ಬ್ರೇಕಿಂಗ್ ನ್ಯೂಸ್
22-05-23 12:43 pm Mangalore Correspondent ಕರಾವಳಿ
ಮಂಗಳೂರು, ಮೇ 22: ನಗರದ ಅಥೆನಾ ನರ್ಸಿಂಗ್ ಕಾಲೇಜಿನ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಸ್ಟೆಲಿನಲ್ಲಿ ಫುಡ್ ಪಾಯ್ಸನ್ ಉಂಟಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ನಿನ್ನೆ ರಾತ್ರಿ ದಿಢೀರ್ ಅಸ್ವಸ್ಥರಾಗಿದ್ದು ಅವರನ್ನು ಕೂಡಲೇ ಫಳ್ನೀರಿನ ಅಥೆನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೆಚ್ಚಿನವರು ಕೇರಳದ ವಿದ್ಯಾರ್ಥಿನಿಯರಾಗಿದ್ದು, ಹಾಸ್ಟೆಲಿನಲ್ಲಿ ನೀರಿನ ಸಮಸ್ಯೆಯಿಂದಾಗಿ ಆಹಾರದಲ್ಲಿ ತೊಂದರೆ ಆಗಿದೆ ಎನ್ನಲಾಗುತ್ತಿದೆ. ಎರಡು ತಿಂಗಳಲ್ಲಿ ಇದು ಎರಡನೇ ಬಾರಿಗೆ ಈ ರೀತಿ ಆಗಿದೆ ಎನ್ನುವ ಮಾಹಿತಿ ವಿದ್ಯಾರ್ಥಿನಿಯರ ಹೆತ್ತವರ ಕಡೆಯಿಂದ ಬಂದಿದೆ. ಕೆಲವು ವಿದ್ಯಾರ್ಥಿನಿಯರಿಗೆ ವಾಂತಿ ಮತ್ತು ಭೇದಿ ಉಂಟಾಗಿದ್ದು, ಹೊಟ್ಟೆ ನೋವಿನಿಂದ ಬಳಲಿದ್ದಾರೆ. ರಾತ್ರಿ ವೇಳೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಬೆಳಗ್ಗಿನ ಹೊತ್ತಿಗೆ ಮರಳಿ ಹಾಸ್ಟೆಲ್ ಗೆ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರಶ್ನೆ ಮಾಡಿದ ವಿದ್ಯಾರ್ಥಿನಿಯರ ಹೆತ್ತವರಿಗೆ ನೀವು ಮನೆಗೆ ಕರೆದುಕೊಂಡು ಹೋಗಿ ಎಂದು ಕಾಲೇಜಿನ ಆಡಳಿತ ಹೇಳಿದೆಯಂತೆ. ರಾತ್ರಿಯೇ ವಿಷಯ ತಿಳಿದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಜೇಶ್ ಬಳಿ ಕೇಳಿದಾಗ, 16 ಮಂದಿ ವಿದ್ಯಾರ್ಥಿನಿಯರಿಗೆ ಸಮಸ್ಯೆ ಆಗಿತ್ತು. ಸ್ವಲ್ಪ ಮಟ್ಟಿಗೆ ವಾಂತಿ, ಭೇದಿ ಲಕ್ಷಣಗಳಿದ್ದವು. ಆತಂಕ ಪಡುವ ಅಗತ್ಯವಿಲ್ಲ. ಆಹಾರ ಸುರಕ್ಷತಾ ಅಧಿಕಾರಿಗಳು ಹಾಸ್ಟೆಲ್ ನಿಂದ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಒಯ್ದಿದ್ದಾರೆ. ಈಗ ಯಾರೂ ಅಡ್ಮಿಶನ್ ಇಲ್ಲ ಎಂದು ಹೇಳಿದ್ದಾರೆ.
ನೀರಿನಿಂದ ಸಮಸ್ಯೆ ಆಗಿದೆಯೇ ಎನ್ನುವ ಪ್ರಶ್ನೆಗೆ, ಯಾವ ಕಾರಣಕ್ಕೆ ಸಮಸ್ಯೆ ಆಗಿದೆ ಎನ್ನುವುದು ತಿಳಿದುಬಂದಿಲ್ಲ. ಪರಿಶೀಲನೆ ಮಾಡುತ್ತ ಇದ್ದೇವೆ. ನಾವು ಜಿಲ್ಲಾ ಘಟಕದಿಂದ ಎಲ್ಲ ಹಾಸ್ಟೆಲ್ ಗಳಿಗೂ ರುಟೀನ್ ಭೇಟಿ ಕೊಡುತ್ತೇವೆ. ತಪಾಸಣೆ ನಡೆಸುತ್ತೇವೆ ಎಂದಿದ್ದಾರೆ. ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಇಂಥ ಸಮಸ್ಯೆ ಆಗಿದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ. ಇತ್ತೀಚೆಗೆ ಶಕ್ತಿನಗರದ ಹೀರಾ ನರ್ಸಿಂಗ್ ಕಾಲೇಜಿನಲ್ಲಿ ಇದೇ ರೀತಿ ಸಮಸ್ಯೆ ಆಗಿತ್ತು. ಕೇರಳದ ವಿದ್ಯಾರ್ಥಿನಿಯರು ಫುಡ್ ಪಾಯ್ಸನ್ ಸಮಸ್ಯೆಯಿಂದ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ, ಕಾಲೇಜಿಗೆ ಹತ್ತು ದಿನಗಳ ಕಾಲ ರಜೆ ಕೊಟ್ಟು ಎಲ್ಲ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿಕೊಡಲಾಗಿತ್ತು.
Food poisoning to 30 nursing students of Athena College who were leaving at college hostel at Falnir in Mangalore, students have said to be hospitalised and discharged. Health department takes action against college authorities. This incident is said to be repeated since three months at the college hostel it is alleged.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm