ಬ್ರೇಕಿಂಗ್ ನ್ಯೂಸ್
29-05-23 08:18 pm Mangalore Correspondent ಕರಾವಳಿ
ಮಂಗಳೂರು, ಮೇ 29: ತುಳು ಭಾಷೆಯನ್ನು ದ್ವಿತೀಯ ರಾಜ್ಯ ಭಾಷೆಯಾಗಿ ಮಾನ್ಯತೆ ನೀಡುವ ಸಲುವಾಗಿ ಡಾ.ಮೋಹನ ಆಳ್ವಾ ನೇತೃತ್ವದ ಸಮಿತಿಯ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಭಾಷೆಗೆ ಮಾನ್ಯತೆ ನೀಡುವ ವಿಚಾರದಲ್ಲಿ ಬಿಜೆಪಿ ಸರಕಾರ 95 ಶೇಕಡಾ ಕೆಲಸ ಮಾಡಿ ಮುಗಿಸಿದೆ. ಇನ್ನೈದು ಪರ್ಸೆಂಟ್ ಅಷ್ಟೇ ಬಾಕಿಯುಳಿದಿದ್ದು ಅದನ್ನು ಕಾಂಗ್ರೆಸ್ ಸರಕಾರ ಆದಷ್ಟು ಬೇಗ ಮಾಡಲಿ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಪ್ರಮಾಣ ವಚನ ಸಂದರ್ಭದಲ್ಲಿ ತುಳುನಾಡನ್ನು ಪ್ರತಿನಿಧಿಸುವ ಶಾಲು ಹಾಕ್ಕೊಂಡಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತುಳು ಭಾಷೆಗೆ ಮಾನ್ಯತೆ ನೀಡಬೇಕೆಂದು ನಮಗೂ ಮಹದಾಸೆ ಇದೆ. ಆ ನಿಟ್ಟಿನಲ್ಲಿ ನಾವು ತಜ್ಞರ ಸಮಿತಿ ಮಾಡಿ ವರದಿ ಪಡೆದಿದ್ದೇವೆ. ಚುನಾವಣೆಗೂ ಮುನ್ನ ವರದಿಯನ್ನು ಪಡೆಯಲಾಗಿತ್ತು. ಆ ವರದಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿದೆ. ಭಾಷೆಗೆ ಮಾನ್ಯತೆ ನೀಡುವ ವಿಚಾರದಲ್ಲಿ ನಾವು 95 ಶೇಕಡಾ ಕೆಲಸ ಮುಗಿಸಿದ್ದೇವೆ. ಚುನಾವಣೆ ಘೋಷಣೆ ಆಗಿದ್ದರಿಂದ ಕೊನೆಕ್ಷಣದಲ್ಲಿ ಮಾನ್ಯತೆ ನೀಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.
ಬಿಜೆಪಿ ಹೀನಾಯ ಸೋಲಿನ ಬಳಿಕ ವಿಪಕ್ಷ ನಾಯಕನನ್ನು ನೇಮಿಸುವುದಕ್ಕೂ ಆಗಿಲ್ಲವೇ ಎಂಬ ಪ್ರಶ್ನೆಗೆ, ವಿಪಕ್ಷ ನಾಯಕನ ಅಗತ್ಯ ಇರುವುದು ಮುಂದಿನ ಅಧಿವೇಶನಕ್ಕೆ. ಅಲ್ಲಿ ವರೆಗೆ ವಿಪಕ್ಷ ನಾಯಕ ಎಂಬುದು ಬೇಕಿಲ್ಲ. ನಾವೆಲ್ಲ ಬಿಜೆಪಿ ಶಾಸಕರು ವಿಪಕ್ಷದವರೇ. ಜುಲೈ ವೇಳೆಗೆ ಅಧಿವೇಶನ ಆಗೋದಕ್ಕೂ ಮುನ್ನ ವಿಪಕ್ಷ ನಾಯಕರ ನೇಮಕ ಆಗುತ್ತದೆ ಎಂದರು. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಕೂಗು ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ಅದೆಲ್ಲ ನಮಗೆ ಗೊತ್ತಿಲ್ಲ. ಮೇಲಿನವರು ತೀರ್ಮಾನಿಸುವ ವಿಚಾರ ಎಂದು ಹೇಳಿದರು.
Tulu as 2nd official language, report filed by Mohan Alva, let Congress make the final decision says Mla Vedavyas Kamath in Mangalore.
30-12-25 11:12 pm
HK News Desk
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
ಕೇರಳದಲ್ಲಿ ಚುನಾವಣೆಯಾದ್ರೆ ಪಿಣರಾಯಿಗೆ ಕರ್ನಾಟಕದಲ್ಲ...
30-12-25 05:10 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
31-12-25 11:47 am
Mangalore Correspondent
ಹೊಸ ವರ್ಷಾಚರಣೆ ; ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ...
30-12-25 10:43 pm
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm