ಬ್ರೇಕಿಂಗ್ ನ್ಯೂಸ್
21-05-23 08:41 pm Mangalore Correspondent ಕರಾವಳಿ
ಮಂಗಳೂರು, ಮೇ 21 : ಮಂಗಳೂರು ಮೂಲದ 21 ವರ್ಷದ ಮುಸ್ಲಿಂ ಯುವತಿಯೊಬ್ಬಳು ವಿಮಾನ ಚಲಾಯಿಸುವ ಪೈಲಟ್ ಹುದ್ದೆಗೇರಿ ಹುಬ್ಬೇರಿಸಿದ್ದಾಳೆ. ಪಾಂಡೇಶ್ವರ ನಿವಾಸಿ ಹನಿಯಾ ಹನೀಫ್ ಈ ಸಾಧನೆ ಮಾಡಿದ ಯುವತಿ.
ಪಾಂಡೇಶ್ವರದ ಮಹಮ್ಮದ್ ಹನೀಫ್ ಮತ್ತು ನಜಿಯಾ ದಂಪತಿ ಪುತ್ರಿಯಾಗಿರುವ ಹನಿಯಾ ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆದಿದ್ದಾರೆ. ಹನಿಯಾ ಸಣ್ಣದಿರುವಾಗ ದುಬೈನಲ್ಲಿದ್ದು ಒಂಬತ್ತನೇ ಕ್ಲಾಸ್ ವರೆಗೆ ಅಲ್ಲಿನ ಇಂಡಿಯನ್ ಹೈಸ್ಕೂಲ್ ನಲ್ಲಿ ಶಿಕ್ಷಣ ಪಡೆದಿದ್ದಳು. ಎಸ್ಸೆಸ್ಸೆಲ್ಸಿ ಶಿಕ್ಷಣವನ್ನು ಮಂಗಳೂರಿನ ಬಿಜೈನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನಲ್ಲಿ ಪೂರೈಸಿದ್ದಳು. ಆನಂತರ, ಮಹೇಶ್ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರೈಸಿದ್ದಳು.
ಸಣ್ಣವಳಿದ್ದಾಗಿನಿಂದಲು ದುಬೈಗೆ ವಿಮಾನದಲ್ಲಿ ಹೋಗಿ ಬರುತ್ತಿದ್ದರಿಂದ ತಾನೂ ವಿಮಾನ ಚಲಾಯಿಸಬೇಕು, ಪೈಲಟ್ ಆಗಬೇಕೆಂಬ ಕನಸು ಕಂಡಿದ್ದಳು. ಹನಿಯಾಳ ಬಯಕೆಗೆ ಹೆತ್ತವರು ಸ್ಪಂದಿಸಿದ್ದು ಪೈಲಟ್ ಕಲಿಯುವುದಕ್ಕಾಗಿ ಮೈಸೂರಿನ ಓರಿಯಂಟ್ ಫ್ಲೈಟ್ ಏವಿಯೇಶನ್ ಅಕಾಡೆಮಿಗೆ ಸೇರಿಸಿದ್ದರು. ಪಿಯುಸಿ ಬಳಿಕ ಅಲ್ಲಿ ಮೂರೂವರೆ ವರ್ಷಗಳ ಕಾಲ ಪೈಲಟ್ ತರಬೇತಿ ಪಡೆದಿದ್ದು, ಇತ್ತೀಚೆಗೆ ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆದಿದ್ದಾರೆ. ಸಣ್ಣ ವಯಸ್ಸಿನಲ್ಲೇ 200 ಗಂಟೆಗಳ ವಿಮಾನ ಚಾಲನೆ ಮಾಡಿ, ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ಯಾಪ್ಟನ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.
ಸಣ್ಣದಿರುವಾಗಲೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದುದರಿಂದ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದೆ. ಪೈಲಟ್ ಆಗುವುದು ನನಗೆ ಸುಲಭದ ದಾರಿಯಾಗಿರಲಿಲ್ಲ. ಮಹಿಳೆಯರನ್ನು ಈ ವೃತ್ತಿಗೆ ಇಳಿಸಲು ಸಾಮಾನ್ಯವಾಗಿ ಹೆತ್ತವರು ಬಿಡುವುದಿಲ್ಲ. ಆದರೆ ನನಗೆ ಹೆತ್ತವರೇ ಪ್ರೋತ್ಸಾಹಿಸಿ, ಅವಕಾಶ ಕೊಟ್ಟರು. ಆಮೂಲಕ ಕಮರ್ಶಿಯಲ್ ಪೈಲಟ್ ಆಗುವಂತಾಯಿತು ಎಂದು ಹನಿಯಾ ಹನೀಫ್ ಹೇಳುತ್ತಾರೆ. ಆಕೆಯ ತಾಯಿ ನಜಿಯಾ ಕೂಡ ಮಗಳು ಪೈಲಟ್ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸಣ್ಣ ಹುಡುಗಿಯಾಗಿದ್ದಾಗಲೇ ಪೈಲಟ್ ಆಗುತ್ತೇನೆಂದು ಹೇಳಿಕೊಂಡಿದ್ದಳು. ಆಕೆಯ ಕನಸು ಈಡೇರಿಸಲು ನಾವು ಬೆಂಬಲ ನೀಡಿದ್ದೆವು. ಈಗ ಮಗಳು ವಿಮಾನ ಚಲಾಯಿಸುವುದನ್ನು ನೋಡಿ ತುಂಬ ಸಂತಸವಾಗಿದೆ ಎಂದು ಹೇಳಿದ್ದಾರೆ.
Haniya Haneef, a resident of Pandeshwar in the city, has brought immense pride to the coastal district by becoming a pilot at the age of 21. Haniya Haneef, the daughter of Mohammed Hanif and Naziya, residents of Pandeshwar, has obtained an authorized commercial pilot license.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
30-09-26 10:49 am
HK News Staffer
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
ಸೌಜನ್ಯಾ ಮರು ತನಿಖೆಯೂ, ತಮಿಳುನಾಡಿನಲ್ಲಿ ಗ್ರಾನೈಟ್...
26-09-26 07:01 pm
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
30-09-26 05:33 pm
Mangaluru Staffer
Mangalore Kumpala Accident: ಕುಂಪಲ ; ರಸ್ತೆ ದಾಟ...
30-09-26 03:37 pm
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ಭೀ...
30-09-26 02:20 pm
Mrpl Fire, Mangalore: ಎಂಆರ್ ಪಿಎಲ್ ತೈಲ ಸ್ಥಾವರದ...
30-09-26 12:59 pm
ಮಂಗಳೂರಿನಲ್ಲಿ ಒಳಚರಂಡಿ ಕಾಮಗಾರಿ ; 20 ವರ್ಷಗಳ ಹಿಂದ...
29-09-26 01:25 pm
30-09-26 08:17 pm
HK News Staffer
ಉಡುಪಿಯಲ್ಲಿ ಹೆಲ್ಮೆಟ್ ಧರಿಸಿ ದುರ್ಗಾಂಬ ಬಸ್ ಕಳವು ;...
30-09-26 10:33 am
Udupi Body found, Accused: ಕೊಲೆ ಯತ್ನ ಪ್ರಕರಣದ...
30-09-26 10:04 am
ಮಾಂಸದ ಅಂಗಡಿಯಲ್ಲೇ ಡ್ರಗ್ಸ್ ದಂಧೆ ; ಇಬ್ಬರು ಯುವಕರು...
30-09-26 10:03 am
ಸ್ವರ್ಣಾ ನದಿಯಲ್ಲಿ ದುರಂತ ; ಹಿರ್ಗಾನ ಬಳಿ ಈಜಲು ತೆರ...
29-09-26 09:26 pm