ಕದ್ರಿ ದೇವಸ್ಥಾನಕ್ಕೆ ಮೂವರು ಆಗಂತುಕರ ನುಗ್ಗಲು ಯತ್ನ ; ನಡುರಾತ್ರಿಯಲ್ಲಿ ಬೈಕ್ ಜೊತೆಗೇ ಅಂಗಣಕ್ಕೆ ನುಗ್ಗಿದ ಯುವಕರು!

12-05-23 11:16 am       Mangalore Correspondent   ಕರಾವಳಿ

ಮಂಗಳೂರಿನ ಪ್ರಸಿದ್ಧ ಕದ್ರಿ ದೇವಸ್ಥಾನಕ್ಕೆ ನಿನ್ನೆ ರಾತ್ರಿ ಮೂವರು ಯುವಕರು ನುಗ್ಗಲು ಯತ್ನಿಸಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಮಂಗಳೂರು, ಮೇ 12: ಮಂಗಳೂರಿನ ಪ್ರಸಿದ್ಧ ಕದ್ರಿ ದೇವಸ್ಥಾನಕ್ಕೆ ನಿನ್ನೆ ರಾತ್ರಿ ಮೂವರು ಯುವಕರು ನುಗ್ಗಲು ಯತ್ನಿಸಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬೈಕ್ ನಲ್ಲಿ ಬಂದಿದ್ದ ಮೂವರು ಯುವಕರು ಬೈಕನ್ನು ದೇವಾಲಯದ ಅಂಗಣಕ್ಕೆ ನುಗ್ಗಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಎಲ್ಲಿಯವರು, ಯಾಕಾಗಿ ಚಪ್ಪಲಿ ಹಾಕಿ ಒಳಗೆ ಬಂದಿದ್ದೀರಿ. ಬೈಕ್ ಹಿಡ್ಕೊಂಡೇ ಒಳಗೆ ಬಂದಿದ್ದೀರಲ್ಲಾ ಎಂದು ಕೇಳಿದ್ದಾರೆ. ನಾವು ಅಸೈಗೋಳಿಯವರು. ಕಾಟಿಪಳ್ಳ ಹೋಗುತ್ತಿದ್ದೇವೆ ಎಂದಿದ್ದಾರೆ. ಕಳ್ಳತನಕ್ಕೆ ಬಂದಿರೋದಾ ಎಂಬ ಪ್ರಶ್ನೆಗೆ, ಉತ್ತರ ನೀಡುತ್ತಿರಲಿಲ್ಲ. ಅಸೈಗೋಳಿ ನಿವಾಸಿಗಳೆಂದು ಹೇಳಿಕೊಂಡಿದ್ದು ಹಸನ್ ಶಾಹಿನ್, ಜಾಫರ್ ಹಾಗೂ ಫಾರೂಕ್‍ ಎಂದು ಗುರುತಿಸಲಾಗಿದೆ. ಬಳಿಕ ಬಜರಂಗದಳ ಕಾರ್ಯಕರ್ತರು ಸೇರಿ ಮೂವರನ್ನು ಕದ್ರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಕಾಟಿಪಳ್ಳಕ್ಕೆ ಹೊರಟ ತಾವು ಜಿಪಿಎಸ್ ಹಾಕಿಕೊಂಡು ಬೈಕಿನಲ್ಲಿ ಹೋಗುತ್ತಿದ್ದೆವು. ದಾರಿ ತಪ್ಪಿ ಇಲ್ಲಿಗೆ ಬಂದೆವು’ ಎಂದೂ ಹೇಳಿಕೊಂಡಿದ್ದಾರೆ. ಆದರೆ ಮೂವರು ಯುವಕರು ಕೂಡ ಒಂದೇ ಪ್ರಾಯದವರಾಗಿದ್ದು 18-19ರ ಹಾಗಿದ್ದಾರೆ‌. ಆರು ತಿಂಗಳ ಹಿಂದೆ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್, ಕದ್ರಿ ದೇಗುಲದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ. ಇದೀಗ ರಾತ್ರಿ ವೇಳೆ ಆಗಂತುಕರ ರೀತಿ ಬಂದು ಯುವಕರು ಅಂಗಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದು ಇದರ ಬಗ್ಗೆ ಸಂಶಯ ವ್ಯಕ್ತವಾಗಿದೆ.

Three youths of different community, who arrived on a bike on Thursday night and were roaming suspiciously in the campus of Kadri temple, were handed over to police by locals.