ಬ್ರೇಕಿಂಗ್ ನ್ಯೂಸ್
14-05-23 05:56 pm Udupi Correspondent ಕರಾವಳಿ
ಕಾರ್ಕಳ, ಮೇ 14 : ಇದು ಬಿಜೆಪಿ ಸುನಿಲ್ ಕುಮಾರ್ ಗೆಲುವಲ್ಲ. ಅಕ್ರಮ ಹಣ, ಹೆಂಡ, ವಾಮಾಚಾರಕ್ಕೆ ಸಿಕ್ಕ ಗೆಲುವು. ಕಾರ್ಕಳದ ಮುಗ್ಧ ಜನತೆಗೆ ಸುನಿಲ್ ಕುಮಾರ್ ಆಮಿಷ ತೋರಿಸಿ ಯಾಮಾರಿಸಿದ್ದಾರೆ. ಸುನಿಲ್ ಇಷ್ಟು ಕೀಳು ಮಟ್ಟಕ್ಕೆ ಇಳೀತಾರೆ ಅಂದ್ಕೊಂಡಿರಲಿಲ್ಲ ಎಂದು ಕಾರ್ಕಳ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಟೀಕಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಕರ್ನಾಟಕದಲ್ಲಿ ಜನತೆ ಬದಲಾವಣೆ ಬಯಸುವ ಮೂಲಕ ಕಾಂಗ್ರೆಸ್ ಗೆ ಒಲವು ತೋರಿಸಿದ್ದಾರೆ. ಇನ್ನು ಐದು ವರ್ಷಗಳ ಕಾಲ ರಾಜ್ಯದಲ್ಲಿ ನಮ್ಮದೇ ಸರ್ಕಾರದ ಅಡಳಿ ನಡೆಸಲಿದೆ ಎಂದರು. ನನಗೆ ಮತ ಹಾಕಿದ ಎಲ್ಲಾ ಕಾರ್ಯಕರ್ತರಿಗೆ ಚಿರ ಋಣಿ. ಕಾಂಗ್ರೆಸ್ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ನಾನು ಸದಾ ಇದ್ದೇನೆ. ಇನ್ನು ಮುಂದೆ ನಮ್ಮಕಾರ್ಯಕರ್ತರ ತಂಟೆಗೆ ಬಂದ್ರೆ ನಾವು ಬಿಡಲ್ಲ.
ಕಾರ್ಕಳದಲ್ಲಿ ಸುನೀಲ್ ಕುಮಾರ್ ಇಷ್ಟು ಕೀಳು ಮಟ್ಟದ ರಾಜಕೀಯ ಮಾಡತ್ತಾರೆ ಅಂತ ಗೊತ್ತಿರಲಿಲ್ಲ.
ವಾಮವಾರ್ಗ ಮೂಲಕ ಗೆಲುವು ಸಾಧಿಸಿಕೊಂಡಿದ್ದಾರೆ. ಇಂದು ನಾವು ಸೋತು ಗೆದ್ದಿದ್ದೇವೆ ಅದ್ರೆ ಅವರು ಗೆದ್ದು ಸೋತಿದ್ದಾರೆ. ಅಧಿಕಾರ ಇರಲಿ ಇಲ್ಲದೇ ಇರಲಿ. ನಿಮ್ಮ ನೋವು ಕಷ್ಟಗಳಿಗೆ ಜೊತೆಯಾಗುವೆ ಎಂದು ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಅಡ್ಡ ಮತದಾನ ಮಾಡಿದ ಅಪ್ರಾಪ್ತ ಬಾಲಕನ ಭವಿಷ್ಯ ಹಾಳಾಗಬಾರದು ಎಂಬ ನಿಟ್ಟಿನಲ್ಲಿ ದೂರು ಕೊಟ್ಟಿಲ್ಲ. ಆದರೆ ಪ್ರತಿ ಮತಗಟ್ಟೆಗಳಲ್ಲಿ ತಲಾ 50 ಅಡ್ಡ ಮತ ಮಾಡುವಂತೆ ಕಾರ್ಕಳ ಶಾಸಕರು ತಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದರು. ಹೀಗೆ 10 ಸಾವಿರ ಮತಗಳನ್ನು ಅಡ್ಡ ದಾರಿ ಮೂಲಕ ಗಳಿಸಿದ್ದಾರೆ. ಕೋಟಿ ಕೋಟಿ ಹಣ ಸುರಿದು ಮತಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ತಿರುಪತಿ ಲಡ್ಡು, ಧರ್ಮಸ್ಥಳದ ಫೋಟೊ ಮುಟ್ಟಿಸಿ ಮತಗಳನ್ನು ನೀಡುವಂತೆ ಮಾನಸಿಕವಾಗಿ ಹೆದರಿಸಿ ಮತ ಪಡೆದಿದ್ದಾರೆ ಎಂದು ಆರೋಪಿಸಿದರು.
Sunil kumar victory in Karkala is through money, witchcraft and alcohol slams Karkala Congress candidate Uday Kumar Shetty.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 10:45 pm
HK News Desk
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
07-05-25 10:30 pm
Mangalore Correspondent
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm