ಬ್ರೇಕಿಂಗ್ ನ್ಯೂಸ್
24-05-23 09:43 pm Mangalore Correspondent ಕರಾವಳಿ
ಬೆಳ್ತಂಗಡಿ, ಮೇ 24 : ತನ್ನ ವಿರುದ್ಧ ಯಾವ ಸೀಮೆಯ ಹಿಂದುತ್ವ ಎಂದು ಪ್ರಶ್ನೆ ಮಾಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಹಿಂದು ಸಂಘಟನೆಗಳ ನಾಯಕರೆಂದೇ ಗುರುತಿಸ್ಕೊಂಡು ಬಂದಿದ್ದ ಸತ್ಯಜಿತ್ ಸುರತ್ಕಲ್ ಹರಿಹಾಯ್ದಿದ್ದಾರೆ. ಹರೀಶ್ ಪೂಂಜ ನನ್ನ ಹಿಂದುತ್ವದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾಗಿ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ನಡೆಸುವ ಯಾವ ಅಗತ್ಯವೂ ನನಗಿಲ್ಲ. ಅಂಥ ಆಸೆ ಇರುತ್ತಿದ್ದಲ್ಲಿ ನಾನು ಕಾಂಗ್ರೆಸ್ ಪಕ್ಷದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ.
ನನ್ನನ್ನ ಅಣ್ಣ ಎಂದು ಹರೀಶ ಪೂಂಜ ಸಂಬೋಧನೆ ಮಾಡಿದ್ದಾರೆ. ಆ ರೀತಿಯ ಸಂಬಂಧ ಹರೀಶ್ ಪೂಂಜ ನನ್ನ ಜೊತೆ ಇಟ್ಟು ಕೊಂಡಿದ್ದಾರೆಯೇ..? 2018ರಲ್ಲಿ ಬಿಜೆಪಿ ಟಿಕೆಟ್ ಸಿಗುವ ಮುಂಚೆ, ಸೀಟ್ ನನಗೆ ಸಿಗಬಹುದಾ, ಯಾರತ್ರ ಮಾತಾಡಬಹುದು ಅಂತ ದಿನಕ್ಕೆರಡು ಬಾರಿ ಕೇಳ್ತಾಯಿದ್ರು. ಸೀಟ್ ಆದ ಬಳಿಕ ಒಂದೇ ಒಂದು ಫೋನ್ ನನಗೆ ಮಾಡ್ಲಿಲ್ಲ. ಆ ರೀತಿಯ ಸಂಬಂಧವನ್ನೇ ಕಳೆದುಕೊಂಡ ವ್ಯಕ್ತಿ ಹರೀಶ್ ಪೂಂಜ. ಅಂತಹ ತಮ್ಮನ ಅವಶ್ಯಕತೆ ನನಗೆ ಬೇಕಾಗಿಯೂ ಇಲ್ಲ. ಕಾಂಗ್ರೆಸ್ ಪರ ಮತಯಾಚನೆ ಮಾಡುವುದಾದರೆ ನನಗೆ ಒಂದು ಕ್ಷೇತ್ರ ಅಲ್ಲ. ಅನೇಕ ಕ್ಷೇತ್ರಗಳಿದ್ದವು. ಹಲವು ಕಡೆ ಪ್ರಚಾರಕ್ಕೆ ಕರೆದಿದ್ದೂ ಇದೆ. ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ವೇದಿಕೆ ಹತ್ತಲ್ಲ ಎಂದು ನಿಶ್ಚಯ ಮಾಡಿದ್ದೇನೆ ಎಂದರು.
ನಾನೇನು ಹಿಂದುತ್ವಕ್ಕೆ ಅನ್ಯಾಯ ಮಾಡಿದ್ದೇನೆ ಸತ್ಯಣ್ಣ ಎಂದು ನನಗೆ ಪ್ರಶ್ನೆ ಮಾಡಿದ್ದಾರೆ. ಅಧಿಕಾರದ ಅಮಲಿನಲ್ಲಿ ಎಲ್ಲೆಲ್ಲಿ ಹಿಂದುತ್ವವನ್ನ ಮರೆತು ಹೋಗಿದ್ದೀರಿ ಅನ್ನುವುದು ನನಗೆ ಗೊತ್ತಿದೆ. ಇಷ್ಟಕ್ಕೂ ನೀವೆಷ್ಟು ಹಿಂದುತ್ವದ ಹೋರಾಟ ಮಾಡಿದ್ದೀರಿ ಹೇಳಬಹುದಾ.. 41 ವರ್ಷದ ನೀವು ಯಾವಾಗ ಹಿಂದುತ್ವ ನೋಡಿದ್ದು. ಈವರೆಗೆ ಎಷ್ಟು ಹೋರಾಟ ಮಾಡಿದ್ದೀರಿ ಅಂತ ಹೇಳಬಹುದೇ ಎಂದು ಸತ್ಯಜಿತ್ ಪ್ರಶ್ನೆ ಮಾಡಿದ್ದಾರೆ.
ಹರೀಶ್ ಪೂಂಜಾರಿಂದ ಹಿಂದುತ್ವ ಮತ್ತು ಹಿಂದು ಸಮಾಜಕ್ಕೆ ಅವಮಾನವಾಗಿದೆ. ಇವರು ವೇದಿಕೆಯಲ್ಲಿ ನಿಂತು ತನಗೆ ಮುಸಲ್ಮಾನರ ಮತಗಳೇ ಬೇಡ, ಅವರೊಂದಿಗೆ ವ್ಯವಹಾರ ಮಾಡಬೇಡಿ ಎಂದು ಹೇಳುತ್ತಾರೆ. ಇದೇ ಹರೀಶ್ ಪೂಂಜ, ಸುರತ್ಕಲ್ ನಲ್ಲಿ ತನ್ನ ಹೆಸರಲ್ಲಿದ್ದ ಗ್ಯಾಸ್ ಏಜನ್ಸಿಯನ್ನ ಅಶ್ರಫ್ ಎನ್ನುವ ಮುಸಲ್ಮಾನ್ ವ್ಯಕ್ತಿಗೆ ಮಾರಾಟ ಮಾಡಿದ್ದು ಹೇಗೆ.. ಅದು ಹಿಂದುತ್ವನಾ..? ಕಾಜೂರಿನಲ್ಲಿ 17 ಎಕರೆ ಗೋಮಾಳದ ಜಾಗವನ್ನ ಶಾಲಾ ಮೈದಾನಕ್ಕೆ ಕೊಡ್ತೀನಿ ಎಂದು ಭಾಷಣ ಮಾಡಿದ್ದ ನೀವು, ಅದೇ ಜಾಗವನ್ನು ಮಸೀದಿ ಕಟ್ಟಲು ವ್ಯವಸ್ಥೆ ಮಾಡಿದ್ದು ಹೇಗೆ ? 1.50 ಕೋಟಿ ರೂಪಾಯಿ ಅನುದಾನವನ್ನು ಕಾಜೂರು ಮಸೀದಿ ನಿರ್ಮಾಣಕ್ಕೆ ನೀಡಿದ್ದೀರಲ್ಲಾ.. ಮುಸ್ಲಿಮರು ಬೇಡ ಎಂದು ಭಾಷಣದಲ್ಲಿ ಹೇಳುವ ನೀವು ಇದೆಲ್ಲ ಮಾಡೋದು ಹೇಗೆ? ಅದೇ ಪ್ರದೇಶದ ದೇವಸ್ಥಾನವೊಂದಕ್ಕೆ ಕೇವಲ 25 ಲಕ್ಷ ಅನುದಾನ ಕೊಟ್ಟಿದ್ದೀರಿ. ಮಸೀದಿಗೆ ಹೆಚ್ಚು ಕೊಟ್ಟಿದ್ದಕ್ಕೆ ಅಸಮಾಧಾನಗೊಂಡ ದೇವಸ್ಥಾನದವರು ಅನುದಾನವನ್ನು ವಾಪಸ್ ಕೊಟ್ಟಿದ್ದಾರಲ್ಲಾ.. ಇದು ನಿಮ್ಮ ಯಾವ ಸೀಮೆಯ ಹಿಂದುತ್ವ ಎಂದು ಸತ್ಯಜಿತ್ ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿ ಮಾಡಿದ್ದರೂ, ಶಾಲೆಯೊಂದರಲ್ಲಿ ಬೈಬಲ್ ಹಂಚಿದವರನ್ನ ಪೊಲೀಸರಿಂದ ಬಿಡಿಸಿದ್ದು ಯಾರು..? ಚುನಾವಣೆ ಕಾರಣಕ್ಕೆ ತನಗೇ ಓಟು ಹಾಕಬೇಕೆಂದು ಕೊಚ್ಚಿ ಕ್ರಿಶ್ಚಿಯನ್ ಸಮುದಾಯದ ಜನರೊಂದಿಗೆ ಪ್ರತ್ಯೇಕ ಸಭೆ ಮಾಡಿದ್ದು ಯಾಕೆ ಹೇಳ್ತೀರಾ..? ಇವೆಲ್ಲದರ ನಡುವೆ, ಕ್ಷೇತ್ರದಲ್ಲಿ ಮರಳುಗಾರಿಕೆಯ ಟೆಂಡರ್ ಯಾರಿಗೆ ಕೊಟ್ಟಿದ್ದೀರಿ ಪೂಂಜಾ ಅವರೇ..? ಮುಸ್ಲಿಮರೇ ಬೇಡ ಎನ್ನುವ ನೀವು, ಮುಸಲ್ಮಾನರಿಗೆ ಉಚಿತವಾಗಿ ಅಜ್ಮೀರ್ ಪ್ರವಾಸಕ್ಕೆ ವ್ಯವಸ್ಥೆ ಮಾಡಿದ್ದು ಯಾರು ಹೇಳ್ತೀರಾ..?
ಶಾಸಕನೆಂದರೆ ಎಲ್ಲರ ಹಿತ ಕಾಪಾಡಬೇಕು. ಯಾರದ್ದೋ ಪರ ಇರುವುದಲ್ಲ. ವೇದಿಕೆಯಲ್ಲಿ ನಿಂತು ಮುಸಲ್ಮಾನರ ಮತಗಳೇ ಬೇಡ ಎಂದು ಹೇಳೋದ್ಯಾಕೆ..? ವೇದಿಕೆಯಲ್ಲಿ ಹೇಳೋದು ಬೇರೆ... ಹಿಂಬದಿಯಿಂದ ಮಾಡುವ ರಾಜಕಾರಣ ಬೇರೆ. ಇದು ಹರೀಶ್ ಪೂಂಜರವರ ಹಿಂದುತ್ವನಾ ಎಂದು ಸತ್ಯಜಿತ್ ಸುರತ್ಕಲ್ ಪ್ರಶ್ನಿಸಿದರು. 16ರ ವಯಸ್ಸಿನಲ್ಲಿ ಹಿಂದುತ್ವಕ್ಕೋಸ್ಕರ ಹೋರಾಡಿದವನು ನಾನು. ಅಯೋಧ್ಯೆ ಹೋರಾಟ, ಲವ್ ಜಿಹಾದ್ ವಿರುದ್ಧದ ಹೋರಾಟ, ಉಜಿರೆಯಲ್ಲಿ ಹಿಂದುಗಳ ಕೊಲೆಯಾದಾಗ, ಮೀನುಗಳ ಮಾರಣಹೋಮ ಆದಾಗ ಎಷ್ಟು ಬಾರಿ ಬೆಳ್ತಂಗಡಿ ಠಾಣೆ ಮುಂದೆ ಪ್ರತಿಭಟನೆ ಮಾಡಿಲ್ಲ. ಹಿಂದುತ್ವಕ್ಕಾಗಿ ಹೋರಾಟ ಮಾಡಿದ್ದೇನೆ ವಿನಾ ಯಾವುದೇ ಸಮುದಾಯದ ವಿರುದ್ಧ ಗುರಿ ಮಾಡಿಲ್ಲ. ನನ್ನ ಬಗ್ಗೆ ಪ್ರಶ್ನೆ ಮಾಡುವ ಇವರು, ಎಷ್ಟು ಹಿಂದುತ್ವದ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಬೆಳ್ತಂಗಡಿಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ಪಾಲಾದವರ ಮನೆಗೆ ಪೂಂಜ ಭೇಟಿ ನೀಡಿದ್ದಾರಾ..? 1995 ರವರೆಗೂ ಬೆಳ್ತಂಗಡಿಯ ಅನೇಕ ಹೋರಾಟಗಳಲ್ಲಿ ಭಾಗಿಯಾದವರು ನಾವು. ಶಾಸಕರಾದ ಬಳಿಕ ಒಂದು ದಿವಸ ಸ್ಟೇಷನ್ ನಲ್ಲಿ ಕಳೆದಿದ್ದನ್ನು ಶಾಸಕರು ಹೋರಾಟ ಎನ್ನುತ್ತಾರೆ. ಪ್ರವೀಣ್ ನೆಟ್ಟಾರ್, ಶರತ್ ಮಡಿವಾಳ ಮನೆ ಬಿಟ್ಟರೆ ಬೇರೆ ಯಾವುದಾದರೂ ಕಾರ್ಯಕರ್ತರ ಮನೆಗೆ ಪೂಂಜ ಭೇಟಿ ನೀಡಿದ್ದಾರೆಯೇ..?
ಪವಿತ್ರ ಹಿಂದುತ್ವದ ಹೋರಾಟವನ್ನು ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಂಡಿದ್ದೀರ.. ಬಿಜೆಪಿ ಪಕ್ಷದಲ್ಲಿ ಇರುವ ಎಲ್ಲರೂ ಹಿಂದುವಾದಿಗಳು ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಎಲ್ಲರೂ ಹಿಂದೂ ವಿರೋಧಿಗಳೂ ಅಲ್ಲ. ನಮಗೆ ಹಿಂದೂಗಳಲ್ಲಿ ಯಾವುದೇ ಭೇದ ಭಾವ ಇಲ್ಲ. ಬಿಲ್ಲವ ಸಮಾಜಕ್ಕೆ ಎಷ್ಟು ಅಪಮಾನ ಮಾಡಿದ್ರಿ ನೀವು. ಮುಸಲ್ಮಾನರು ಆದರೂ ಆಗಬಹುದು ಬಿಲ್ಲವರಲ್ಲ ಅಂತ ನಿಮ್ಮ ಪಕ್ಷದವರೇ ಹೇಳಿದ್ರು. ಕೋಟಿ ಚೆನ್ನಯರ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿಯನ್ನು ನಿಮ್ಮದೇ ವಾಹನದಲ್ಲಿ ಕರೆದುಕೊಂಡು ಬರ್ತೀರಾ.. ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ತಿರಸ್ಕರಿಸಿದ ಚಕ್ರತೀರ್ಥನನ್ನ ಮೆರವಣಿಗೆ ಮೂಲಕ ಕರೆದು ತರ್ತೀರಾ.. ರಾಜ್ಯದ ಯಾವುದಾದರು ಶಾಸಕ ರೋಹಿತ್ ಚಕ್ರತೀರ್ಥನಿಗೆ ಸನ್ಮಾನ ಮಾಡಿದ್ದಾರಾ..? ಬಿಲ್ಲವ ಸಮಾಜದ ವಿರೋಧವಿದ್ರೂ ಅವರನ್ನ ವೇಣೂರಿನ ದೇವಸ್ಥಾನಕ್ಕೆ ಕರೆದು ತರ್ತೀರಾ.. ಈಗ ಎಲ್ಲಿ ಹೋದರೂ ಬಿಲ್ಲವರು ಎಂದು ಅಪಹಾಸ್ಯ ಮಾಡ್ತೀರಾ.. ಬೆಳ್ತಂಗಡಿಯಲ್ಲಿ ಬಿಲ್ಲವ ಸಮಾಜವನ್ನೇ ವಿಭಜನೆ ಮಾಡಿದ್ದಾರೆ. ಈ ಮೂಲಕ ಹಿಂದೂ ಸಮಾಜಕ್ಕೆ ಅಪಮಾನ ಮಾಡಿದ್ದೀರಿ.. ಮರ ಕದ್ದ ವ್ಯಕ್ತಿಯನ್ನು ಬಂಧಿಸಿದ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ರಿ.. ಇದೆಲ್ಲ ಶಾಸಕ ಹರೀಶ್ ಪೂಂಜ ಅವರ ಹಿಂದುತ್ವನಾ? ಎಂದು ಬೆಳ್ತಂಗಡಿಯಲ್ಲೇ ಸುದ್ದಿಗೋಷ್ಟಿ ಕರೆದು ಸತ್ಯಜಿತ್ ಸುರತ್ಕಲ್ ವಾಗ್ದಾಳಿ ನಡೆಸಿದ್ದಾರೆ. ಬಿಲ್ಲವ ಸಂಘಟನೆಯ ಮುಖಂಡರು ಜೊತೆಗಿದ್ದರು.
Mangalore Satyajith Surathkal slams Mla Harish Poonja over Hindutva. Harish Poonja needs Mumslims to do all his work. Recently Poonja had alleged that Satyajith is brain washing billavas in Belthangady stating not to vote for poonja.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
07-07-25 04:11 pm
HK News Desk
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
07-07-25 03:30 pm
Mangalore Correspondent
Moral policing, Puttur, Mangalore Crime: ನೀನು...
07-07-25 12:20 pm
Tamilnadu Lock up death, Kannada News: ತಮಿಳುನ...
06-07-25 10:52 pm
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm