ಪುತ್ತಿಲ ವಿರುದ್ಧ ಬೆಟ್ಟಿಂಗ್ ಕಟ್ಟಿ ಕೋಟ್ಯಂತರ ರೂ. ಹಣ ಕಳಕೊಂಡ ಪುತ್ತೂರಿನ ಬಿಜೆಪಿ ಪುಢಾರಿಗಳು !  

16-05-23 09:51 pm       Mangalore Correspondent   ಕರಾವಳಿ

ಪುತ್ತೂರಿನಲ್ಲಿ ಈ ಬಾರಿ ಚುನಾವಣೆ ಹೆಸರಲ್ಲಿ ಭಾರೀ ಮೊತ್ತದ ಬೆಟ್ಟಿಂಗ್ ನಡೆದಿತ್ತು. ಬಂಡಾಯ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ವಿರುದ್ಧ ಬಿಜೆಪಿ ಪುಢಾರಿಗಳು, ಕಾರ್ಯಕರ್ತರು ಸೇರಿದಂತೆ ಪುತ್ತೂರಿನಲ್ಲಿ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆದಿದ್ದು, ಹಣ ಕಳೆದುಕೊಂಡವರು ಪೆಚ್ಚು ಮೋರೆ ಹಾಕ್ಕೊಂಡು ತಿರುಗಾಡುವ ಸ್ಥಿತಿ ಎದುರಾಗಿದೆ.

ಪುತ್ತೂರು, ಮೇ 16: ಪುತ್ತೂರಿನಲ್ಲಿ ಈ ಬಾರಿ ಚುನಾವಣೆ ಹೆಸರಲ್ಲಿ ಭಾರೀ ಮೊತ್ತದ ಬೆಟ್ಟಿಂಗ್ ನಡೆದಿತ್ತು. ಬಂಡಾಯ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ವಿರುದ್ಧ ಬಿಜೆಪಿ ಪುಢಾರಿಗಳು, ಕಾರ್ಯಕರ್ತರು ಸೇರಿದಂತೆ ಪುತ್ತೂರಿನಲ್ಲಿ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆದಿದ್ದು, ಹಣ ಕಳೆದುಕೊಂಡವರು ಪೆಚ್ಚು ಮೋರೆ ಹಾಕ್ಕೊಂಡು ತಿರುಗಾಡುವ ಸ್ಥಿತಿ ಎದುರಾಗಿದೆ.

ಸ್ಥಳೀಯ ಮೂಲದ ಪ್ರಕಾರ, ಬಿಜೆಪಿ 3ನೇ ಸ್ಥಾನಕ್ಕೆ ಹೋಗಲಿದೆ ಎಂದು ಅರುಣ್ ಪುತ್ತಿಲ ಪರ ಇದ್ದವರು ಬೆಟ್ಟಿಂಗ್ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ 3ನೇ ಸ್ಥಾನಕ್ಕೆ ಹೋಗಲ್ಲ ಎಂದು ಬಿಜೆಪಿ ಅಭ್ಯರ್ಥಿ ಪರ ನಿಷ್ಠೆ ಇದ್ದವರು ಬೆಟ್ಟಿಂಗ್ ಕಟ್ಟಿದ್ದಾರೆ. ಡಿಸಿಸಿ ಬ್ಯಾಂಕಿನ ಪ್ರಮುಖ ಹುದ್ದೆಯಲ್ಲಿರುವ ಒಬ್ಬರು ಏಳು ಕೋಟಿ ರೂ. ಬೆಟ್ ಕಟ್ಟಿದ್ದು, ಹಣ ಕಳಕೊಂಡಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಇನ್ನೊಬ್ಬರು ತಾಲೂಕು ಬಿಜೆಪಿ ಪದಾಧಿಕಾರಿಯೊಬ್ಬರು ತನ್ನ ಹೆಂಡ್ತಿ, ಮಗುವಿನ ಬಂಗಾರ ಅಡವಿಟ್ಟು 50 ಲಕ್ಷ ರೂಪಾಯಿ ಹಣ ಬೆಟ್ಟಿಂಗಲ್ಲಿ ಸುರಿದಿದ್ದು, ಅದನ್ನು ಕಳಕೊಂಡಿದ್ದಾರಂತೆ. ಮತ್ತೊಬ್ಬರು ಪೆಟ್ರೋಲ್ ಪಂಪ್ ಮಾಡಲು ತೆಗೆದಿಟ್ಟಿದ್ದ 2.5 ಕೋಟಿ ರೂ. ಹಣವನ್ನ ಬೆಟ್ಟಿಂಗ್ ಕಟ್ಟಿ ಕಳಕೊಂಡಿದ್ದಾರೆ. ಏನಿಲ್ಲ ಅಂದ್ರೂ, ಸುಮಾರು 75 ಕೋಟಿ ರೂಪಾಯಿ ಮೊತ್ತವನ್ನು ಪುತ್ತೂರಿನ ಬಿಜೆಪಿ ಪುಢಾರಿಗಳು ಬೆಟ್ಟಿಂಗಲ್ಲಿ ಕಳಕೊಂಡಿದ್ದಾರೆ ಎನ್ನಲಾಗುತ್ತಿದೆ.

BJP offered Puttur on a platter to Congress by denying ticket to Arun Kumar  Puthila - The Hindu

ಚುನಾವಣೆಗೆ ಎರಡು ದಿನ ಇರುವಾಗಲೇ ಬೆಟ್ಟಿಂಗ್ ನಡೆದಿತ್ತು. ಮತ ಎಣಿಕೆ ನಡೆಯುವ ಮುನ್ನಾದಿನ ಈ ಬೆಟ್ಟಿಂಗ್ ಭರಾಟೆ ಜೋರು ನಡೆದಿತ್ತು. ಬಿಜೆಪಿಯವರು ಅತಿ ಆತ್ಮವಿಶ್ವಾಸದಿಂದ ಅರುಣ್ ಪುತ್ತಿಲ ಪರವಾಗಿ 15 ಸಾವಿರಕ್ಕಿಂತ ಹೆಚ್ಚು ಮತ ಬೀಳಲ್ಲ ಎಂದು ಬೆಟ್ ಕಟ್ಟಿದ್ದರು. ಆದರೆ ಪುತ್ತಿಲ ಪರ ಇದ್ದವರು ಕಡಿಮೆ ರೇಟಲ್ಲಿ ಜೂಜಿನ ಸವಾಲು ಪಡೆದು ದೊಡ್ಡ ಮೊತ್ತದ ಹಣ ಪಡೆದಿದ್ದಾರೆ. ಪುತ್ತೂರಿನ ಕೆಲವು ಸಾಮಾನ್ಯ ಅಂಗಡಿ ವ್ಯಾಪಾರಸ್ಥರು, ತೆಂಗಿನಕಾಯಿ ವ್ಯಾಪಾರಿಗಳು ಈ ಬೆಟ್ಟಿಂಗಲ್ಲಿ ಹಣ ಮಾಡಿದ್ದಾರೆ. ಹಣ ಕಳಕೊಂಡವರ ಮುಖ ಕಪ್ಪಡರಿದ್ದು, ತೀವ್ರ ಚಿಂತೆಗೆ ಒಳಗಾಗಿದ್ದಾರೆ.

A Look at the BJP's Tainted History: Several Members Face Allegations of  Sexual Offences | NewsClick

ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಗೆ ಅತಿಯಾದ ಆತ್ಮವಿಶ್ವಾಸ ಇತ್ತು. ಪಕ್ಷೇತರ ಸ್ಪರ್ಧಿಸಿ ಎಷ್ಟು ಮತ ಗಳಿಕೆ ಮಾಡಬಹುದು ಎನ್ನುವ ಪ್ರಶ್ನೆಗಳಿದ್ದವು. ಆತನಿಗೆ ಬೂತಲ್ಲಿ ಕುಳಿತುಕೊಳ್ಳಲು ಏಜಂಟರು ಸಿಗಬಹುದೇ ಎನ್ನುವ ಪ್ರಶ್ನೆ ಹೊಂದಿದ್ದರು. ಆದರೆ ಪುತ್ತಿಲ ಪರ ಕಾರ್ಯಕರ್ತರು ಚುನಾವಣೆ ಪೂರ್ತಿ ಫೀಲ್ಡಿಗಿಳಿದು ಕೆಲಸ ಮಾಡಿದ್ದಲ್ಲದೆ, ಬಿಜೆಪಿಗೇ ಕೆಲವು ಬೂತ್ ಗಳಲ್ಲಿ ಜನ ಇಲ್ಲದ ಸ್ಥಿತಿ ಉಂಟಾಗಿತ್ತು. ಅಲ್ಲದೆ, ಇವರು ನಡೆಸಿದ ಆಂತರಿಕ ಸಮೀಕ್ಷೆಯಲ್ಲೂ ಬೂತ್ ಮಟ್ಟದಲ್ಲಿ ಬಿಜೆಪಿಗೇ ಹೆಚ್ಚು ಮತ, ಅರುಣ್ ಪುತ್ತಿಲ ಪರವಾಗಿ ಮತ ಬೀಳಲ್ಲ ಎಂದು ಬೂತ್ ಪ್ರಮುಖರು ವರದಿ ಕೊಟ್ಟಿದ್ದರು. ಪ್ರತಿ ಗ್ರಾಮದಲ್ಲಿ ಪುತ್ತಿಲ ಪರವಾಗಿಯೇ ಜನಮತ ಇದ್ದರೂ, ಅದನ್ನು ಬೂತ್ ಪ್ರಮುಖರು ಮೇಲಿನವರಿಗೆ ತಲುಪಿಸಲು ವಿಫಲರಾಗಿದ್ದರು. ಕೊನೆಗೆ, ಬಿಜೆಪಿ ಮಂದಿ ಪುತ್ತಿಲ ಯಾವುದೇ ಕಾರಣಕ್ಕೂ ಗೆಲ್ಲಬಾರದು ಎಂದು ತಂತ್ರ ಹೂಡಿದ್ದರು. ಬೆಟ್ಟಿಂಗ್ ಮೂಲಕ ಪುತ್ತಿಲ ಪರ ಇದ್ದವರನ್ನು ಮಾನಸಿಕವಾಗಿ ಕುಗ್ಗಿಸುವ ಯತ್ನ ನಡೆದಿತ್ತು. ಕೆಲವರು ಪಾರ್ಟಿ ಫಂಡ್ ಆಗಿ ಬಂದಿದ್ದ ಹಣವನ್ನೂ ಪಣಕ್ಕೊಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

High level betting by many BJP members against Arun Kumar Puthila in Puttur, crores of loss. Many great leaders have lost in crores betting. Some have pawned thier gold, land and have done thier betting and are now in great loss.