ಬ್ರೇಕಿಂಗ್ ನ್ಯೂಸ್
12-05-23 05:42 pm Mangalore Correspondent ಕರಾವಳಿ
ಪುತ್ತೂರು, ಮೇ 12: ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಬಂಡಾಯ ಎದುರಿಸುತ್ತಿರುವುದರಿಂದ ಗೆಲ್ಲೋದು ಯಾರು ಅನ್ನುವ ಕುತೂಹಲ ಉಂಟಾಗಿದೆ. ಮತದಾನದ ಬಳಿಕ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲರೇ ಗೆಲ್ಲುತ್ತಾರೆ ಎನ್ನುವುದು ಕೆಲವು ಸಮೀಕ್ಷೆಗಳಲ್ಲಿ ಬಂದಿದ್ದು, ಜನರ ಆಸಕ್ತಿ ಕೆರಳಿಸಿದೆ. ಈ ನಡುವೆ, ಪುತ್ತೂರಿನಲ್ಲಿ ಬೆಟ್ಟಿಂಗ್ ಕೂಡ ಜೋರಾಗಿದ್ದು, ಅರುಣ್ ಪುತ್ತಿಲ ಪರವೇ ಬೆಟ್ಟಿಂಗ್ ಹೆಚ್ಚು ಕಟ್ಟುತ್ತಿದ್ದಾರೆ.
ಕ್ಷೇತ್ರದಾದ್ಯಂತ ಅರುಣ್ ಪುತ್ತಿಲ ಪರ ಭಾರೀ ಜನಬೆಂಬಲ ವ್ಯಕ್ತವಾಗಿರುವುದರಿಂದ ಜನರ ಮಾತಿನಲ್ಲಿ ಪುತ್ತಿಲರೇ ಗೆಲ್ಲುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಬಿಜೆಪಿ ಕಡೆಯ ಲೆಕ್ಕಾಚಾರದ ಪ್ರಕಾರ, ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎನ್ನುತ್ತಾರೆ. ಯಾಕಂದ್ರೆ, ಪುತ್ತಿಲರಿಗೆ ಮತ ಹಂಚಿಕೆಯಾಗುವುದು ಬಿಜೆಪಿಯಿಂದಲೇ. ಹಾಗಾಗಿ ಬಿಜೆಪಿ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಗೆ ಮತ ವಿಭಜನೆಯಾದಲ್ಲಿ ಅದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಲಾಭ ಆಗುವುದಲ್ಲವೇ ಎಂದು ಕೇಳುತ್ತಿದ್ದಾರೆ. ಆದರೆ ಕ್ಷೇತ್ರದ ಜನರ ನಾಡಿ ಮಿಡಿತ ಮತ ಎಣಿಕೆಯಂದೇ ಗೊತ್ತಾಗಲಿದೆ.
ಹಾಗೆ ನೋಡಿದರೆ, 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಪುತ್ತೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳು ಬಿಜೆಪಿ ಪರ ಬಿದ್ದಿದ್ದವು. ಮೋದಿ ಪರವಾಗಿ ಬಿದ್ದಿರುವ ಮತಗಳು 2018ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಬಿದ್ದಿರಲಿಲ್ಲ. ಈಗ ಪುತ್ತಿಲ ಕಡೆಯವರ ಪ್ರಕಾರ, ಬೂತ್ ಮಟ್ಟದ ಲೆಕ್ಕಾಚಾರದಲ್ಲಿ 70 ಸಾವಿರಕ್ಕಿಂತ ಹೆಚ್ಚು ಮತಗಳು ಬೀಳೋದು ಖಚಿತ ಎನ್ನುತ್ತಾರೆ. ಅದಕ್ಕಿಂತ ಹೆಚ್ಚು ಮತ ಬೀಳುವ ಸಾಧ್ಯತೆಯೂ ಇದೆ. ಪುತ್ತಿಲ ಪರ ಎದ್ದಿರುವ ಹವಾ ಕಾರಣದಿಂದಾಗಿ ಮೊನ್ನೆ ಚುನಾವಣೆ ದಿನ ಹೆಚ್ಚಿನ ಕಡೆಗಳಲ್ಲಿ ಬಿಜೆಪಿ ಬೂತ್ ಗಳಲ್ಲಿ ಜನ ಇಲ್ಲದಂತಾಗಿತ್ತು. ಕೆಲವು ಕಡೆ ಬಿಜೆಪಿ ಬೂತ್ ನಲ್ಲಿ ಕುಳಿತಿದ್ದವರು ಕೂಡ ಪುತ್ತಿಲರಿಗೇ ಓಟ್ ಹಾಕಿದವರಿದ್ದಾರಂತೆ. ಇದೆಲ್ಲ ಸತ್ಯವಾದರೆ, ಪುತ್ತೂರಿನಲ್ಲಿ ಪುತ್ತಿಲರದ್ದೇ ಗೆಲುವು ಅನ್ನುವುದಕ್ಕೆ ಸಂಶಯ ಇಲ್ಲ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸಿಗೆ ಕ್ಷೇತ್ರದಲ್ಲಿ ಬಿದ್ದಿರುವುದು 58 ಸಾವಿರ ಮತಗಳು. ಇವು ಕಟ್ಟರ್ ಕಾಂಗ್ರೆಸ್ ಮತಗಳಾಗಿದ್ದು ಇದನ್ನು ಹೊರತುಪಡಿಸಿ ಅಭ್ಯರ್ಥಿ ವೈಯಕ್ತಿಕ ವರ್ಚಸ್ಸಿನಿಂದ ಎಷ್ಟು ಮತ ಪಡೆಯುತ್ತಾರೋ, ಅದು ಕಾಂಗ್ರೆಸ್ ಗೆಲುವನ್ನು ನಿರ್ಧರಿಸುತ್ತದೆ. ಅಶೋಕ್ ರೈ ಬಗ್ಗೆ ಪಕ್ಷದ ಒಳಗಡೆಯೇ ಅಸಮಾಧಾನ ಇರುವುದು, ಚುನಾವಣೆ ವೇಳೆ ಅಶೋಕ್ ರೈ ಗನ್ ಹಿಡಿದ ವಿಡಿಯೋ ವೈರಲ್ ಆಗಿರುವುದು ಹಿನ್ನಡೆಯಾಗಿತ್ತು. ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಮತಗಳನ್ನು ಕಳಕೊಂಡರೆ, ಅವು ಪುತ್ತಿಲ ಪರವಾಗಿ ಬೀಳುವ ಸಾಧ್ಯತೆ ಇರುತ್ತದೆ.
Mangalore Bookies say gamblers betting huge on Arun Puthila win in Puttur.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm