ಬ್ರೇಕಿಂಗ್ ನ್ಯೂಸ್
19-05-23 12:21 pm Mangalore Correspondent ಕರಾವಳಿ
ಮಂಗಳೂರು, ಮೇ 19 : ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹೊಡೆಸಿದ್ದಕ್ಕೆ ನಳಿನ್ ಕುಮಾರ್ ಮತ್ತು ಕಲ್ಲಡ್ಕ ಭಟ್ಟರು ಕಾರಣ. ಲೋಕಸಭೆ ಸದಸ್ಯನಾಗಿ ಕಾರ್ಯಕರ್ತರನ್ನು ಪೊಲೀಸರಿಗೆ ಹೇಳಿ ಹೊಡೆಸಿದ್ದಾರಂದ್ರೆ ಏನರ್ಥ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಿನ್ನೆ ಕಲ್ಲಡ್ಕ ಭಟ್ಟರು ಕಾರ್ಯಕರ್ತರಿಗೆ ಹೊಡೆಸಿದ್ದು ಕಾಂಗ್ರೆಸ್ ಸರ್ಕಾರ ಕಾರಣ ಎಂದಿದ್ದಾರೆ. ನಮ್ಮ ಮುಖ್ಯಮಂತ್ರಿ ಇನ್ನಷ್ಟೇ ಪ್ರಮಾಣ ವಚನ ಸ್ವೀಕರಿಸಬೇಕು. ಕಾಂಗ್ರೆಸ್ ಸರಕಾರ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಈಗ ಉಸ್ತುವಾರಿ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರೇ ಇದ್ದಾರೆ. ಆದರೆ ಭಟ್ಟರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ್ದಾರೆ. ಸಂಸದ ನಳಿನ್ ಕುಮಾರ್ ಮತ್ತು ಕಲ್ಲಡ್ಕ ಭಟ್ಟರು ಇನ್ಫ್ಲುಯೆನ್ಸ್ ಮಾಡಿ ಪೊಲೀಸರ ಮೂಲಕ ಹೊಡೆಸಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ. ಸಾಯುವ ಹಾಗೆ ಹೊಡೆಸಿದ್ದಾರಂದ್ರೆ ಇವರಿಗೆ ಮಾನವೀಯತೆ ಇದೆಯೇ ಎಂದು ಅಭಯಚಂದ್ರ ಜೈನ್ ಪ್ರಶ್ನೆ ಮಾಡಿದ್ದಾರೆ.

ಎರಡು ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿನ ಕುರಿತ ಪ್ರಶ್ನೆಗೆ, ಪಕ್ಷದಲ್ಲಿ ಬಲಿಷ್ಠ ನಾಯಕತ್ವದ ಕೊರತೆ ಇದೆ. ಜೊತೆಗೆ, ಬಿಜೆಪಿಯವರು ದೇವರ ಹೆಸರಿನಲ್ಲಿ ರಾಜಕೀಯ ಮಾಡಿದ್ದಾರೆ. ಜನ ತಾತ್ಕಾಲಿಕ ಮರುಳಾಗಿರಬಹುದು. ಹಿಂದೆ 1985ರಲ್ಲಿ ಬಿಜೆಪಿಗೆ ಎರಡೇ ಸ್ಥಾನ ಇದ್ದಿದ್ದು. ಅಂತಹದ್ದೇ ಸ್ಥಿತಿಗೆ ಬಿಜೆಪಿ ಹೋಗಲಿದೆ. ಕೋಮು ಭಾವನೆಯನ್ನು ಕೆರಳಿಸುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಜನ ಮತ ನೀಡಿದ್ದಾರೆ. ಒಳ್ಳೆಯ ಸರ್ಕಾರ ಬರಲಿದೆ, ಒಳ್ಳೆಯ ಆಡಳಿತ ನೀಡಲಿದ್ದಾರೆಂಬ ವಿಶ್ವಾಸ ಇದೆ. ಬಿಜೆಪಿಯವರು ಅಧಿಕಾರ ಸಿಕ್ಕಾಗ ಕಾಂಗ್ರೆಸ್ ಮುಕ್ತ ಎಂದು ಹೇಳಿಕೆ ನೀಡಿದ್ದರು. ಈಗ ಜನ ಯಾರು ಮುಕ್ತ ಆಗಬೇಕೆಂದು ತೋರಿಸಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಕೆ ಹರಿಪ್ರಸಾದ್ ಅವರನ್ನು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮಾಡಬೇಕು. ಗೃಹ ಸಚಿವ ಸ್ಥಾನ ಕೊಟ್ಟರೆ ದಿಟ್ಟವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಛಲದಂಕ ಮಲ್ಲ, ಪ್ರಬಲ ವ್ಯಕ್ತಿಯನ್ನು ಸಚಿವ ಸ್ಥಾನಕ್ಕೇರಿಸಬೇಕು. ಜಿಲ್ಲೆಯ ಅಭಿವೃದ್ಧಿಗಾಗಿ ಗಡುಸಾದ ವ್ಯಕ್ತಿ ಆಡಳಿತಕ್ಕೆ ಬರಬೇಕು. ಇಂದಿರಾ ಗಾಂಧಿ, ರಾಜೀವ ಗಾಂಧಿ ಒಡನಾಟ ಇದ್ದವರು ಹರಿಪ್ರಸಾದ್. ದಿಟ್ಟ ವ್ಯಕ್ತಿತ್ವದವರು, ಆಡಳಿತದಲ್ಲಿ ಅನುಭವ ಇದ್ದವರು ಉಸ್ತುವಾರಿ ಸಚಿವ ಸ್ಥಾನಕ್ಕೇರಿದರೆ ಸಾಮರಸ್ಯ ಸಾಧ್ಯ ಎಂದು ಅಭಯಚಂದ್ರ ಜೈನ್ ಹೇಳಿದರು.

ಹಿಂದೆ ಜನಾರ್ದನ ಪೂಜಾರಿ, ಆಸ್ಕರ್, ಮೊಯ್ಲಿಯಂಥವರು ಎಂಆರ್ ಪಿಎಲ್ ತಂದು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಈಗ ಉತ್ತರ ಭಾರತೀಯರಿಗೆ ಉದ್ಯೋಗ ಹೋಗುವ ಸ್ಥಿತಿಯಿದೆ. ಇದನ್ನು ಪ್ರಶ್ನೆ ಮಾಡಬೇಕಿದ್ದರೆ ಸಮರ್ಥ ನಾಯಕ ಸಚಿವ ಸ್ಥಾನಕ್ಕೇರಬೇಕು. ಏರ್ಪೋರ್ಟ್ ಅಂತಾರಾಷ್ಟ್ರೀಯ ಮಟ್ಟಕ್ಕೇರಿದಾಗ, ವಿಸ್ತರಣೆಗೆ ಭೂಸ್ವಾಧೀನ ಮಾಡಿಕೊಟ್ಟಿದ್ದು ರಮಾನಾಥ ರೈಗಳು. ಎಸ್ಸಿ- ಎಸ್ಟಿ ಜನರನ್ನು ಮನವೊಲಿಸಿ ರಾತ್ರಿ ಹಗಲು ರಮಾನಾಥ ರೈ ಕೆಲಸ ಮಾಡಿದ್ದಾರೆ. ಬಿಜೆಪಿಯವರು ಈ ಜಿಲ್ಲೆಯ ಅಭಿವೃದ್ಧಿಗೆ ಏನಾದರೂ ಕೊಡುಗೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
Bjp banner issue, police Autrocity on Hindu Karyakartas, Nalin Kateel has ordered police for third degree torture, slams Abhayachandra Jain in Mangalore.
30-12-25 11:12 pm
HK News Desk
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
ಕೇರಳದಲ್ಲಿ ಚುನಾವಣೆಯಾದ್ರೆ ಪಿಣರಾಯಿಗೆ ಕರ್ನಾಟಕದಲ್ಲ...
30-12-25 05:10 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
31-12-25 11:47 am
Mangalore Correspondent
ಹೊಸ ವರ್ಷಾಚರಣೆ ; ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ...
30-12-25 10:43 pm
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm