬೇಕು ಅಂದ್ರು.
ಸದ್ಯ ಪೊಲೀಸರ ಸಭೆ ನಡೆಸಿ ಕಠಿಣ ಕ್ರಮಗಳ ಬಗ್ಗೆ ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್ ಗಿರಿ ಸಹಿಸಲ್ಲ ಅಂದಿದ್ದೇನೆ. ಪ್ರಣಾಳಿಕೆ ರಚನೆ ವೇಳೆ ಚೇಂಬರ್ ಆಫ್ ಕಾಮರ್ಸ್ ನವರು ಹೇಳಿದ್ದರು. ಕೋಮು ವಿಚಾರದ ಕಾರಣಕ್ಕೆ ಇಲ್ಲಿ ಇನ್ವೆಸ್ಟ್ ಮೆಂಟ್ ಬರಲ್ಲ ಅಂದ್ರು. ಅದಕ್ಕಾಗಿ ಇಲ್ಲಿನ ವಾತಾವರಣ ಬದಲಾಗಬೇಕು. ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಖಡಕ್ ಸೂಚನೆ ಕೊಟ್ಟಿದ್ದೇನೆ.
ಮೊದಲು ಹೇಗೆ ಇದ್ರೋ ಗೊತ್ತಿಲ್ಲ, ಏನೇನ್ ಆಟ ಆಡಿದ್ರೋ ಗೊತ್ತಿಲ್ಲ. ಕೇಸರಿಕರಣ ಮಾಡಿದ್ರೋ ಮತ್ತೊಂದು ಈಗ ನನಗೆ ಅಗತ್ಯ ಇಲ್ಲ. ಆದರೆ ಇನ್ನು ಮುಂದೆ ಪೊಲೀಸರು ಸರಿಯಾಗಿ ಕೆಲಸ ಮಾಡಬೇಕು. ಮಾಡದೇ ಇದ್ರೆ ನಮ್ಮ ಔಷಧಾಲಯದಲ್ಲಿ ಬೇರೆ ಔಷಧಿ ಇದೆ ಎಂದು ಖಡಕ್ಕಾಗಿ ಹೇಳಿದರು. ಮತ್ತೆ ಗೃಹ ಸಚಿವ ಸ್ಥಾನದ ಪೋಸ್ಟ್ ನನಗೇ ಸಿಕ್ಕಿದೆ, ನಾನು ಈ ಜಿಲ್ಲೆಯನ್ನ ಸರಿ ಮಾಡ್ತೇನೆ. ಇಲ್ಲಿ ಕಾಂಗ್ರೆಸ್ ಸೋತಿದೆ ಅನ್ನೋ ಭಾವನೆ ಬೇಡ. ಇವತ್ತು ಅಧಿಕಾರ ಸಿಕ್ಕಿದೆ, ಸರ್ಕಾರ ನಿಮ್ಮ ಸರ್ಕಾರ, ನಿಮ್ಮ ಜೊತೇಲಿ ಇರಲಿದೆ ಎಂದರು.
If Police Department doesn't work duly we have a medicine for them says Home Minister G. Parameshwara in Mangalore.
23-09-26 05:14 pm
HK News Staffer
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 09:55 am
HK News Staffer
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
23-09-26 05:12 pm
HK News Staffer
ರೌಡಿಶೀಟರ್ ಜೊತೆಗೆ ಹುಟ್ಟುಹಬ್ಬ ಪಾರ್ಟಿಯಲ್ಲಿ ಕುಡಿದ...
23-09-26 05:10 pm
ಸೈಬರ್ ಕ್ರೈಮ್ ಪೊಲೀಸರೆಂದು ಹೇಳಿ ವೈದ್ಯರಿಂದಲೇ 1.19...
23-09-26 09:32 am
Inspector Balakrishna Arrest, Police: ಮೇಲಧಿಕಾ...
22-09-26 09:00 pm
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm