ಸುರತ್ಕಲ್ ; ಕಾಲಿಗೆ ಸಿಲುಕಿದ ಬಲೆ, ಮೀನುಗಾರ ಸಮುದ್ರದಲ್ಲಿ ಮುಳುಗಿ ಸಾವು 

17-05-23 12:10 pm       Mangalore Correspondent   ಕರಾವಳಿ

ಬಲೆ ಹಾಕುತ್ತಿದ್ದ ಮೀನುಗಾರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಸುರತ್ಕಲ್ ನಲ್ಲಿ  ನಡೆದಿದೆ.

ಮಂಗಳೂರು, ಮೇ 16: ಬಲೆ ಹಾಕುತ್ತಿದ್ದ ಮೀನುಗಾರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಸುರತ್ಕಲ್ ನಲ್ಲಿ  ನಡೆದಿದೆ.

ಜಯರಾಜ್ (46 ವರ್ಷ)ಮೃತ ಮೀನುಗಾರ. ಮಂಗಳವಾರ ಮುಸ್ಸಂಜೆ ಈ ಘಟನೆ ನಡೆದಿದೆ. ಹಾಕಿದ ಬಲೆ ಕಾಲಿಗೆ ಸಿಲುಕಿದ್ದಲ್ಲದೆ, ಬೃಹತ್ ತೆರೆಯೂ ಅಪ್ಪಳಿಸಿ ಮುಳುಗಿದರು ಎನ್ನಲಾಗಿದೆ.

ಸಹ ಮೀನುಗಾರ ತಕ್ಷಣ ಸ್ಥಳೀಯರಿಗೆ ತಿಳಿಸಿದ್ದು, ಸಹಾಯಕ್ಕೆ ಧಾವಿಸಿದ ಸ್ಥಳೀಯರು, ಜಯರಾಜ್ ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ,ಮಗಳನ್ನು ಅಗಲಿದ್ದಾರೆ.

Surathkal Fishermen killed after drowning in the sea after fish set stcuks to his leg in Mangalore. The deceased has been identified as Jayaraj (46).