ಬ್ರೇಕಿಂಗ್ ನ್ಯೂಸ್
03-06-23 02:55 pm Mangalore Correspondent ಕರಾವಳಿ
ಉಳ್ಳಾಲ, ಜೂ.3 : ಪ್ರೇಯಸಿಯೊಬ್ಬಳು ತನ್ನಿಬ್ಬರು ಸ್ನೇಹಿತೆಯರನ್ನ ಕರೆಸಿ ಗೆಳೆಯರಿಗೆ ಹಂಚಿದ್ದು 'ಕೇರಳ ಸ್ಟೋರಿ' ಸಿನೆಮಾದ ಭಾಗವಾಗಿತ್ತು. ಮೊನ್ನೆ ಸೋಮೇಶ್ವರ ಬೀಚಲ್ಲೂ ಅದೇ ರೀತಿಯ ಸೀನರಿ ನಡೆದಿತ್ತು ಎನ್ನುವ ಮಾತು ಕೇಳಿಬಂದಿದೆ. ಬೀಚಲ್ಲಿ ಹಿಂದೂ ಯುವತಿಯರನ್ನು ಕರೆಸಿಕೊಂಡು ಅಶ್ಲೀಲವಾಗಿ ಮೋಜಲ್ಲಿ ತೊಡಗಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಲವ್ ಜಿಹಾದ್ ನಡೆಸುತ್ತಿರುವ ಇಂತಹ ಸಂದರ್ಭದಲ್ಲಿ ಇದನ್ನೆಲ್ಲ ನೋಡಿಕೊಂಡು ನಮ್ಮ ಹುಡುಗರು ಸುಮ್ಮನಿರಬೇಕಿತ್ತಾ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಧನಲಕ್ಷ್ಮಿ ಗಟ್ಟಿ ಪ್ರಶ್ನಿಸಿದ್ದಾರೆ.
ಗುರುವಾರ ಸಂಜೆ ಸೋಮೇಶ್ವರ ಬೀಚಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದು, ಅನ್ಯಮತೀಯ ಯುವಕರೊಂದಿಗೆ ಮೋಜಲ್ಲಿ ತೊಡಗಿ ಘಟನೆಗೆ ಕಾರಣರಾದ ಹಿಂದು ಯುವತಿಯರ ಪೋಷಕರನ್ನ ಠಾಣೆಗೆ ಕರೆಸಿ ಪ್ರಕರಣದ ಅಸಲಿಯತ್ತನ್ನ ಅವರಿಗೆ ತಿಳಿಯ ಪಡಿಸಬೇಕೆಂದು ಉಳ್ಳಾಲ ಮಹಿಳಾ ರಕ್ಷಣಾ ವೇದಿಕೆ ವತಿಯಿಂದ ಇಂದು ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಧನಲಕ್ಷ್ಮಿ ಗಟ್ಟಿ ಅವರು ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರವಾಗಿ ಏಳು ಜನ ಹಿಂದೂ ಸಂಘಟನೆ ಕಾರ್ಯಕರ್ತರನ್ನ ಬಂಧಿಸಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ಸೋಮೇಶ್ವರ ಬೀಚಲ್ಲಿ ಮೋಜು ಮಸ್ತಿಯಲ್ಲಿ ನಿರತರಾಗಿದ್ದವರೆಲ್ಲರೂ ವಿದ್ಯಾರ್ಥಿಗಳೆಂದೇ ಬಿಂಬಿಸಲಾಗಿತ್ತು. ಅಸಲಿಗೆ ಅಂದು ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಬಂದಿದ್ದ ಮುಸ್ಲಿಂ ಯುವಕರು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. ಹಿಂದೂ ಸಂಘಟನೆ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಕೇರಳದ ಚೆರ್ಕಳದ ಜಾಫರ್ ಶರೀಫ್ ಮೀಶೋ ಆನ್ ಲೈನ್ ಕಂಪನಿಯ ಡೆಲಿವರಿ ಬಾಯ್ ಆಗಿದ್ದರೆ, ಮಂಜೇಶ್ವರ ಮೂಲದ ಮಹಮ್ಮದ್ ಮುಜೀಬ್ ಸೂಪರ್ ಮಾರ್ಕೆಟ್ ಒಂದರಲ್ಲಿ ಕೆಲಸಕ್ಕಿದ್ದು, ಆಶಿಕ್ ಜವಳಿ ಶಾಪಲ್ಲಿ ಕೆಲಸ ಮಾಡುತ್ತಿದ್ದಾನೆ.



ಇವರಲ್ಲಿ ಓರ್ವನಿಗೆ ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಪ್ರೇಯಸಿಯಾಗಿದ್ದಳು. ಲವ್ ಜಿಹಾದ್ ನ ಅಮಲೇರಿಸಿದ್ದ ಈ ಕಿರಾತಕ ಪ್ರೇಯಸಿಯಲ್ಲಿ ಹೇಳಿ ಆಕೆಯ ಇಬ್ಬರು ಸ್ನೇಹಿತೆಯರನ್ನ ತನ್ನ ಇಬ್ಬರು ಸ್ನೇಹಿತರಿಗೆ ಪರಿಚಯಿಸಿ ಜತೆಯಾಗಿ ಸೋಮೇಶ್ವರ ಬೀಚ್ಗೆ ಬಂದು ಸಾರ್ವಜನಿಕರ ಎದುರೇ ಅಶ್ಲೀಲವಾಗಿ ವರ್ತಿಸಿ ಮೋಜು ಮಾಡಿದ್ದಾರೆ. ಅನ್ಯಕೋಮಿನ ಯುವಕರು ಹಿಂದೂ ಯುವತಿಯರೊಂದಿಗೆ ಸಾರ್ವಜನಿಕವಾಗಿ ಮೋಜು ಮಾಡುವಾಗ ಕಣ್ಣಾರೆ ಕಂಡ ಹಿಂದೂ ಯುವಕರು ಸಹಿಸ ಬೇಕಿತ್ತೇ ಎಂದು ಧನಲಕ್ಷ್ಮಿ ಪ್ರಶ್ನಿಸಿದ್ದಾರೆ.
ಹಲ್ಲೆಗೊಳಗಾದ ಮುಸ್ಲಿಂ ಯುವಕರು ಅಮಾಯಕರಂತೆ ನಟಿಸಿ ಆಸ್ಪತ್ರೆ ಸೇರಿದ್ದು, ಆಸ್ಪತ್ರೆಯಿಂದ ಹೊರ ಹೋಗಿ ಮತ್ತೆ ಲವ್ ಜಿಹಾದ್ ಚಟುವಟಿಕೆಯಲ್ಲಿ ಸಕ್ರಿಯರಾಗುವುದು ಗ್ಯಾರಂಟಿ. ಹಾಗಾಗಿ ಅವರ ಜತೆಯಲ್ಲಿದ್ದ ಹಿಂದೂ ಯುವತಿಯರ ಪೋಷಕರನ್ನ ಎಚ್ಚರಿಸುವುದು ಪೊಲೀಸರ ಕರ್ತವ್ಯ. ನಮ್ಮ ಬೇಡಿಕೆ ಈಡೇರದಿದ್ದರೆ ಯುವತಿಯರು ವ್ಯಾಸಂಗ ಮಾಡುವ ಕಾಲೇಜಿನ ಮುಂಭಾಗ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
Moral police in Ullal beach in Mangalore, Mahila Rakshana Vedike demands advice for Hindu Parents, allege Kerala Story in ullal targeting hindu girls. Six people were arrested and a minor was detained in Mangaluru for allegedly assaulting three Muslim men, who were hanging out with their Hindu women friends, police said on Friday.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm