ಸುರತ್ಕಲ್ ; ಸರ್ಕಾರಿ ಬಸ್ ಗೆ ಖಾಸಗಿ ಬಸ್ ಡಿಕ್ಕಿ , 30 ಮಂದಿಗೆ ಗಾಯ

12-05-23 04:11 pm       Mangalore Correspondent   ಕರಾವಳಿ

ಸರ್ಕಾರಿ ಬಸ್ ಗೆ ಹಿಂಬದಿಯಿಂದ ಬಂದ ಖಾಸಗಿ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ 30 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸುರತ್ಕಲ್ ಮುಕ್ಕದಲ್ಲಿ ನಡೆದಿದೆ.

ಮಂಗಳೂರು, ಮೇ 12: ಸರ್ಕಾರಿ ಬಸ್ ಗೆ ಹಿಂಬದಿಯಿಂದ ಬಂದ ಖಾಸಗಿ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ 30 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸುರತ್ಕಲ್ ಮುಕ್ಕದಲ್ಲಿ ನಡೆದಿದೆ.

ಮಳೆಗೆ ಎರಡು ಬಸ್ ಗಳು ಮಂಗಳೂರು ಕಡೆಗೆ ಸಂಚರಿಸುತ್ತಿತ್ತು.ಈ ವೇಳೆ ಖಾಸಗಿ ಬಸ್ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಹೋಗುತ್ತಿದ್ದ ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಘಟನೆಯಿಂದಾಗಿ ಎರಡೂ ಬಸ್ ಗಳಲ್ಲಿದ್ದ ಸುಮಾರು 30 ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಎಲ್ಲರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Mangalore Surathkal bus accident, private bus rams government bus at Mukka, 30 injured.