ಬ್ರೇಕಿಂಗ್ ನ್ಯೂಸ್
22-05-23 05:30 pm Mangalore Correspondent ಕರಾವಳಿ
ಮಂಗಳೂರು, ಮೇ 22: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಮೇ 23ರಂದು ಸಿಡ್ನಿಯಲ್ಲಿ ಭಾರತೀಯ ನಿವಾಸಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಭಾರತ ಮೂಲದ ಆಸ್ಟ್ರೇಲಿಯನ್ನರು ಭಾರೀ ಸಿದ್ಧತೆ ನಡೆಸಿದ್ದು ಈ ವೇಳೆ ಮಂಗಳೂರು ಮೂಲದ ನಾಟ್ಯವಿದುಷಿ ಪಲ್ಲವಿ ಭಾಗವತ್ ನೇತೃತ್ವದ ತಂಡವು ಭರತನಾಟ್ಯ ಮತ್ತಿತರ ವಿಭಿನ್ನ ನೃತ್ಯ ಪ್ರದರ್ಶನ ನೀಡಲಿದೆ.
ದಿ ಇಂಡಿಯನ್ ಆಸ್ಟ್ರೇಲಿಯನ್ ಡಯಸ್ಪೋರಾ ಫೌಂಡೇಶನ್ ಈ ಒಟ್ಟು ಕಾರ್ಯಕ್ರಮವನ್ನು ಆಯೋಜಿಸಿದ್ದು, 20 ಸಾವಿರಕ್ಕೂ ಹೆಚ್ಚು ಭಾರತೀಯ ಮೂಲದ ನಿವಾಸಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಸ್ಟ್ರೇಲಿಯಾದ ವಿವಿಧ ಕಡೆಯಿರುವ ಭಾರತ ಮೂಲದ ನಿವಾಸಿಗಳು ಸಿಡ್ನಿಗೆ ಬರುವುದಕ್ಕಾಗಿ ಮೋದಿ ಎಕ್ಸ್ ಪ್ರೆಸ್ ಎನ್ನುವ ವಿಶೇಷ ವಿಮಾನವನ್ನೂ ಇದೇ ತಂಡ ಆಯೋಜನೆ ಮಾಡಿದೆ.
ಐಟಿ ಕ್ಷೇತ್ರದಲ್ಲಿ ವೃತ್ತಿಪರೆ ಆಗಿರುವ ಪಲ್ಲವಿ ಭಾಗವತ್ ಸಿಡ್ನಿಯಲ್ಲಿ ನಾಟ್ಯೋಕ್ತಿ ಡ್ಯಾನ್ಸ್ ಸ್ಕೂಲ್ ಎನ್ನುವ ನೃತ್ಯ ತರಬೇತಿ ಸಂಸ್ಥೆಯನ್ನು ಹೊಂದಿದ್ದು, ಪ್ರಧಾನಿ ಮೋದಿ ಎದುರಲ್ಲಿ ತನ್ನ ಶಿಷ್ಯವೃಂದದಿಂದ ಕರ್ನಾಟಕ ಮತ್ತು ಕರಾವಳಿಯ ವಿಶೇಷ ನೃತ್ಯ ಪ್ರಕಾರಗಳನ್ನು ಪ್ರದರ್ಶನ ಮಾಡಲಿದ್ದಾರೆ. ಕಾಂತಾರ ಸಿನಿಮಾದ ‘’ವರಾಹರೂಪಂ’’ ಹಾಡು, ಜನಪದ ಹಿನ್ನೆಲೆಯ ತುಳು ಆಲ್ಬಂ ಸಾಂಗ್ ‘’ವಾ ಪೊರ್ಲುಯಾ’’ ಸೇರಿದಂತೆ ಕರ್ನಾಟಕದ ನಾಟ್ಯ, ಯಕ್ಷಗಾನ, ಜನಪದ ಪರಂಪರೆಯನ್ನು ವಿದೇಶದ ನಾಡಿನಲ್ಲಿ ತೆರೆದಿಡಲಿದ್ದಾರೆ. ಮಂಗಳೂರು ಮೂಲದ ಪಲ್ಲವಿ ಭಾಗವತ್ ಬೆಂಗಳೂರಿನ ಬಳಿಕ ವೃತ್ತಿಯ ಕಾರಣಕ್ಕೆ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಪಲ್ಲವಿ ತನ್ನ ತಂಡದಲ್ಲಿ ಮಂಗಳೂರು, ಉಡುಪಿ, ನೇಪಾಳ ಸೇರಿದಂತೆ ಭಾರತದ ವಿವಿಧ ಕಡೆಯ ನೃತ್ಯ ಕಲಾವಿದರನ್ನು ಹೊಂದಿದ್ದಾರೆ.
ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬಾನೀಸ್ ದ್ವೀಪಕ್ಷೀಯ ಮಾತುಕತೆ ನಡೆಸಲಿದ್ದು, ಆನಂತರ ಭಾರತೀಯ ನಿವಾಸಿಗಳೊಂದಿಗೆ ಕಾರ್ಯಕ್ರಮ ಏರ್ಪಾಡಾಗಿದೆ. ನೃತ್ಯ ಪ್ರದರ್ಶನ ನೀಡಲಿರುವ ತಂಡದಲ್ಲಿ ವಿದುಷಿ ಪಲ್ಲವಿ ಭಾಗವತ್ ಜೊತೆಗೆ ಅಶ್ವಿಕಾ ರಾವ್, ಅರುಷಿ ಬಾಡ್ಲೆ, ಮೇನುಕಾ ಪ್ರಧಾನ್, ರಿಯಾ ಶ್ರೀಕಾಂತ್, ಅನುಶ್ರೀ ಉಷಾರಾಜನ್, ಅನಿಷಾ ಪೂಜಾರಿ, ನಯನಾ ಶ್ರೀಧರ್ ಆತ್ರೇಯ, ಅನಿತಾ ರೀಲಿ, ಅಭಿಜಿತ್ ಭುವನೇಂದ್ರನ್ ನಾಯರ್, ವಾದಿರಾಜ್ ರಾವ್, ಗೌತಮ್ ಇರಲಿದ್ದಾರೆ.
ಪಲ್ಲವಿ ಭಾಗವತ್ ಅವರು ಈ ಹಿಂದೆ ನಾಟ್ಯನಿಲಯಂ ಮಂಜೇಶ್ವರ್ ಮತ್ತು ಕರ್ನಾಟಕ ಕಲಾವಿದುಷಿ ಕಮಲಾ ಭಟ್ ಅವರಿಂದ ಭರತನಾಟ್ಯ ಕಲಿತು ವಿದ್ವತ್ ಪೂರೈಸಿದ್ದು, ಐಟಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಈ ವೇಳೆ, ಸಿಡ್ನಿಯಲ್ಲಿ ತನ್ನ ವೃತ್ತಿಯ ಜೊತೆಗೆ ತನ್ನದೇ ಆದ ನಾಟ್ಯ ತಂಡವನ್ನೂ ಕಟ್ಟಿಕೊಂಡಿದ್ದಾರೆ. ಮಂಗಳೂರಿನ ಬಿಜೈ ಕಾಪಿಕಾಡ್ ಮೂಲದ ಅನಿಶಾ ಪೂಜಾರಿ ಅವರೂ ಇದೇ ನಾಟ್ಯೋಕ್ತಿ ತಂಡದಲ್ಲಿದ್ದು, ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಅನಿಷಾ ಕೂಡ ಕಳೆದ ಆರು ವರ್ಷಗಳಿಂದ ಸಿಡ್ನಿಯಲ್ಲಿ ನೆಲೆಸಿದ್ದಾರೆ.
Narendra Modi in Australia, Kantara Varaha Roopam song dance to be presented by Mangalorean team under the leadership of pallavi bhagwat. The public events speak to Narendra Modi’s popularity among supporters - the adoring crowds waving banners, the car convoys and privately chartered “ModiAirways” flights for those who will travel thousands of kilometres to hear him speak.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
06-07-25 03:53 pm
HK News Desk
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
06-07-25 10:52 pm
HK News Desk
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm
Puttur News, Girl Pregnant, Father Arrest: ಸಹ...
05-07-25 09:06 pm